ಇಂಧನ ದರ ಕಡಿಮೆ ಮಾಡಲು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹ

1 Min Read
ಇಂಧನ ದರ ಕಡಿಮೆ ಮಾಡಲು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹ

ಮೈಸೂರು: ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಿಸಿರುವುದನ್ನು ಕೈ ಬಿಡಬೇಕು ಎಂದು ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅನೇಕ ಗ್ಯಾರಂಟಿ, ಕೊಡುಗೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದು ಜನತೆಗೆ ಕಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಣ್ಣು, ತರಕಾರಿ, ಹಾಲು ಮತ್ತಿತರ ಅನೇಕ ಪದಾರ್ಥಗಳು ದುಬಾರಿಯಾಗಿ ಜನ ಜೀವನ ಮಾಡಲು ತುಂಬ ತೊಂದರೆಯಾಗಿ, ಕಷ್ಟಕ್ಕೆ ಸಿಲುಕುತ್ತಾರೆ. ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ, ಆಸ್ತಿ ಕಂದಾಯ, ವಾಹನಗಳ ನೋಂದಣಿ ಶುಲ್ಕ, ಛಾಪಾ ಕಾಗದ ಬೆಲೆ ಈಗಾಗಲೇ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಂದು ಪದಾರ್ಥಕ್ಕೂ ಜಿಎಸ್‌ಟಿ ಬೆಂಬಿಡದೇ ಕಾಡುತ್ತಿದೆ. ಹಾಗಾಗಿ ಆರ್ಥಿಕ ಹೊರೆ ಕಡಿಮೆ ಮಾಡಲು ಬೆಲೆ ಏರಿಕೆ ಪರಿಶೀಲಿಸಿ ಕೈ ಬಿಡಬೇಕು ಎಂದು ಕೋರಿದ್ದಾರೆ.

See also  ಈ ಬಾರಿ ಕೊಹ್ಲಿಯಿಂದ ಇದು ಸಾಧ್ಯವಾಗಲ್ಲ! ಮತ್ತೆ ವಿರಾಟ್​ ವಿರುದ್ಧ ಮುಗಿಬಿದ್ದ ಅಂಬಟಿ ರಾಯುಡು
Share This Article