Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಚರ್ಚೆಗೆ ವೇದಿಕೆ ನಮ್ಮ ಆಪ್

Wednesday, 11.07.2018, 3:03 AM       No Comments

|ಅವಿನಾಶ್ ಜೈನಹಳ್ಳಿ ಮೈಸೂರು

ಫೇಸ್​ಬುಕ್, ಟ್ವಿಟರ್​ನಿಂದ ಮಾನಸಿಕವಾಗಿ ಬೇಸತ್ತಿರುವ ಜನರಿಗಾಗಿಯೇ ಒಂದು ಪರ್ಯಾಯ ಆಪ್ ಬಂದಿದೆ. ಅದೇ ಹೊಸತನದಿಂದ ಕೂಡಿರುವ ‘ನಮ್ಮ ಆಪ್’…!

‘ಅಡ್ಡ ಹೆಸರಿನಲ್ಲಿ ಮನಸ್ಸು ಬಿಚ್ಚಿ ಮಾತಾಡಿ, ಎಲ್ಲರನ್ನೂ ತಲುಪಿ!’ ಎಂಬ ಟ್ಯಾಗ್​ಲೈನ್​ನೊಂದಿಗೆ ವಿಭಿನ್ನವಾಗಿರುವ ಈ ಆಪ್ ಸಿದ್ಧಪಡಿಸಿದವರು ಮೈಸೂರಿನ ಇಂಜಿನಿಯರ್​ಗಳಾದ ಬಿ.ಆರ್. ಕಿರಣ್ ಮತ್ತು ವೈ.ಎಸ್. ಅಲಕನಂದಾ.

ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡದಲ್ಲೇ ಸಂವಹನ ನಡೆಸಲು ವೇದಿಕೆಯಾಗಿರುವ ಈ ಆಪ್ ದೇಶದ ಮೊದಲ ಸಾಮಾಜಿಕ ಪ್ರಕಾಶನ ಅಪ್ಲಿಕೇಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯಕ್ತಿ ಕೇಂದ್ರಿತ ಫೋಟೋ, ಚರ್ಚೆಗಳನ್ನು ಹೊರತುಪಡಿಸಿ ವಿಷಯ ಕೇಂದ್ರಿತ ಚರ್ಚೆ, ಪೋಸ್ಟ್​ಗಳನ್ನು ಅಪ್​ಲೋಡ್ ಮಾಡುವುದೇ ಈ ಹೊಸ ಆಪ್​ನ ವಿಶೇಷ. ಫೇಸ್​ಬುಕ್ ಹಾಗೂ ಟ್ವಿಟರ್​ಗಳಿಂದು ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾಗಿದ್ದು, ಮೊಬೈಲ್ ಅಪ್ಲಿಕೇಷನ್​ಗಳಾಗಿಯೂ ಖ್ಯಾತಿ ಗಳಿಸಿವೆ. ಆದರೆ, ಫೇಸ್​ಬುಕ್ ಹಾಗೂ ಟ್ವಿಟರ್ ಬಳಸುತ್ತಿರುವ ಜನರಿಗೆ ಅವುಗಳಿಂದ ಮಾನಸಿಕ ಹಾಗೂ ಸಾಮಾಜಿಕ ತೊಂದರೆಗಳು ಹೆಚ್ಚಾಗುತ್ತಿವೆ.

ಇವು ಎಷ್ಟೇ ಖ್ಯಾತಿ ಗಳಿಸಿದರೂ, ಅವುಗಳದ್ದೇ ಆದ ಮಿತಿಗಳಿವೆ. ಫೇಸ್​ಬುಕ್ ಅನ್ನು ಸೇಹಿತರ ಜತೆ ಸಂವಹನ ಮಾಡಲು , ಟ್ವಿಟರ್ ಅನ್ನು ಸೆಲೆಬ್ರಿಟಿಗಳ ಜತೆ ಸಂಹವನ ನಡೆಸಲು ಸಾಮಾನ್ಯವಾಗಿ ಬಳಸುತ್ತೇವೆ.

ಫೇಸ್​ಬುಕ್​ನಲ್ಲಿ ನಾವು ಪ್ರಕಟಿಸುವ ಪೋಸ್ಟ್​ಗಳನ್ನು ಸ್ನೇಹಿತರು ಮಾತ್ರ ನೋಡಬಲ್ಲರು. ಆದರೆ, ಎಲ್ಲ ಸ್ನೇಹಿತರಿಗೂ ಈ ಪೋಸ್ಟ್​ಗಳು ಕಾಣಿಸುವುದಿಲ್ಲ. ಫೇಸ್​ಬುಕ್ ಮೂಲಕ ಬಳಕೆದಾರರು ತಮ್ಮನ್ನು ತಾವು ಹೊಗಳಿಕೊಳ್ಳುತ್ತಾರೆ. ತಮ್ಮಲ್ಲಿರುವ ಒಳ್ಳೆಯದನ್ನು ಮಾತ್ರ ತೋರಿಸಿಕೊಳ್ಳುತ್ತಾರೆ. ಸುಂದರವಾದ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಹೀಗೆ ಪರಸ್ಪರರ ಫೋಟೋ ನೋಡಿಕೊಂಡು, ಒಳ್ಳೆಯ ವಿಷಯಗಳನ್ನು ತಿಳಿದು ತೃಪ್ತಿಪಡುತ್ತಾರೆ. ಇಂಥವರು ಮಾತ್ರವಲ್ಲದೆ, ’ನನ್ನ ಜೀವನ ಹೀಗೆ ಇಲ್ಲವಲ್ಲ. ನನ್ನ ಫೋಟೋ ಇಷ್ಟು ಸುಂದರ ಇಲ್ಲವಲ್ಲ’ ಎಂದು ಬೇಸರ ಪಟ್ಟುಕೊಳ್ಳುವವರೂ ಹಲವರಿದ್ದಾರೆ.

ಇನ್ನು ಟ್ವಿಟರ್​ನಲ್ಲಿ ಸಾಮಾನ್ಯ ಜನರ ಪಾತ್ರ ಬರೀ ಲೈಕ್ ಮಾಡುವುದು ಮತ್ತು ಷೇರ್ ಮಾಡುವುದು ಅಷ್ಟೆ ಎಂಬಂತಾಗಿದೆ. ರಾಜಕಾರಣಿಗಳು, ತಾರೆಯರು ಮತ್ತು ಇತರ ಸೆಲೆಬ್ರಿಟಿಗಳು ಮಾತ್ರ ಟ್ವಿಟರ್​ನ ಫಲಾನುಭವಿಗಳು. ಇವರ ಫಾಲೋಯರ್ಸ್ ಲಕ್ಷಾಂತರ ಮಂದಿ. ಇವರ ಪೋಸ್ಟ್​ಗಳಿಗೆ ಸಾವಿರಾರು ಜನ ಪ್ರತಿಕ್ರಿಯಿಸುತ್ತಾರೆ. ಆದರೆ, ಸಾಮಾನ್ಯ ಜನರಿಗಿರುವುದು ಬೆರಳೆಣಿಕೆಯಷ್ಟು ಫಾಲೋಯರ್ಸ್ ಮಾತ್ರ. ಇವರು ಮಾಡುವ ಟ್ವೀಟ್​ಗಳನ್ನು ನೋಡುವವರೇ ಇರುವುದಿಲ್ಲ. ಕೇವಲ ಸೆಲೆಬ್ರಿಟಿಗಳ ಫಾಲೋಯರ್​ಗಳಾಗಿ, ಅವರ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುತ್ತ ಇರಬೇಕಾದಂತಹ ಸ್ಥಿತಿ ಇದೆ. ಈ ಎರಡೂ ಸಾಮಾಜಿಕ ಜಾಲತಾಣಗಳ ಮಿತಿಗಳನ್ನು ಗಮನಿಸಿದ ಕಿರಣ್ ಹಾಗೂ ಅಲಕನಂದಾ ಅವರು ಜನಸಾಮಾನ್ಯರಿಗೆ ಆಪ್ತವಾದ, ಕನ್ನಡದಲ್ಲೇ ಬರೆಯಲು ಅವಕಾಶ ಇರುವಂಥ ಸಾಮಾಜಿಕ ಪ್ರಕಾಶನ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.

ನಮ್ಮ ಆಪ್ ವಿಶೇಷ

ನಮ್ಮ ಆಪ್​ನಲ್ಲಿ ನಮ್ಮ ಅಡ್ಡ ಹೆಸರಿನೊಂದಿಗೆ ಖಾತೆ ತೆರೆಯಬೇಕಾಗುತ್ತದೆ. ಬಳಕೆದಾರರು ಇಲ್ಲಿ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ಜತೆಗೆ ತಮ್ಮ ಅಸ್ತಿತ್ವವನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಅವಕಾಶವೂ ಇದೆ. ಫೇಸ್​ಬುಕ್​ನಲ್ಲಿ ಪ್ರತಿಯೊಬ್ಬ ಬಳಕೆದಾರರ ನ್ಯೂಸ್ ಫೀಡ್ ಅವರವರ ಆಯ್ಕೆ, ಬಳಕೆಯ ವಿಧಾನ, ಇಷ್ಟಗಳಿಗೆ ತಕ್ಕಂತೆ ಪ್ರತ್ಯೇಕವಾಗಿರುತ್ತದೆ. ಆದರೆ, ನಮ್ಮ ಆಪ್ ಹಾಗಲ್ಲ. ಇದು ವೃತ್ತಪತ್ರಿಕೆಯಿದ್ದಂತೆ. ಎಲ್ಲರಿಗೂ ಕಾಣಿಸುವುದು ಒಂದೇ. ಯಾವುದೇ ಬಳಕೆದಾರ ಪೋಸ್ಟ್ ಮಾಡಿದರೂ ಅದು, ನಮ್ಮ ಆಪ್ ಬಳಕೆದಾರರಿಗೆಲ್ಲ ಸಿಗುತ್ತದೆ. ಫೇಸ್​ಬುಕ್ ಹಾಗೂ ಟ್ವಿಟರ್​ಗಳಿಗೆ ಇರುವ ಮಿತಿಯನ್ನು ಮೀರಿ ಹೊಸ ಸ್ವರೂಪ, ಗುಣಲಕ್ಷಣಗಳನ್ನು ಇದು ಹೊಂದಿದೆ. ಇಲ್ಲಿ ಫಾಲೋಯರ್ಸ್ ಅಥವಾ ಫ್ರೆಂಡ್ಸ್ ಎಂಬ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಇದು ಸಾಮಾಜಿಕ ಜಾಲತಾಣ ಅಲ್ಲ; ಇದೊಂದು ಸಾಮಾಜಿಕ ಪ್ರಕಾಶನ ಎನ್ನಬಹುದು.

ನಮ್ಮ ಆಪ್​ನಲ್ಲಿ ವ್ಯಕ್ತಿಗಿಂತ ವಿಷಯ ಮುಖ್ಯ. ಇಲ್ಲಿ ಬಳಕೆದಾರರ ಫೋಟೋ ಅಪ್​ಲೋಡ್ ಮಾಡುವುದನ್ನು ನಿಷೇಧಿಸಲಾಗಿದೆ. ಮಾಡಿದರೂ, ಅದನ್ನು ತೆಗೆದು ಹಾಕುತ್ತಾರೆ. ಏನಿದ್ದರೂ, ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು. ಇಲ್ಲಿ ಎಲ್ಲರೂ ಅಡ್ಡಹೆಸರಿನಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವುದರಿಂದ ಫೇಸ್​ಬುಕ್ ಹಾಗೂ ಟ್ವಿಟರ್​ಗಳಲ್ಲಿ ನಡೆಯುವಂತೆ ಗುಂಪುಗಾರಿಕೆಗೆ ಅವಕಾಶ ಇರುವುದಿಲ್ಲ. ಎಲ್ಲ ಅಭಿಪ್ರಾಯದವರೂ ತಮ್ಮ ದೃಷ್ಟಿಕೋನವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಮತ್ತು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬಹುದು. ನಿಜಕ್ಕೂ ಎಲ್ಲರೂ ಕೂಡಿ ರ್ಚಚಿಸಬಹುದು.

ಪೋಸ್ಟ್​ಗಳು ಕೇವಲ ಬರಹ, ಫೋಟೊ ಅಥವಾ ವಿಡಿಯೋ ಸಹ ಆಗಿರಬಹುದು. ಪೋಸ್ಟ್ ಯಾರು ಹಾಕಿದರು ಅನ್ನುವುದು ಮುಖ್ಯವಲ್ಲ, ಅದರಲ್ಲಿ ಏನಿದೆ ಅನ್ನುವುದು ಮುಖ್ಯ. ಹಾಗಾಗಿ, ಇಲ್ಲಿ ಚರ್ಚೆಗೆ ಸಾಕಷ್ಟು ಅವಕಾಶವಿದೆ. ಪೋಸ್ಟ್ ಮಾಡುವಾಗಲೇ ಲಭ್ಯವಿರುವ, ಬೇಕಾದ ವಿಷಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪೋಸ್ಟ್ ಮಾಡಬೇಕು. ಅಂತೆಯೇ, ಪೋಸ್ಟ್ ನೋಡುವಾಗಲೂ ಬೇಕಾದ ವಿಷಯವನ್ನು ಆಯ್ಕೆಗೆ ಅವಕಾಶವಿದೆ. ಉದಾಹರಣೆಗೆ ಆರೋಗ್ಯ, ತಮಾಷೆ, ಪ್ರೀತಿ ಪ್ರೇಮ, ಸಂಬಂಧಗಳು ಇತ್ಯಾದಿ.

ಇಲ್ಲಿ ಅಪ್​ವೋಟ್, ಡೌನ್​ವೋಟ್ ಎಂಬ ಆಯ್ಕೆಗಳಿವೆ. ಆಪ್ ಬಳಕೆದಾರರು ಪೋಸ್ಟ್ ಮಾಡುವ ಹಾಗೂ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಬಳಕೆದಾರ ಪ್ರಕಟಿಸಿದ್ದನ್ನು ಇತರ ಬಳಕೆದಾರರು ಓದಿ ಅಪ್​ವೋಟ್ ಮಾಡಿದರೆ ಆ ಪೋಸ್ಟ್ ಅಪ್ಲಿಕೇಷನ್ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದುಕೊಳ್ಳುತ್ತದೆ. ಇಷ್ಟಪಡದೆ ಡೌನ್ ವೋಟ್ ಮಾಡಿದರೆ ಕೆಳಗೆ ಹೋಗುತ್ತದೆ. ವೋಟ್ ಆಧಾರದ ಮೇಲೆ ಪೋಸ್ಟ್​ಗಳ ಗುಣಮಟ್ಟ ನಿರ್ಧಾರವಾಗುತ್ತದೆ. ಹೆಚ್ಚು ಡೌನ್ ವೋಟ್ ಆದ ಪೋಸ್ಟ್​ಗಳನ್ನು ತೆಗೆಯಲಾಗುತ್ತದೆ. ಆದರೆ, ಫೇಸ್​ಬುಕ್ ಹಾಗೂ ಟ್ವಿಟರ್​ಗಳಲ್ಲಿ ಬರುವ ಪೋಸ್ಟ್​ಗಳು ಗುಣಮಟ್ಟದ ಕ್ರಮದಲ್ಲಿ ಇರುವುದಿಲ್ಲ.

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯ

ನಮ್ಮ ಆಪ್ ಆಂಡ್ರಾಯ್್ಡ ಫೋನ್​ಗಳಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಪ್ಲೇ ಸ್ಟೋರ್​ಗೆ ಭೇಟಿ ಮಾಡಿ NammApp ಎಂದು ಹುಡುಕಬೇಕು ಅಥವಾ 18001235906 ನಂಬರ್​ಗೆ ಮಿಸ್ಡ್ ಕಾಲ್ ನೀಡಿದರೆ ಡೌನ್​ಲೋಡ್ ಕೊಂಡಿ ಇರುವ ಎಸ್​ಎಂಎಸ್ ಬರುತ್ತದೆ. ಹೆಚ್ಚಿನ ಮಾಹಿತಿಗೆ ಕಿರಣ್ (ಮೊಬೈಲ್ ಫೋನ್ 8105579948) ಅವರನ್ನು ಸಂರ್ಪಸಬಹುದು.

Leave a Reply

Your email address will not be published. Required fields are marked *

Back To Top