ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವಿನ ನಗೆ ಬೀರಿದರು. ಇವರು ಬೆಳವಾಡಿ ಪೈ.ಮಹದೇವು ಅವರನ್ನು 3.03 ನಿಮಿಷಗಳಲ್ಲಿ ಚಿತ್ ಮಾಡಿದರು.

ಇನ್ನೊಂದು ಕುಸ್ತಿಯಲ್ಲಿ ಮಹದೇವಪುರ ಪೈ.ಶ್ರೀನಿವಾಸ್ 2.03 ನಿಮಿಷದಲ್ಲೇ ಅರಳಕುಪ್ಪೆ ಪೈ.ಕೇಶವಕುಮಾರ್ ಅವರನ್ನು ಸೋಲಿಸಿದರು. ಕೆನ್ನಾಳು ಪೈ.ಮಹದೇವು ವಿರುದ್ಧ ಕಳಲೆ ಪೈ.ಸತೀಶ್ ಗೆಲುವು ಪಡೆದರು.

ಉಳಿದ ಪಂದ್ಯದಲ್ಲಿ ರಮ್ಮನಹಳ್ಳಿ ಪೈ.ವಿವೇಕ್ ವಿರುದ್ಧ ವೀರನಗೆರೆ ಪೈ.ಸೋಮಶೇಖರ್, ಯಡ್ಡಹಳ್ಳಿ ಪೈ.ಸಂಜಯ್ ವಿರುದ್ಧ ನಜರ್‌ಬಾದ್ ಪೈ.ಸುಹಾಸ್, ಕನಕ ಪುರ ಪೈ.ಪ್ರಶಾಂತ್ ವಿರುದ್ಧ ಎಂ.ಜಿ.ಕೊಪ್ಪಲು ಪೈ.ಮಂಜು, ಬೆಳಗಾವಿಯ ಪೈ.ಯಶ್ವಂತ್ ವಿರುದ್ಧ ಸಯ್ಯದ್ ನೂರುವುಲ್ಲಾ ಗರಡಿಯ ಛೋಟಾ ಫರ್ಪಿಜ್, ಶಿಕಾರಿಪುರ ಪೈ.ಎಂ.ಕೆ.ರಾಜು ವಿರುದ್ಧ ಕೈಲಾಸಪುರ ಪೈ.ನಾಗರಾಜ್, ಮೇಳಾಪುರ ಪೈ.ಮಂಜು ವಿರುದ್ಧ ಮಜ್ಜಿಗೆಪು ಪೈ.ಯತೀಶ್, ನರಸೀಪುರ ಪೈ.ರವಿ ವಿರುದ್ಧ ಆಡಗೋಡಿ ಪೈ.ಪುಟ್ಟರಾಜು, ಪಾಂಡವಪುರ ಪೈ.ಸತ್ಯರಾಜ್ ವಿರುದ್ಧ ಕಳಲೆ ಪೈ.ರವಿ, ಮರಟಿ ಕ್ಯಾತನಹಳ್ಳಿ ಪೈ.ಶಶಾಂಕ್ ವಿರುದ್ಧ ಹೊಸಹಳ್ಳಿ ಪೈ.ಸಂತೋಷ್, ಮೆಲ್ಲಹಳ್ಳಿ ಪೈ.ಪ್ರದೀಪ್ ನಾಯಕ್ ವಿರುದ್ಧ ಕಳಲೆ ಪೈ.ಮಂಜುನಾಥ್, ಹುಣಸೂರು ಪೈ.ಚಂದ್ರು ವಿರುದ್ಧ ಕ್ಯಾತಮಾರನಹಳ್ಳಿ ಪೈ.ರಾಜೇಶ್, ಗಂಜಾಂ ಪೈ.ಜಯಂತ್ ವಿರುದ್ಧ ಮೈಸೂರು ಪೈ.ಮೆಕೆಲ್ ರಾಜು, ರಾಮನಗರ ಪೈ.ಬುಲೆಟ್ ಬಸ್ಯಾ ವಿರುದ್ಧ ಮೇಳಾಪುರ ಪೈ.ಶ್ರೀಕಂಠು, ಕ್ಯಾತಮಾರನಹಳ್ಳಿ ಪೈ.ಮಾದೇಶ್ ವಿರುದ್ಧ ಚಾಮುಂಡಿ ವಿಹಾರ ಕ್ರೀಡಾಂಗಣ ಪೈ.ಮಹದೇವು, ಗಂಜಾಂ ಪೈ.ಪುನೀತ್ ವಿರುದ್ಧ ಮಳವಳ್ಳಿ ಪೈ.ಹರೀಶ್, ಕಳಲೆ ಪೈ.ಚಿಕ್ಕನಾಯಕ ವಿರುದ್ಧ ರಮ್ಮನಹಳ್ಳಿ ಪೈ.ಸತ್ಯ, ನಜರ್‌ಬಾದ್ ಪೈ.ಶರತ್ ವಿರುದ್ಧ ಕನಕಪುರ ಪೈ.ನಾಗೇಂದ್ರ, ಮೈಸೂರು ಪೈ.ರಾಜೇಶ್ ವಿರುದ್ಧ ಕನಕಪುರ ಪೈ.ದರ್ಶನ್, ಪಾಂಡವಪುರ ಪೈ.ಚಂದ್ರು ವಿರುದ್ಧ ಕ್ಯಾತಮಾರನಹಳ್ಳಿ ಪೈ. ಸಿದ್ದರಾಜು ಗೆಲುವು ಪಡೆದರು.