ವಾರ್ಷಿಕ ಮುಕ್ತ ಗಾಲ್ಫ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಮೈಸೂರು: ಸೈಕಲ್ ಪ್ಯೂರ್ ಅಗರಬತ್ತೀಸ್‌ನ ತಯಾರಕರಾದ ಎನ್.ಆರ್. ಸಮೂಹದಿಂದ ನಗರದ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಮುಕ್ತ ಗಾಲ್ಫ್ ಚಾಂಪಿಯನ್‌ಶಿಪ್‌ಗೆ ಎನ್. ಆರ್. ಗ್ರೂಪ್‌ನ ಪಾಲುದಾರರಾದ ಅರ್ಜುನ್ ರಂಗಾ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಗಾಲ್ಫ್ ಆಟಗಾರರಿಗೆ ಒಂದು ವೇದಿಕೆ ಒದಗಿಸುವ ಜತೆಗೆ ಗಾಲ್ಫ್ ಆಟಕ್ಕೂ ಒಂದು ಉತ್ತೇಜನ ನೀಡುವುದು ಎನ್‌ಆರ್ ಗಾಲ್ಫ್ ಚಾಂಪಿಯನ್ ಶಿಫ್ ಅನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ಈ ಪಂದ್ಯಾವಳಿಗೆ ಕಳೆದ ವರ್ಷಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಕಷ್ಟು ಪ್ರತಿಭೆಗಳನ್ನು ಬೆಳಕಿಗೆ ತಂದಿರುವುದು ಸಂತಸವಾಗಿದೆ ಎಂದರು.

ಜೆಡಬ್ಲ್ಯೂಜಿಸಿ ಅಧ್ಯಕ್ಷ ಸಿ.ಎಸ್.ರವಿಶಂಕರ್, ಗೌರವ ಕಾರ್ಯದರ್ಶಿ ಎಚ್.ಡಿ. ತಿಮ್ಮಪ್ಪಗೌಡ, ಡಾ. ವೆಂಕಟೇಶ್ ಜೋಶಿ, ಗೌರವ ಖಜಾಂಚಿ, ಡಾ ಎಸ್. ಎಲ್.ನಾರಾಯಣ್, ಸಮಿತಿ ಸದಸ್ಯ, ಬಿ. ರವೀಂದ್ರನಾಥ ರೆಡ್ಡಿ, ಎ.ಅನಂತ ಇತರರು ಹಾಜರಿದ್ದರು.

‘ಎನ್‌ಆರ್ ಓಪನ್ ಚಾಂಪಿಯನ್‌ಶಿಫ್’ ಹೆಸರಿನ ಎರಡು ದಿನಗಳ ರಾಜ್ಯಮಟ್ಟದ ಪಂದ್ಯದಲ್ಲಿ ಮೈಸೂರು, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಊಟಿ ಮತ್ತು ಕೊಡೈಕೆನಾಲ್ ಸೇರಿದಂತೆ ವಿವಿಧ ಭಾಗಗಳ ಸುಮಾರು 200ಕ್ಕೂ ಹೆಚ್ಚು ಗಾಲ್ಫ್ ಆಟಗಾರರು ಭಾಗವಹಿಸಿದ್ದಾರೆ. ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಆಟಗಾರರು 17 ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.