ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

ಮೈಸೂರು: ಯಾವುದೇ ಸ್ಪರ್ಧೆಯಲ್ಲಿ ಸೋತರೂ ಮುಂದಿನ ಬಾರಿ ಗೆಲ್ಲುವ ಅವಕಾಶ ಇರುತ್ತದೆ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢಶಿಕ್ಷಣ ಮತ್ತು ಮೈನಾರಿಟಿ ನಿರ್ದೇಶಕಿ ಜೊಹರಾ ಜಬೀನ್ ಮಾತನಾಡಿದರು.

ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ನಜೀರ್ ಅಹ್ಮದ್ ಉದ್ಘಾಟಿಸಿದರು. ಉಪಾಧ್ಯಕ್ಷ ಜಿ.ನಟರಾಜ್, ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ಚಂದ್ರಿಕಾ ಸುರೇಶ್, ಮಾದೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಮತಾ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಶಿಕ್ಷಣಾಧಿಕಾರಿ, ಡಿ.ಉದಯ್ ಕುಮಾರ್ ಇತರರು ಇದ್ದರು.

ಲ್ಯಾಪ್‌ಟಾಪ್ ವಿತರಣೆ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಅತ್ಯಧಿಕ ಅಂಕಗಳನ್ನು ಪಡೆದ 12 ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಲ್ಯಾಪ್‌ಟಾಪ್ ವಿತರಿಸಲಾಯಿತು.

ಜಿಲ್ಲಾ ಮಟ್ಟ: ಕೆ.ಸೋನಾ (ಸರ್ಕಾರಿ ಪ್ರೌಢಶಾಲೆ, ಮಾದಾಪುರ, ಎಚ್.ಡಿ.ಕೋಟೆ), ಸಯೀದಾ ಮಿಸ್ಬಾ (ಸರ್ಕಾರಿ ಜೂನಿಯರ್ ಕಾಲೇಜು, ಪೀಪಲ್ಸ್ ಪಾರ್ಕ್, ನಜರಾಬಾದ್), ಅಪೀತಾ ನದಾಫ (ಸರ್ಕಾರಿ ಪ್ರೌಢಶಾಲೆ, ಪಡುವಾರಹಳ್ಳಿ. ಮೈಸೂರು), ಮೈಸೂರು ಗ್ರಾಮಾಂತರ ವಿಭಾಗ: ಎಚ್.ಎಂ.ಮಹೇಶ್ವರಿ (ಸರ್ಕಾರಿ ಪ್ರೌಢಶಾಲೆ, ಹಂಚ್ಯ), ಆರ್.ಎಂ.ಮಹದೇವಸ್ವಾಮಿ (ಸರ್ಕಾರಿ ಪ್ರೌಢಶಾಲೆ, ಕೆರಗರಹಳ್ಳಿ, ಜಯಪುರ ಹೋಬಳಿ), ಎ.ವೈಷ್ಣವಿ (ಸರ್ಕಾರಿ ಪ್ರೌಢಶಾಲೆ, ಇಲವಾಲ).

ಮೈಸೂರು ದಕ್ಷಿಣ ವಿಭಾಗ: ಡಿ.ಭರತ್ (ಮಹಾರಾಜ ಜೂನಿಯರ್ ಕಾಲೇಜು, ಮೈಸೂರು), ಎನ್.ಶೀಬಾ (ಮಹಾರಾಣಿ ಜೂನಿಯರ್ ಕಾಲೇಜು, ಮೈಸೂರು), ಎನ್.ಮಹಾಲಕ್ಷ್ಮೀ(ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿ) ಮೈಸೂರು ಉತ್ತರ: ಎಸ್.ನವೀದ (ಸರ್ಕಾರಿ ಜೂನಿಯರ್ ಕಾಲೇಜು. ಪೀಪಲ್ಸ್ ಪಾರ್ಕ್), ಮೊಹಮ್ಮದ್ ಸಲ್ಮಾನ್ (ಮಹಾರಾಜ ಜೂನಿಯರ್ ಕಾಲೇಜು, ನಜರಾಬಾದ್), ಅಮ್ಜದ್ ಖಾನ್ (ಸರ್ಕಾರಿ ಪ್ರೌಢಶಾಲೆ, ರಾಜೇಂದ್ರ ನಗರ)

1,734 ಸ್ಪರ್ಧಿಗಳು:  ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ 51 ಸ್ಪರ್ಧಿಗಳಂತೆೆ 1,734 ಸ್ಪರ್ಧಿಗಳು ಹಾಗೂ ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ 5 ಜನರಂತೆ(ನೋಡಲ್ ಅಧಿಕಾರಿಗಳು + ಶಿಕ್ಷಕರು) 170 ನೋಡಲ್ ಅಧಿಕಾರಿಗಳು ಮತ್ತು ಶಿಕ್ಷಕರು ಆಗಮಿಸಿದ್ದಾರೆ. ಮೊದಲ ದಿನವಾದ ಶನಿವಾರ ನಾಟಕ, ನೃತ್ಯ, ಛದ್ಮವೇಷ, ಭರತನಾಟ್ಯ ಮತ್ತಿತರ ಸ್ಪರ್ಧೆಗಳು ನಡೆದವು.