25.1 C
Bangalore
Friday, December 6, 2019

ಒಳಬೇಗುದಿಯಿಂದ ಮಂಕಾದ ಜೆಡಿಎಸ್

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

ಮಂಜುನಾಥ ಟಿ.ಭೋವಿ ಮೈಸೂರು
ಒಳಬೇಗುದಿ, ಬಂಡಾಯದ ಬಿಸಿಯಿಂದ ಮಂಕಾದ ಜೆಡಿಎಸ್, ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅವಕಾಶ ವನ್ನು ತಪ್ಪಿಸಿಕೊಂಡಿದೆ!
ಆದರೂ, ಕಳೆದ ಬಾರಿಗಿಂತ ಈ ಸಲ ಕೊಂಚ ಹಿನ್ನಡೆ ಅನುಭವಿಸಿದ್ದರೂ ಅದು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಮೂಲಕ ಅಧಿಕಾರದ ಗದ್ದುಗೆಗೇರಲು ಅಣಿಯಾಗಿದೆ.

2013ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನಗಳಿಸಿ ಕಾಂಗ್ರೆಸ್‌ಗೆ ತಕ್ಕ ಪೈಪೋಟಿ ನೀಡಿತ್ತು. ಜತೆಗೆ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕೈ ಪಡೆಯನ್ನು ಅಧಿಕಾರದಿಂದ ದೂರ ಇಟ್ಟಿತ್ತು. ಅದು ಮೇಯರ್ ಸ್ಥಾನವನ್ನು ತನ್ನಲ್ಲಿಯೇ ಇಟ್ಟುಕೊಂಡು ಬಿಜೆಪಿಯೊಂದಿಗೆ ಸೇರಿ ಅಧಿಕಾರದ ರುಚಿಯನ್ನು ಐದು ವರ್ಷ ಅನುಭವಿಸಿತ್ತು. ಈ ಮೂಲಕ ಅಂದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಆಡಳಿತರೂಢ ಕಾಂಗ್ರೆಸ್‌ಗೆ ಆಘಾತ ಉಂಟು ಮಾಡಿತ್ತು.

ಆದರೆ, ಇದೀಗ ರಾಜಕೀಯ ಚಿತ್ರಣವೇ ಬದಲಾಗಿದೆ. ಅಂದು ಶತ್ರುವಾಗಿದ್ದ ಕಾಂಗ್ರೆಸ್ ಈಗ ಮಿತ್ರ. ಸ್ನೇಹಿತ ನಾಗಿದ್ದ ಬಿಜೆಪಿ ಇದೀಗ ರಾಜಕೀಯ ವೈರಿ ಸ್ಥಾನದಲ್ಲಿ ನಿಂತಿದೆ. ಜತೆಗೆ, ಮೈತ್ರಿ ಸರ್ಕಾರದ ಪಾಲುದಾರರಾದ ಜೆಡಿಎಸ್ ಮೈಸೂರು ಜಿಲ್ಲೆಯಲ್ಲಿ ಪ್ರಬಲವಾಗಿದೆ. ಹೀಗಾಗಿ, ವಿಧಾನ ಸಭಾ ಚುನಾವಣೆಯಂತೆ ಜೆಡಿಎಸ್ ತನ್ನ ಬಲವನ್ನು ಪಾಲಿಕೆಯಲ್ಲೂ ಹಿಗ್ಗಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ಅದು ಕೇವಲ 18 ಸ್ಥಾನವನ್ನು ಗಳಿಸಲು ಮಾತ್ರ ಶಕ್ತವಾಗಿದೆ. ಅದು ಕಳೆದ ಬಾರಿಗಿಂತ ಎರಡು ಸ್ಥಾನವನ್ನು ಕಳೆದುಕೊಂಡಿದೆ.

ಜೆಡಿಎಸ್ ಪ್ರಭಾವ ಇರುವ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ದೊರೆ ತಿಲ್ಲ. ಕಳೆದ ಬಾರಿಯಂತೆ ಈ ಸಲವೂ 9 ಸ್ಥಾನವನ್ನು ಗೆದ್ದಿದೆ. ಇದು ಮೇಲ್ನೋಟಕ್ಕೆ ಯಥಾಸ್ಥಿತಿ ಕಾಯ್ದು ಕೊಂಡಿದೆಯೆಂದು ಅನಿಸುತ್ತದೆ. ಆದರೆ, ಕಳೆದ ಬಾರಿ 23 ವಾರ್ಡ್ ಗಳಿದ್ದವು. ಈಗ 19 ವಾರ್ಡ್‌ಗಳಿವೆ. ಹೀಗಾಗಿ, ವಾರ್ಡ್ ಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸ್ಥಾನ ಗಳಿಸಲು ಆಗಿಲ್ಲ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೂ ಹಿನ್ನಡೆಯಾಗಿದೆ. ಕಳೆದ ಬಾರಿ ಇಲ್ಲಿ 7 ಸ್ಥಾನ ಗಳಿಸಿದ್ದ ಜೆಡಿಎಸ್, ಈಗ 6 ಕ್ಷೇತ್ರದಲ್ಲಿ ಗೆದ್ದಿದೆ. ಒಂದು ಸ್ಥಾನವನ್ನು ಕಳೆದುಕೊಂಡಿದೆ. ಅಲ್ಪ ಸಂಖ್ಯಾ ತರ ಮತಗಳು ವಿಭಜನೆಯಾಗಿವೆ. ಜೆಡಿಎಸ್ ಸಾಂಪ್ರ ದಾಯಿಕ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡು ತಾನು ಸೋತು, ಅದರ ಓಟಕ್ಕೂ ಅಡ್ಡಗಾಲು ಹಾಕಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವಾಷ್‌ಔಟ್ ಆಗಿದೆ. ಇಲ್ಲಿ 20 ವಾರ್ಡ್‌ಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. ಇಲ್ಲಿ ಕಮಲ 12 ಕ್ಷೇತ್ರದಲ್ಲಿ ಅರಳಿದೆ. ಅದು ತನ್ನ ಸಾಮರ್ಥ್ಯವನ್ನು ಹಿಗ್ಗಿಸಿಕೊಂಡಿದೆ.

ಜೆಡಿಎಸ್‌ನ ಸ್ಥಳೀಯ ಮಟ್ಟದ ಘಟಾನುಘಟಿ ನಾಯಕರು ಸೋತು ಸುಣ್ಣವಾಗಿದ್ದಾರೆ. ಪಕ್ಷದ ನಗರಾಧ್ಯಕ್ಷ, ಹಾಲಿ ಕಾರ್ಪೋರೇಟರ್ ಚಲುವೇಗೌಡ (ವಾರ್ಡ್ 4, ಹೆಬ್ಬಾಳು ಲೋಕನಾಯಕನಗರ) ಪರಾಜಯಗೊಂಡು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಮೂರು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕೆ.ವಿ.ಮಲ್ಲೇಶ್(ವಾರ್ಡ್ 57, ಕುವೆಂಪುನಗರ ಸಿಐಟಿಬಿ) ಪರಾಭವಗೊಂಡಿದ್ದಾರೆ. ಹಾಲಿ ಮೇಯರ್ ಬಿ.ಭಾಗ್ಯವತಿ (ವಾರ್ಡ್ 21, ಗಂಗೋತ್ರಿ) ಕೂಡ ಹೀನಾಯವಾಗಿ ಸೋಲು ಕಂಡಿದ್ದು, ಕೇವಲ 744 ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಂತೆಯೇ ಉಪಮೇಯರ್ ಇಂದಿರಾ ಮಹೇಶ್(ವಾಡ್ 30, ಕ್ಯಾತಮಾರನಹಳ್ಳಿ), ಹಾಲಿ ಸದಸ್ಯರಾದ ರೇಷ್ಮ ಜಬೀನ್(ವಾರ್ಡ್ 31, ಉಸ್ಮಾನಿಯಾ ಬ್ಲಾಕ್ ), ಎಸ್.ಬಾಲು (ವಾರ್ಡ್ 42, ಕೆಜಿ ಕೊಪ್ಪಲು), ಪಾಲಿಕೆ ನಾಮನಿರ್ದೇಶಿತ ಸದಸ್ಯ ರಾಗಿದ್ದ ಪಿ.ದೇವರಾಜು ಸೋಲು ಕಂಡಿದ್ದಾರೆ. ಮತ್ತೊಮ್ಮೆ ಕಾರ್ಪೋ ರೇಟರ್ ಆಗುವ ಪಾಲಿಕೆ ಮಾಜಿ ಸದಸ್ಯರಾದ ಆರ್.ಸೋಮಸುಂದರ್, ಎಂ.ಬಿ.ಪಾರ್ಥಸಾರಥಿ, ಬಿ.ಎಂ.ನಟರಾಜ್ ಅವರ ಕನಸು ಭಗ್ನವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ನ ನಿದ್ದೆ ಕೆಡಿಸಿದ್ದ ಹರೀಶ್‌ಗೌಡ ಬಣ ಈಗಲೂ ದಳದ ಗೆಲುವಿನ ಓಟಕ್ಕೆ ತೊಡರುಗಾಲು ಹಾಕಿದೆ. 10 ಅಭ್ಯರ್ಥಿಗಳ ಪೈಕಿ ಇಬ್ಬರು (ವಾರ್ಡ್ 4, ಪೈಲ್ವಾನ್ ಶ್ರೀನಿವಾಸ್ ಮತ್ತು ವಾರ್ಡ್ 42, ಎಂ.ಶಿವ ಕುಮಾರ್) ಜಯ ಸಾಧಿಸಿದ್ದಾರೆ. ಚಾಮರಾಜ, ಕೆಆರ್ ಮತ್ತು ಚಾಮುಂಡೇಶ್ವರಿ ವ್ಯಾಪ್ತಿ ವಾರ್ಡ್‌ನಲ್ಲಿ ಜೆಡಿಎಸ್‌ಗೆ ಈ ಬಣತೀವ್ರವಾಗಿ ಕಾಡಿದೆ. ಇದು ಕೆಲ ಕಡೆ ಜೆಡಿಎಸ್‌ನ ಸೋಲಿಗೂ ಕಾರಣವಾಗಿದೆ.

ಟಿಕೆಟ್ ವಂಚಿತರು, ನಾಯಕರ, ಅಭ್ಯರ್ಥಿಗಳ ವಿರುದ್ಧ ಆಂತರಿಕವಾಗಿ ಅಸಮಾಧಾನಗೊಂಡವರು ಚುನಾವಣೆಯಲ್ಲಿ ಒಳಪೆಟ್ಟು ಕೊಟ್ಟಿದ್ದಾರೆ. ಅದು ಫಲಿತಾಂಶದಲ್ಲಿ ಗೋಚರವಾಗುತ್ತಿದೆ. ಮೈಸೂರಿನ ವಾಸಿಗಳಾದ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಅವರ ಪ್ರಭಾವಳಿ ಇಲ್ಲಿ ಕೆಲಸ ಮಾಡಿಲ್ಲ. ಸರ್ಕಾರದ ನಾಯಕತ್ವ ವಹಿಸಿ ಕೊಂಡಿದ್ದರೂ ಅದು ತನ್ನ ಬೇರುಗಳನ್ನು ಇನ್ನಷ್ಟು ವಿಸ್ತರಿಸಿ ಗಟ್ಟಿಗೊಳಿ ಸುವಲ್ಲಿ ವಿಫಲವಾಗಿದೆ. ದೋಸ್ತಿ ಬಲದಿಂದ ಅಧಿಕಾರ ಸಿಕ್ಕಿರುವುದರಿಂದ ಜಟ್ಟಿ ಬಿದ್ರು ಮೀಸೆ ಮಣ್ಣಾಗಲಿಲ್ಲ… ಎನ್ನುವಂತೆ ಅದು ವರ್ತಿಸುತ್ತಿದೆ…!

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...