ಸಮೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದ ಮೈಸೂರಿನ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ ಶಂಕರ್

ಮೈಸೂರು: ಚುನಾವಣೋತ್ತರ ಸಮೀಕ್ಷೆಗಳು ನಿಜವಾದ ಉದಾಹರಣೆಗಳು ಇಲ್ಲ. ಕಳೆದ ಎರಡು ವರ್ಷಗಳ ಚುನಾವಣಾ ಸಮೀಕ್ಷೆಗಳನ್ನು ಗಮನಿಸಿ. ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿಲ್ಲ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ ಶಂಕರ್ ಹೇಳಿದರು.

ರಾಜ್ಯಸ್ಥಾನ, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಹೀಗಾಗಿ ಸಮೀಕ್ಷೆಗಳನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕಾಂಗ್ರೆಸ್‌ಗೂ ಬಹುಮತ ಬರುವುದಿಲ್ಲ, ಬಿಜೆಪಿಗೂ ಬಹುಮತ ಬರುವುದಿಲ್ಲ. ಅತಂತ್ರ ಫಲಿತಾಂಶ ಬರುತ್ತದೆ. ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಭವಿಷ್ಯ ನುಡಿದರು.

ಯುಪಿಎ, ತೃತೀಯ ರಂಗದ ಜಾತ್ಯತೀತ ಪಕ್ಷಗಳು ಸರ್ಕಾರ ರಚಿಸಲಿವೆ. ಮೈಸೂರು- ಕೊಡಗು ಕ್ಷೇತ್ರದಲ್ಲಿ ನಾನು ನಿಶ್ಚಿತವಾಗಿ ಗೆಲ್ಲುತ್ತೇನೆ. ಜೆಡಿಎಸ್‌ನ ಶೇ.10 – 20 ರಷ್ಟು ಮತಗಳು ಸಮಸ್ಯೆ ಆಗಬಹುದು. ಆದರೆ ಜೆಡಿಎಸ್ ಭಾಗಶಃ ಬೆಂಬಲ ಸಿಕ್ಕಿದೆ. ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಶಕ್ತಿ ಇದೆ. ಹೀಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ರಾಜ್ಯದಲ್ಲೂ ಅಚ್ಚರಿಯ ಫಲಿತಾಂಶ ಬರಲಿದೆ. ಅಲ್ಲಿವರೆಗೂ ಸ್ವಲ್ಪ ಕಾಯಿರಿ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *