ಸಾಲಕ್ಕೆದರಿ ರೈತ ಆತ್ಮಹತ್ಯೆ

ಬೈಲಕುಪ್ಪೆ: ಆಲನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿ ನಾಶಕ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಲನಹಳ್ಳಿ ಗ್ರಾಮದ ದಿ.ಜವರನಾಯಕನ ಮಗ ಸ್ವಾಮಿನಾಯಕ(55) ಮೃತ ರೈತ. ಇವರಿಗೆ 2 ಎಕರೆ ಜಮೀನು ಇದ್ದು ಶುಂಠಿ ಮತ್ತು ಜೋಳ ಬೆಳೆದಿದ್ದರು. ಕೃಷಿ ಖರ್ಚಿಗಾಗಿ ನಂದಿನಾಥಪುರ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದು ಜತೆಗೆ ಒಂದಷ್ಟು ಕೈಸಾಲ ಮಾಡಿಕೊಂಡಿದ್ದರು. ಆದರೆ ಅತಿಯಾದ ಮಳೆಯಿಂದ ಫಸಲು ಕೈಸೇರದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಚಿಂತೆಗೀಡಾಗಿದ್ದ ಸ್ವಾಮಿನಾಯಕ ಜಮೀನಿನಲ್ಲಿ ಜೋಳಕ್ಕೆ ನೀಡುವ ಮಾತ್ರೆ ಸೇವಿಸಿದ್ದರು. ಕೂಡಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮಗ ಪ್ರದೀಪ್ ದೂರಿನಲ್ಲಿ ತಿಳಿಸಿದ್ದಾರೆ.

ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.