More

    ಮೈಸೂರು-ಧಾರವಾಡ ರೈಲು ಬೆಳಗಾವಿವರೆಗೆ ವಿಸ್ತರಣೆ

    ಹುಬ್ಬಳ್ಳಿ: ಮೈಸೂರು-ಧಾರವಾಡ-ಮೈಸೂರು ದೈನಂದಿನ ಎಕ್ಸ್​ಪ್ರೆಸ್ (17301, 17302) ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

    ಈ ಸೇವೆಯು ಸೆ. 26ರಿಂದ ಪ್ರಾರಂಭವಾಗಲಿದೆ. ಈ ಭಾಗದ ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನಿಂದ ರಾತ್ರಿ 10.30ಕ್ಕೆ ಹೊರಡುವ ರೈಲು (ಸಂಖ್ಯೆ 17301) ಮಾರನೇ ದಿನ ಬೆಳಗ್ಗೆ 10.45ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಬೆಳಗಾವಿಯಿಂಂದ ರಾತ್ರಿ 8 ಗಂಟೆಗೆ ಹೊರಡುವ ರೈಲು (ಸಂಖ್ಯೆ 17302) ಮಾರನೇ ದಿನ ಬೆಳಗ್ಗೆ 7.10ಕ್ಕೆ ಮೈಸೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts