ಕಾರ್ಣಿಕದ ಭವಿಷ್ಯ: ಕಬ್ಬಿಣದ ಸರಪಳಿ ಹರಿಯಲಿದೆ, ರೈತರ ಸಂಕಷ್ಟ ದೂರವಾಗಲಿದೆ ಎಂದ ಗೊರವಯ್ಯ

ಬಳ್ಳಾರಿ: ಹೂವಿನಹಡಗಲಿಯಲ್ಲಿರುವ ಪ್ರಸಿದ್ಧ ಮೈಲಾರ ಲಿಂಗೇಶ್ವರನ ಕಾರ್ಣಿಕ ಈ ವರ್ಷದ ಭವಿಷ್ಯ ನುಡಿದಿದೆ.
ಇಂದು ನಡೆದ ಐತಿಹಾಸಿಕ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿದರು. ಅದರಂತೆ ” ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್​,” ಎಂದು ಗೊರವಯ್ಯ ಕೂಗಿ ಹೇಳಿದರು.

ನಂತರ ಇದರ ವಿಶ್ಲೇಷಣೆ ಮಾಡಿದ ಕಾರ್ಣಿಕರು, “ರಾಜಕೀಯ ನಾಯಕರ ಸಂಕಲ್ಪ ಸಿದ್ಧಿಸುತ್ತದೆ. ರಾಜ್ಯದಲ್ಲಿ ರೈತರ ಸಂಕಷ್ಟಗಳು ನಿವಾರಣೆಯಾಗಲಿವೆ. ವ್ಯಾಪಾರ ವಾಣಿಜ್ಯ ಉದ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ಈ ಬಾರಿ ಒಳ್ಳೆಯದಾಗಲಿದೆ,” ಎಂದರು.

ಗೊರವಯ್ಯ ರಾಮಯ್ಯ ಅವರು ಈ ಬಾರಿ ಭವಿಷ್ಯ ನುಡಿದರು.

ಹಿಂದಿನ ಬಾರಿ “ಆಲದ ಮರದ ಮೇಲೆ ಗಿಳಿ ಕುಂತೈತಲೇ ಪರಾಕ್​,” ಎಂದು ಕಾರ್ಣಿಕರು ಭವಿಷ್ಯ ನುಡಿದಿದ್ದರು.