More

    ಮ್ಯಾಸನಾಯಕರಿಗೆ ಬೇಕು ವಿಶೇಷ ಸೌಲಭ್ಯ

    ಮೊಳಕಾಲ್ಮೂರು: ಮ್ಯಾಸನಾಯಕ ಸಮುದಾಯದಲ್ಲಿ ಬುಡಕಟ್ಟು ಸಂಸ್ಕೃತಿ, ಮೂಲ ಪರಂಪರೆ ಹಾಸು ಹೊಕ್ಕಾಗಿದ್ದು, ಈ ವಘಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ ಪ್ರಯತ್ನವಾಗಬೇಕು ಎಂದು ಹಿರೇಹಳ್ಳಿ ನಿವೃತ್ತ ಪ್ರಾಂಶುಪಾಲೆ ಅನ್ನಪೂರ್ಣ ಜೋಗೇಶ್ ಅಭಿವ್ಯಕ್ತಪಡಿಸಿದರು.

    ತಾಲೂಕಿನ ಚಿಕ್ಕುಂತಿ ಕಂಪಳ ದೇವರಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮ್ಯಾಸನಾಯಕ ಮತ್ತು ತಮಿಳುನಾಡಿನ ರಾಜಕಂಪಳಂ ನಾಯಕ ಬುಡಕಟ್ಟುಗಳ ಕುರಿತು ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪಶುಪಾಲನೆ ಮತ್ತು ಬುಡಕಟ್ಟು ಆಚಾರ-ವಿಚಾರಗಳಲ್ಲಿ ತನ್ನದೆ ಆದ ವೈಶಿಷ್ಟ್ಯ ಬದುಕು ಕಟ್ಟಿಕೊಂಡಿರುವ ಮ್ಯಾಸನಾಯಕರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಅಗತ್ಯತೆ ಇದೆ ಎಂದರು.

    ಅವರ ಮೂಲ ನೆಲೆ ಮತ್ತು ಬುಡಕಟ್ಟು ಸಂಪ್ರದಾಯಗಳ ಸಾಮ್ಯತೆ ಪದ್ಧತಿ ಮತ್ತು ಕಟ್ಟುಪಾಡುಗಳ ಬಗ್ಗೆ ಸಂಶೋಧಕರು, ವಿದ್ವಾಂಸರು, ಇತಿಹಾಸ ತಜ್ಞರು ಅಧ್ಯಯನ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಅವುಗಳ ರಕ್ಷಣೆಗೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

    ಹಂಪಿ ವಿವಿ ಪ್ರಾಧ್ಯಾಪಕ ಡಾ.ವಿರೂಪಾಕ್ಷ ಪೂಜಾರಹಳ್ಳಿ ಮಾತನಾಡಿ, ಪ್ರಾಚೀನ ಬುಡಕಟ್ಟು ಲಕ್ಷಣ ಹೊಂದಿರುವ ಇಲ್ಲಿನ ಮ್ಯಾಸನಾಯಕ ಪಂಗಡ ವಿವಿಧ ಹಟ್ಟಿ, ಅಡವಿಯ ಹಲವು ಭಾಗಗಳಲ್ಲಿ ಜೀವನ ರೂಪಿಸಿಕೊಂಡಿದೆ ಎಂದರು.

    ಜಾನುವಾರುಗಳ ಆರಾಧನೆ ಮತ್ತು ಜೀವನ ಶೈಲಿ ಪದ್ಧತಿಯಂತೆ ತಮಿಳುನಾಡಿನ ರಾಜಕಂಪಳಂ ನಾಯಕ ಸಮುದಾಯದಲ್ಲೂ ಕಾಣಬಹುದಾಗಿದೆ. ಸಂವಿಧಾನದ ಆಶಯದಂತೆ ಇವರ ನೈಜ ಮತ್ತು ಹಕ್ಕು ಬಾಧ್ಯತೆಗಳಿಗೆ ವಿಶೇಷ ಸ್ಥಾನಮಾನ ನೀಡಲು ಸರ್ಕಾರ ಬದ್ಧತೆ ಮೆರೆಯಬೇಕು. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಇದರ ಬಗ್ಗೆ ದಿಟ್ಟ ನಿಲುವು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

    ಮ್ಯಾಸನಾಯಕ ಬುಡಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ. ಗೆರೆಗಲ್ ಪಾಪಯ್ಯ, ಡಾ.ಜಿ. ಸಿದ್ದೇಶ, ಡಾ. ಪಾಲಯ್ಯ, ಸಿ.ಎಸ್. ಜೋಗೇಶ, ಎಂ.ಕೆ. ಬೋಸಪ್ಪ, ದೊಡ್ಡಮನಿ ಪ್ರಸಾದ್, ಮಲ್ಲೇಶ್, ವಿ. ನಾಗವೇಣಿ, ಓಬಣ್ಣ, ಮೊಹನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts