ನನ್ನ ಯೋಜನೆಗಳು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಆಯಿತು: ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು: ನಾನು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳು ವ್ಯರ್ಥವಾದವು. ಐದು ವರ್ಷದ ಆಡಳಿತಾವಧಿಯಲ್ಲಿ ನಾನು ಒಳ್ಳೆಯ ಯೋಜನೆಗಳನ್ನು ತಂದಿದ್ದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಶಾದಿಭಾಗ್ಯ, ಹಲವು ಯೋಜನೆ ಜಾರಿಗೆ ತಂದೆ. ಆದರೆ ನನ್ನ ಯೋಜನೆಗಳು ರಾಜ್ಯದಲ್ಲಿ ಪ್ರಯೋಜನವಾಗಲಿಲ್ಲ. ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಆಯಿತು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.

ಮೈಸೂರಿನ ಇಲವಾಲದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದಗೌಡ ಏನೂ ಕೆಲಸ ಮಾಡಲಿಲ್ಲ. ನನ್ನ ಯೋಜನೆಗಳು ರಾಜ್ಯದಲ್ಲಿ ಪ್ರಯೋಜನ ಆಗಲಿಲ್ಲ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ನಮಗೆ 8೦ ಸೀಟ್ ದೊರೆತರೆ, ಬಿಜೆಪಿಯವರಿಗೆ 104 ಸೀಟ್ ಸಿಕ್ಕಿತು. ಇವತ್ತು ಬಿಜೆಪಿ 104 ಸೀಟು ಗೆದ್ದು ಸರ್ಕಾರದ ಅಸ್ಥಿರತಗೆ ಸದಾ ಪ್ರಯತ್ನಿಸುತ್ತಿದೆ ಎಂದರು.
ಪ್ರತಿ ದಿನ ನಮ್ಮ‌ ಎಂಎಲ್ಎಗಳನ್ನು ಹಿಡಿದಿಟ್ಟುಕೊಳ್ಳೋದು ಸಾಹಸವಾಗಿದೆ. ನಾನು ನಮ್ಮ 80 ಎಂಎಲ್ಎಗಳನ್ನು ಹಿಡಿದಿಟ್ಟುಕೊಳ್ಳದಿದ್ರೆ ಸರ್ಕಾರ ಏನಾಗುತ್ತಿತ್ತೋ ಎಂದು ಸಮ್ಮಿಶ್ರ ಸರ್ಕಾರ ಉಳಿದಿರುವುದು ನನ್ನಿಂದ ಎಂದು ಪರೋಕ್ಷವಾಗಿ ಹೇಳಿದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *