16 C
Bengaluru
Tuesday, January 21, 2020

ನನ್ನ ರಾಜಕೀಯ ಮುಗಿಸಿದ್ದೇ ಪೂಜಾರಿ, ಮೊಯ್ಲಿ, ಆಸ್ಕರ್

Latest News

ಕೆಎಸ್ಆರ್​ಟಿಸಿ ಸ್ಲೀಪರ್ ಕೋಚ್ ವೋಲ್ವೋ ಬಸ್​ನಲ್ಲಿ ಬೆಂಕಿ: ಪ್ರಯಾಣಿಕರು ಪಾರು

ಚಿತ್ರದುರ್ಗ: ಕೆಎಸ್ಆರ್​ಟಿಸಿ ಸ್ಲೀಪರ್ ಕೋಚ್ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಸಮೀಪ ಅಗ್ನಿಗಾಹುತಿಯಾಗಿದೆ. ಮೇಟಿಕುರ್ಕೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು, ಬಸ್​ನಲ್ಲಿ...

ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ

ವಿಟಮಿನ್ ‘ಸಿ’ ಆಗರವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಬಾಳೆದಿಂಡಿನಿಂದ ಮಾಡಬಹುದಾದ ಕೆಲವು ವ್ಯಂಜನಗಳು ಇಲ್ಲಿವೆ.. ನೆಲ್ಲಿಕಾಯಿ...

ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ

ವಿಟಮಿನ್ ‘ಸಿ’ ಆಗರವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಬಾಳೆದಿಂಡಿನಿಂದ ಮಾಡಬಹುದಾದ ಕೆಲವು ವ್ಯಂಜನಗಳು ಇಲ್ಲಿವೆ.. ನೆಲ್ಲಿಕಾಯಿ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ: ತನಿಖೆ ಚುರುಕು, ಎನ್​ಐಅ ತಂಡದಿಂದ ಸ್ಥಳ ಪರಿಶೀಲನೆ

ಮಂಗಳೂರು: ಮಂಗಳೂರು ಸಜೀವ ಬಾಂಬ್ ಪತ್ತೆ ಪ್ರಕರಣ ಸಂಬಂದ ಪಟ್ಟಂತೆ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಬಗ್ಗೆ ತೀವ್ರ ಶೋಧ...

ಮೋದಿ ಮುಖ ನೋಡಿದೊಡನೆ ಭಯ ಹೋಯ್ತು…

ಬೆಂಗಳೂರು: ಆರಂಭದಲ್ಲಿ ನನಗೆ ತುಂಭಾ ಭಯ ಆಗಿತ್ತು. ಆದರೆ, ಮೋದಿ ಅವರ ಮುಖ ನೋಡಿದ ಮೇಲೆ ಭಯ ಮಾಯವಾಯಿತು. ನಂತರ ಸರಳವಾಗಿ ಮಾತನಾಡಲು...

– ಪಿ.ಬಿ. ಹರೀಶ್ ರೈ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಜಾತ್ಯತೀತವಾಗಿ ಕಟ್ಟಿ ಬೆಳೆಸಿದ ನನ್ನನ್ನು ಸಹಿತ ಅನೇಕ ನಾಯಕರ ರಾಜಕೀಯ ಬದುಕನ್ನು ಜನಾರ್ದನ ಪೂಜಾರಿ ಎಂಬ ವ್ಯಕ್ತಿ ಸರ್ವನಾಶ ಮಾಡಿದರು. ಜಿಲ್ಲೆಯಲ್ಲಿ ಕೋಮುವಾದಿ ರಾಜಕೀಯಕ್ಕೆ ಮುನ್ನುಡಿ ಬರೆದವರು ಜನಾರ್ದನ ಪೂಜಾರಿ!
ಹೀಗೆಂದು ಗತಕಾಲದ ರಾಜಕೀಯ ದಿನಗಳನ್ನು ಮೆಲುಕು ಹಾಕುತ್ತ ಪೂಜಾರಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಎ.ಮೊಹಿದೀನ್!
ಜನವರಿಯಲ್ಲಿ ಬಿಡುಗಡೆಯಾದ ಜನಾರ್ದನ ಪೂಜಾರಿ ಅವರ ಆತ್ಮಕಥನ ‘ಸಾಲಮೇಳದ ಸಂಗ್ರಾಮ’ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಕರಾವಳಿಯ ಇನ್ನೋರ್ವ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಮೊಹಿದೀನ್ ಅವರ ಆತ್ಮಕಥನ ‘ನನ್ನೊಳಗಿನ ನಾನು’ ಬಿಡುಗಡೆಗೆ ಸಿದ್ಧವಾಗಿದೆ. ಆತ್ಮಕಥನದಲ್ಲಿ ಅಡಕವಾಗಿರುವ ಸ್ಫೋಟಕ ಮಾಹಿತಿಗಳು ‘ವಿಜಯವಾಣಿ’ಗೆ ಲಭ್ಯವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಬಹುದಾದ ಬಹಳಷ್ಟು ಅಂಶಗಳು ಇದರಲ್ಲಿದೆ.

ಅರಸು ನಿಕಟವರ್ತಿ: ದೇವರಾಜು ಅರಸು ನಿಕಟವರ್ತಿಯಾಗಿ ರಾಜಕೀಯ ಪ್ರವೇಶಿಸಿದ ಮೊಹಿದೀನ್ ಕಾಂಗ್ರೆಸ್ ಮತ್ತು ಜನತಾ ಪಾಳಯದಲ್ಲಿ ಸಮನಾಗಿ ಮಿಂಚಿದವರು. ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡ ಮೊಹಿದೀನ್ ಅವರಿಗೆ ಈಗ 80ರ ಹರೆಯ. ಅನಾರೋಗ್ಯವೂ ಕಾಡುತ್ತಿದೆ. ಇಂತಹ ಇಳಿವಯಸ್ಸಿನಲ್ಲಿ ಅವರ ಆತ್ಮಕಥನ ಬರುತ್ತಿದೆ. ನಿರೂಪಣೆಯ ಕಾರ್ಯವನ್ನು ಮುಹಮ್ಮದ್ ಕುಳಾಯಿ ಮತ್ತು ಬಿ.ಎ.ಮುಹಮ್ಮದ್ ಆಲಿ ವಹಿಸಿದ್ದಾರೆ. ರಾಜಕೀಯದಲ್ಲಿ ಉಂಡ ಸಿಹಿ-ಕಹಿಯನ್ನು ಮೊಹಿದೀನ್ ಅವರು 232 ಪುಟಗಳ ತನ್ನ ಆತ್ಮಕಥನದಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.

ಮುಸ್ಸಂಜೆಯ ಹೊತ್ತು: ನನಗೀಗ 80 ವರ್ಷ ಪ್ರಾಯ. ಬದುಕಿನ ಮುಸ್ಸಂಜೆಯ ಹೊತ್ತು.. ಎಂದು ಆತ್ಮಕಥೆ ಆರಂಭಿಸುವ ಮೊಹಿದೀನ್ ಅವರು ತನ್ನ ಬಾಲ್ಯ, ಶಿಕ್ಷಣ, ಕಾಲೇಜಿನ ದಿನಗಳು, ಮದುವೆ.. ಎಲ್ಲವನ್ನೂ ಸೊಗಸಾಗಿ ವಿವರಿಸಿದ್ದಾರೆ. ಬಳಿಕ ಅವರ ರಾಜಕೀಯದ ಅಧ್ಯಾಯ ತೆರೆದುಕೊಳ್ಳುತ್ತದೆ. ತುರ್ತು ಪರಿಸ್ಥಿತಿಯ ದಿನಗಳು, 70ರ ದಶಕದಲ್ಲಿ ಜಿಲ್ಲೆಯನ್ನು ತಲ್ಲಣಗೊಳಿಸಿದ ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣ, ಭಾಸ್ಕರ ಸೇಮಿತ ಕೊಲೆ ಪ್ರಕರಣ, ಚಿಕ್ಕಮಗಳೂರು ಉಪ ಚುನಾವಣೆ.. ಎಲ್ಲವನ್ನೂ ವಿವರಿಸಿದ್ದಾರೆ. ಆರೋಪ ಸಾಬೀತಾಗಲೇ ಬೇಕಾಗಿದ್ದ ಇಸ್ಮಾಯಿಲ್ ಕೊಲೆ ಪ್ರಕರಣ ಕೋರ್ಟ್‌ನಲ್ಲಿ ಬಿದ್ದುಹೋಗಲು ನಿರ್ದಿಷ್ಟವಾದ ಕಾರಣವಿತ್ತು. ಆದನ್ನು ನಾನು ಇಲ್ಲಿ ದಾಖಲಿಸಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನನ್ನ ರಾಜಕೀಯ ಜೀವನ ಮುಗಿಸಿದ್ದು ಪೂಜಾರಿ, ಮೊಯ್ಲಿ, ಆಸ್ಕರ್: 1978ರಲ್ಲಿ ಬಂಟ್ವಾಳದ ಕಾಂಗ್ರೆಸ್ ಶಾಸಕರಾಗಿದ್ದ ಮೊಹಿದೀನ್ ಅವರು ಅರಸು ಪಾಳಯದಲ್ಲಿದ್ದ ಕಾರಣ 83ರ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದರು. ಇದನ್ನು ಆತ್ಮಕಥನದಲ್ಲಿ ಸ್ಮರಿಸುವ ಮೊಹಿದೀನ್ ಕರಾವಳಿ ಮೂವರು ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ಹಂತದಲ್ಲಿ ನನ್ನ ರಾಜಕೀಯ ಜೀವನವನ್ನು ಮುಗಿಸಿದವರು ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್. ಈ ಮೂರು ಜನ ನನಗೇಕೆ ಈ ರೀತಿಯ ಅನ್ಯಾಯ ಮಾಡಿದರು ಎಂದು ಈಗಲೂ ನಾನು ಒಮ್ಮೊಮ್ಮೆ ಯೋಚಿಸುತ್ತೇನೆ. ನಾನು ಯಾವುದೇ ತೊಂದರೆ ಕೊಟ್ಟವನಲ್ಲ. ಈ ಮೂವರು ನನಗೆ ಮಾಡಿದ ಘನಘೋರ ಅನ್ಯಾಯ ನೆನಪಾಗುವಾಗ ಒಂದು ರೀತಿಯ ನೋವು ಕಾಡುತ್ತದೆ.. ಎನ್ನುವ ಸಾಲುಗಳು ಆತ್ಮಕಥನದಲ್ಲಿದೆ.

ಪೂಜಾರಿ ಯಾರು?:  1977ರವರೆಗೆ ನಾನು ಕಾಂಗ್ರೆಸ್‌ನಲ್ಲೇ ಅವಿರತ ಹೋರಾಟ ಮಾಡಿದವನು. ಆದರೆ ಈ ಜನಾರ್ದನ ಪೂಜಾರಿ ಯಾರು? ಓರ್ವ ವಕೀಲ. ಸೇಮಿತ ಕೊಲೆ ಪ್ರಕರಣದಲ್ಲಿ ಸದಾನಂದ ಪೂಂಜಾ ಅಂತಹವರು ಸಾಕ್ಷಿ ಹಾಕುವ ಸಂದರ್ಭ ಇದೇ ಪೂಜಾರಿ ‘ನಿಮಗೆಲ್ಲ ಯಾಕ್ರೀ ಈ ಉಸಾಬಾರಿ? ಗೇಣಿದಾರರು, ಬಡವರು ಅಂತ ಹೋರಾಟ ಮಾಡಿ ಸುಮ್ಮನೆ ಯಾಕೆ ತೊಂದರೆಗೆ ಒಳಪಡಿಸುತ್ತೀರಿ ಎಂದು ಹೇಳಿದವರು. ಪೂಜಾರಿ ರಾಜಕೀಯಕ್ಕೆ ಬಂದದ್ದು ಮೊಯ್ಲಿ ಕೃಪೆಯಿಂದ. ಜಿಲ್ಲೆಯ ರಾಜಕೀಯವನ್ನು ಪೂಜಾರಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡರು. ನಾವೆಲ್ಲ ದುಡಿದದ್ದು, ಪೂಜಾರಿ ಬಂದು ಕುಳಿತದ್ದು, ನಮ್ಮನೆಲ್ಲ ತುಳಿದದ್ದು.. ಎಂದು ನೋವು ತೋಡಿಕೊಂಡಿದ್ದಾರೆ ಮೊಹಿದೀನ್.

ಯಾರ ಮೇಲೂ ದ್ವೇಷವಿಲ್ಲ: ಅರಸು ಕಾಂಗ್ರೆಸ್‌ನಿಂದ ಬಂದವರಿಗೆ ಪೂಜಾರಿ, ಮೊಯ್ಲಿ ಮತ್ತು ಆಸ್ಕರ್ ಮಾಡಿದ ಅನ್ಯಾಯದ ಬಗ್ಗೆ ಆತ್ಮಕಥನದುದ್ದಕ್ಕೂ ವಿವರಿಸುವ ಮೊಹಿದೀನ್ ಅವರು ಅಧ್ಯಾಯದ ಕೊನೆಗೆ ಈ ಮೂರು ಜನರ ಮೇಲೆ ಯಾವುದೇ ರೀತಿಯ ಕೋಪ, ದ್ವೇಷ ಖಂಡಿತ ಇಲ್ಲ. ಪೂಜಾರಿ ಅವರು ನನ್ನ ಹಾಗೆ ವಯೋವೃದ್ಧರಾಗಿದ್ದಾರೆ. ನಿರಂತರ ಸೋಲಿನಿಂದ ನೊಂದಿದ್ದಾರೆ, ನಲುಗಿದ್ದಾರೆ. ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...