More

    ಸಚಿವನಾಗಬೇಕೆಂಬುದು ನನ್ನ ಜೀವಮಾನದ ಆಸೆ: ರಾಜಣ್ಣ

    ತುಮಕೂರು: ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಕ್ರಿಯ ರಾಜಕಾರಣದಿಂದ ದೂರವಾಗುವ ಮೊದಲು ಸಚಿವನಾಗಬೇಕೆಂಬ ಆಸೆಯಿತ್ತು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈಡೇರಿದೆ ಎಂದು ನೂತನ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

    ಶನಿವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಕೆ.ಎನ್.ರಾಜಣ್ಣರನ್ನು ಕ್ಯಾತಸಂದ್ರದ ಟೋಲ್‌ನಲ್ಲಿ ಭಾನುವಾರ ಅದ್ದೂರಿಯಾಗಿ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ತೆರೆದ ವಾಹನದಲ್ಲಿ ಮೆರೆವಣಿಗೆ ಮೂಲಕ ಕರೆತರಲಾಯಿತು.

    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎನ್ನಾರ್, ಸಹಕಾರ ಖಾತೆಗೆ ನೀಡಬೇಕೆಂಬುದು ಜನರ ಆಕಾಂಕ್ಷೆಯಾಗಿದ್ದು ಯಾವ ಖಾತೆಕೊಟ್ಟರೂ ನಿಭಾಯಿಸುತ್ತೇನೆ ಎಂದ ರಾಜಣ್ಣ, ಮಧುಗಿರಿ ಕ್ಷೇತ್ರದಲ್ಲಿ 35 ಸಾವಿರ ಅಂತರದಲ್ಲಿ ನನಗೆ ಗೆಲುವು ನೀಡಿದ್ದಾರೆ. ಇಷ್ಟೊಂದು ಮತ ಬಂದಿದೆ ಅಂತ ದುರಂಹಕಾರ ತೋರಲ್ಲ, ವಿನಮ್ರವಾಗಿರುತ್ತೇನೆ. ಹೇಮಾವತಿ ನೀರಿನ ನಮ್ಮ ಪಾಲು ಪಡೆಯಲು ನಾವೆಲ್ಲರೂ ಒಟ್ಟಾಗಿರಬೇಕಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ. ಚಂದ್ರಶೇಖರ್‌ಗೌಡ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಇಕ್ಬಾಲ್‌ಅಹ್ಮದ್, ಜಿ.ಎಚ್.ಷಣ್ಮುಖಪ್ಪ, ಕಲ್ಲಹಳ್ಳಿ ದೇವರಾಜ್, ಜಿಪಂ ಮಾಜಿ ಸದಸ್ಯೆ ಶಾಂತಲಾ, ಶಶಿಹುಲಿಕುಂಟೆ ಮಠ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts