ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​

ಕಲಬುರಗಿ: ಕಾಂಗ್ರೆಸ್​ ಪಕ್ಷದ ನಾಯಕರು ನಾನು ಹಣ ತೆಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಮಾಜಿ ಶಾಸಕ ಉಮೇಶ್​ ಜಾಧವ್​ ಹೇಳಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಚಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರ ಸುಳ್ಳು ಆರೋಪಗಳಿಂದ ಕುಟುಂಬದವರು ಬೇಸರ ಗೊಂಡಿದ್ದಾರೆ. ಇದರಿಂದ ನನ್ನ ಮಗಳಿಗೆ ಕಾಲೇಜಿನಲ್ಲಿ ಅವಮಾನ ಆಗಿದೆ. ಉತ್ತಮವಾಗಿ ಓದುತ್ತಿದ್ದ ಆಕೆ ಮಾನಸಿಕವಾಗಿ ಕುಗ್ಗಿದ್ದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಇದಕ್ಕೆಲ್ಲ ಕಾಂಗ್ರೆಸ್​ ನಾಯಕರ ಆರೋಪವೆ ಕಾರಣ ಎಂದು ಆರೋಪಿಸಿದರು.

ಬಿಜೆಪಿಗೆ ಮಾರಾಟವಾಗಿದ್ದೇನೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದ ಅವರು, 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್​ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್​ಗೆ, ಸಿಎಂ ಕುಮಾರಸ್ವಾಮಿ ಅವರಿಗೆ ಮಾರಾಟವಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ನಾನು ಎರಡು ಬಾರಿ ಶಾಸಕನಾಗಿದ್ದ ವೇಳೆ ನಮ್ಮ ಕ್ಷೇತ್ರಕ್ಕೆ ಕರೆದರೆ ಯಾವುದೇ ಮಂತ್ರಿಯೂ ಬರುತ್ತಿರಲಿಲ್ಲ. ನನ್ನ ಕ್ಷೇತ್ರದಲ್ಲಿ ನಕ್ಸಲರಿದ್ದಾರೆಂದು ಅಧಿಕಾರಿಗಳೂ ಬರಲಿಲ್ಲ. ಆದರೆ ಈಗ ಚುನಾವಣೆ ವೇಳೆ ಕಾಂಗ್ರೆಸ್​ ನಾಯಕರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅಂದು ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಲಿಲ್ಲ. ಈಗಲಾದರೂ ಸಮಸ್ಯೆಯನ್ನು ಗಮನಿಸಿ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

2 Replies to “ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​”

  1. ಸಾರ್ ನೀವು ಬಹುದೊಡ್ಡ ನಾಯಕರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಇದು ಯಾವ ವಿಷಯ ನಮ್ಮ ಮಂತ್ರಿ ಶಿವಳ್ಳಿ ಅವರ ಸಾವಿನ ದಿನವು ಮಗಳು ಪರಿಕ್ಷೇ ಬರೆದು 76%ಗಳಿಸದ್ದಾಳೆ ಅದಕಿಂತ ದೊಡ್ಡ ಸಾರ್ ನಿಮ್ಮ ನೋವು… ಫೇಲ್ ಆದ್ರೆ ಮತ್ತೆ ಬರೆಯಬಹುದು. ತಂದೆಯನ್ನು ಕಳೆದುಕೊಂಡ ಆ ಮಗಳಿಗೆ ಮತ್ತೆ ತಂದೆಯನ್ನು ಮರಳಿ ಕೊಡುವಿರಾ ನಿನ್ನಂತ ನಾಯಕರು ಇಂಗಂದ್ರ ಹಾಗೆ ಸಾರ್

Leave a Reply

Your email address will not be published. Required fields are marked *