ನನಗೂ, ನನ್ನ ತಂದೆಯವರಿಗೂ ಕಾಂಗ್ರೆಸ್​ ಬಗ್ಗೆ ಅಸಮಾಧಾನವಿದೆ, ಏನೇ ಮಾಡುವುದಾದರೂ ನಿಮಗೆ ತಿಳಿಸುತ್ತೇನೆ: ಸೌಮ್ಯ ರೆಡ್ಡಿ

ಬೆಂಗಳೂರು: ಕಾಂಗ್ರೆಸ್​ ಬಗ್ಗೆ ನನಗೂ ಮತ್ತು ನನ್ನ ತಂದೆಯವರಿಗೂ ಅಸಮಾಧಾನವಿದೆ. ಆದರೂ ಅವರು ನನ್ನ ರಾಜೀನಾಮೆ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ನಾನು ರಾಜೀನಾಮೆ ಕೊಡುವುದಾದರೆ ನಿಮ್ಮೆಲ್ಲರಿಗೂ ತಿಳಿಸಿ ರಾಜೀನಾಮೆ ನೀಡುತ್ತೇನೆ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಯನಗರ ಕ್ಷೇತ್ರದ ಜನತೆ ನನ್ನನ್ನು ನಂಬಿಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದರು.

ನನ್ನ ತಂದೆ ಬಿ. ರಾಮಲಿಂಗಾರೆಡ್ಡಿ 45 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಕೆಲಸ ಮಾಡಿದ್ದಾರೆ. ಪಕ್ಷ ಅವರನ್ನು ಹೇಗೆಲ್ಲ ನಡೆಸಿಕೊಂಡಿದೆ ಎಂಬುದು ನನಗೆ ಗೊತ್ತಿದೆ. ರಾಜಕೀಯ ಬೆಳವಣಿಗೆ ಹೇಗೆ ಅಗುತ್ತೋ ನೋಡೋಣ. ಅದನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *