ಒಲಿಂಪಿಕ್ಸ್ ಸೋಲಿನ ಬೆನ್ನಲ್ಲೇ ಭಾರತದ ಕೋಚ್ ನಿವೃತ್ತಿ: ಇನ್ನು ತರಬೇತಿ ನೀಡುವುದಿಲ್ಲ ಎಂದ ಬಾಲಿವುಡ್ ನಟಿಯ ಪತಿ

ಪ್ಯಾರಿಸ್: ಡಬಲ್ಸ್ ತಾರೆಗಳಾದ ಸಾತ್ವಿಕ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಬಿಡಬ್ಲುಎಫ್​ ವಿಶ್ವ ರ್ಯಾಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತ ಬ್ಯಾಡ್ಮಿಂಟನ್ ತಂಡದ ಡಬಲ್ಸ್ ಕೋಚ್ ಮಥಾಯಿಸ್ ಬೋಯಿ ಕೋಚಿಂಗ್‌ಗೆ ನಿವೃತ್ತಿ ಹೇಳಿದ್ದಾರೆ. ಒಲಿಂಪಿಕ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಸವಾಲು ಮುಕ್ತಾಯಗೊಂಡ ಬೆನ್ನಲ್ಲೇ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ವಿಷಯ ಪ್ರಕಟಿಸಿರುವ ಮಥಾಯಿಸ್, ನನ್ನ ಕೋಚಿಂಗ್ ದಿನಗಳು ಇಲ್ಲಿಗೆ ಕೊನೆಗೊಳ್ಳಲಿದೆ.

ಭಾರತದ ಆಟಗಾರರು ಸೇರಿ ಇನ್ನು ಮುಂದೆ ಎಲ್ಲೂ ಕೋಚ್ ಆಗಿ ಕಾರ್ಯನಿರ್ವಹಿಸುದಿಲ್ಲ. ಇದು ತುಂಬ ಒತ್ತಡದಾಯಕವಾಗಿದ್ದು, ನಾನು ದಣಿದ ಮುದುಕ. ಪ್ಯಾರಿಸ್‌ನಲ್ಲಿ ಪದಕ ಜಯಿಸಲು ವಿಫಲವಾಗಿದ್ದರೂ ತೃಪ್ತ ವ್ಯಕ್ತಿಯಾಗಿ ಸ್ಥಾನವನ್ನು ತೊರೆಯುತ್ತಿದ್ದೇನೆ ಎಂದು 44 ವರ್ಷದ ಮಥಾಯಿಸ್ ಬರೆದುಕೊಂಡಿದ್ದಾರೆ. 2020ರಲ್ಲಿ ಮಥಾಯಿಸ್ ಭಾರತ ತಂಡದ ಡಬಲ್ಸ್ ಆಟಗಾರರಿಗೆ ಮುಖ್ಯ ತರಬೇತುದಾರರಾಗಿ ನೇಮಕಗೊಂಡ ಬಳಿಕ ಭಾರತ 2022ರಲ್ಲಿ ಥಾಮಸ್ ಕಪ್ ಹಾಗೂ ಸಾತ್ವಿಕ್-ಚಿರಾಗ್ ಜೋಡಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ನಂಬರ್ ಸ್ಥಾನಕ್ಕೇರಿದ ಸಾಧನೆ ಮಾಡಿತ್ತು. 2012ರ ಲಂಡನ್ ಒಲಿಂಪಿಕ್ಸ್ ಡಬಲ್ಸ್‌ನಲ್ಲಿ ರಜತ ಪದಕ ಜಯಿಸಿರುವ ಡೆನ್ಮಾರ್ಕ್‌ನ ಮಥಾಯಿಸ್, ಕಳೆದ ಮಾರ್ಚ್‌ನಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…