ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಮಹಾಘಟಬಂಧನ ಮಾಡಿಕೊಂಡಿದ್ದಾರೆ: ಪ್ರಧಾನಿ ಮೋದಿ

ಸಿಲ್ವಾಸ್ಸ: ಭ್ರಷ್ಟಾಚಾರದ ವಿರುದ್ಧ ನಾನು ತೆಗೆದುಕೊಂಡ ಕ್ರಮ ಕೆಲವರನ್ನು ಕೆರಳಿಸಿದೆ. ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವುದನ್ನು ತಡೆದಿರುವುದಕ್ಕೆ ಅವರು ಕೋಪ ಮಾಡಿಕೊಂಡಿರುವುದು ವಿಶೇಷವೇನಲ್ಲ. ಇಂಥವರೆಲ್ಲಾ ಸೇರಿ ಈಗ ಮಹಾಘಟಬಂಧನ ಎಂಬ ಒಕ್ಕೂಟ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದಾದ್ರ ಮತ್ತು ನಗರ್​ ಹವೇಲಿಯ ಸಿಲ್ವಾಸ್ಸ ಪ್ರವಾಸದಲ್ಲಿ ಮಾತನಾಡಿದ ಅವರು ಕೊಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ಮಹಾಘಟಬಂಧನದ ಮೆಗಾ ರ‍್ಯಾಲಿಗೆ ಟಾಂಗ್​ ಕೊಟ್ಟರು.

ಚಂದ್ರಬಾಬು ನಾಯ್ಡು ಮತ್ತು ಅಖಿಲೇಶ್​ ಯಾದವ್​ ಸೇರಿದಂತೆ ಒಂದಾದ ಮೇಲೊಂದು ಪ್ರತಿಪಕ್ಷಗಳು ನನ್ನ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿವೆ ಎಂದ ಅವರು, ತಮ್ಮ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡಿದವರೇ ಇಂದು ಪ್ರಜಾಪ್ರಭುತ್ವ ಉಳಿಸಿ ಎಂದು ಉಪದೇಶ ನೀಡುತ್ತಿದ್ದಾರೆ. ಇದು ನಿಜವಾಗಿಯೂ ಇದು ಸೋಜಿಗದ ಸಂಗತಿ ಎಂದರು. (ಏಜೆನ್ಸೀಸ್)