ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಪಾಕ್‌ ಗೌರವಿಸಬೇಕು: ಚೀನಾ

ಬೀಜಿಂಗ್‌: ಎಲ್ಲ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪಾಕ್‌ ಗೌರವಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಪಾಕಿಸ್ತಾನಕ್ಕೆ ತಿಳಿಸಿದ್ದಾರೆ.

ತಡರಾತ್ರಿ ಪಾಕ್‌ ವಿದೇಶಾಂಗ ಸಚಿವ ಮಹ್ಮೂದ್‌ ಖುರೇಷಿ ಅವರೊಂದಿಗೆ ಮಾತನಾಡಿದ ಬಳಿಕ, ಎಲ್ಲ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲೇಬೇಕು ಎಂದು ತನ್ನ ಹೇಳಿಕೆಯಲ್ಲಿ ಪಾಕ್‌ಗೆ ಒತ್ತಿ ಹೇಳಿದೆ.

ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವ ಕೃತ್ಯಗಳನ್ನು ಚೀನಾವು ಎದುರು ನೋಡುತ್ತಿಲ್ಲ ಎಂದು ಹೇಳಿದ್ದಾರೆ.

ದೂರವಾಣಿ ಸಂಭಾಷಣೆಯ ವೇಳೆ ಖುರೇಷಿ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯ ಉಭಯ ರಾಷ್ಟ್ರಗಳ ನಡುವೆ ತಲೆದೋರಿರುವ ಸಮಸ್ಯೆಯನ್ನು ನಿವಾರಿಸುವಲ್ಲಿ ಚೀನಾವು ಪಾತ್ರ ವಹಿಸುತ್ತದೆ. ಪರಿಸ್ಥಿತಿಯು ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಎರಡೂ ರಾಷ್ಟ್ರಗಳು ಸಂಯಮ ಮತ್ತು ತಮ್ಮ ಬದ್ಧತೆಗಳನ್ನು ಕಾಯ್ದುಕೊಳ್ಳಬೇಕು ಎಂದು ಮನಃಪೂರ್ವಕವಾಗಿ ಬಯಸುತ್ತೇವೆ ಎಂದು ಹೇಳಿದೆ.

ರಷ್ಯಾ, ಭಾರತ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಭೆಗೆಂದು ತೆರಳಿದ್ದ ಸುಷ್ಮಾ ಸ್ವರಾಜ್‌ ಅವರು ಅಲ್ಲಿಂದ ತೆರಳಿದ ಬಳಿಕ ವಾಂಗ್‌ ಮತ್ತು ಖುರೇಷಿ ಮಾತನಾಡಿದ್ದಾರೆ.

ಇನ್ನು ಮೂರು ರಾಷ್ಟ್ರಗಳು ಸಭೆಯ ಬಳಿಕ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಆರ್‌ಐಸಿ(Russia, India, and China) ಮೂರು ರಾಷ್ಟ್ರಗಳು ಭಯೋತ್ಪಾದನೆಯನ್ನು ಖಂಡಿಸಿದವು. ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಮತ್ತು ರಾಜಕೀಯ ಮತ್ತು ಭೌಗೋಳಿಕ ರಾಜಕೀಯ ಗುರಿಗಳಿಗಾಗಿ ಬಳಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆಯನ್ನು ಪ್ರತಿಪಾದಿಸುವ, ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರೇರೇಪಿಸುವ, ಉತ್ತೇಜಿಸುವ ಅಥವಾ ಬೆಂಬಲಿಸುವವರು ಜವಾಬ್ದಾರರಾಗಿರಬೇಕು ಮತ್ತು ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಅಂತಾರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿ ನ್ಯಾಯವನ್ನು ಒದಗಿಸಬೇಕು ಎಂದು ಹೇಳಿದೆ. (ಏಜೆನ್ಸೀಸ್)