More

  ಕಲಬುರಗಿ ದೇವಸ್ಥಾನದ ಎದುರು ನಡೆಯಿತ್ತು ಮುಸ್ಲಿಂ ಯುವಕನ ಮದುವೆ

  ಕಲಬುರಗಿ: ಮುಸ್ಲಿಂ ಕುಟುಂಬವೊಂದು ಗೋಕರ್ಣದಲ್ಲಿ ಪಿತೃಕಾರ್ಯ ಮಾಡಿದ್ದು, ಬಿಹಾರದಲ್ಲಿ ಹಿಂದೂ ದೇಗುಲಕ್ಕೆ 1 ಎಕರೆ ಜಮೀನು ಕೊಟ್ಟಿರುವ ಸುದ್ದಿಯನ್ನು ನಾವು ಕೇಳಿದ್ದೇವೆ. ಹೀಗೆ ಕಲಬುರಗಿಯಲ್ಲೊಂದು ಮುಸ್ಲಿಂ ಕುಟುಂಬ ಮಗನ ಮದುವೆಯನ್ನು ದೇವಾಲ ಎದುರು ಮಾಡುವ ಮೂಲಕವಾಗಿ ಸುದ್ದಿಯಾಗಿದೆ.

  ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿ ಮಹಿಬೂಬ್‌ ಅಹ್ಮದ್‌ ಹಾರಕೂಡ ಎಂಬುವರ ಪುತ್ರ ಸಿಕಂದರ್‌ ಮದುವೆ ಗ್ರಾಮದ ಖಂಡೇಶ್ವರ ಪಾದಗಟ್ಟೆ ಎದುರು ವಿಜೃಂಭಣೆಯಿಂದ ನಡೆದಿದೆ.ಮದುವೆ ಶಾಸ್ತ್ರ ಮುಸ್ಲಿಂ ಧರ್ಮದ ಪ್ರಕಾರ ನಡೆದಿದ್ದು ಬಿಟ್ಟರೆ ಉಳಿದೆಲ್ಲವೂ ಲಿಂಗಾಯತ ಸಂಪ್ರದಾಯದ ಪ್ರಕಾರ ನಡೆಯಿತು.

  ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮನೆಗಳಿವೆ. ಇಲ್ಲಿಯವರೆಗೆ ಅವರೆಲ್ಲರೂ ಗ್ರಾಮದಲ್ಲಿರುವ ಎರಡೂ ದರ್ಗಾಗಳ ಎದುರು ವೇದಿಕೆ ಹಾಕಿ ಮದುವೆ ಮಾಡಿಸುತ್ತಿದ್ದರು. ಆದರೆ ಮಹಿಬೂಬ್‌ ಅವರು ಹಿಂದೂ ಸಮಾಜದವರೊಂದಿಗೆ ಕೂಡಿ ಖಂಡೇಶ್ವರನ ಪಾದುಕೆ ಎದುರು ಮದುವೆ ಮಾಡಿಸಿದರು.

  ಮದುವೆಯಲ್ಲಿ ಜವೆಗೋದಿ ಹುಗ್ಗಿ, ಉಳ್ಳಾಗಡ್ಡಿ ಚಟ್ನಿ, ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಮತ್ತು ಮಜ್ಜಿಗೆ ಬಂಧುಗಳು ಸವಿದರು.

  ಪೆಟ್ರೋಲ್ ಖಾಲಿಯಾದ್ರೂ ಬೈಕ್​ನಿಂದ ಇಳಿಯದ ಗ್ರಾಹಕ; ರ‍್ಯಾಪಿಡೋ ಸವಾರ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

  ನಟಿಯರಿಗೂ ಟಕ್ಕರ್ ಕೊಡೊ ಬ್ಯೂಟಿ ನಿವೇದಿತಾ; ಚಂದನ್​​ ಎಲ್ಲಿದ್ದೀಯಪ್ಪ? ನಿನ್ನ ಹೆಂಡ್ತಿ ಅವತಾರ ನೋಡೋಕಾಗ್ತಿಲ್ಲ ಎಂದ್ರು ನೆಟ್ಟಿಗರು

  ಆಫರ್​.. ಆಫರ್​..ಮಗುವಿಗೆ ಜನ್ಮ ನೀಡಿದ್ರೆ ಸಿಗುತ್ತೆ 62 ಲಕ್ಷ ರೂಪಾಯಿ

  ಸಲಿಂಗ ಜೋಡಿಯ ಅದ್ಧೂರಿ ವಿವಾಹ; ಹುಡುಗಿ ಜತೆ ಹುಡುಗಿ ಮದುವೆ

  ಪ್ರತಿದಿನ ಮೊಟ್ಟೆ ತಿನ್ನುತ್ತೀರಾ? ಹಾಗಿದ್ರೆ ನೀವು ತಿಳಿಯಲೇಬೇಕಾದ ವಿಚಾರ ಇಲ್ಲಿದೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts