ಮೇ 23ರಂದು ಜನಿಸಿದ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ ಉತ್ತರ ಪ್ರದೇಶದ ಮುಸ್ಲಿಂ ಕುಟುಂಬ

ಗೊಂಡಾ (ಉತ್ತರ ಪ್ರದೇಶ): ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೇ 23ರಂದು ಜನಿಸಿದ ತಮ್ಮ ಪುತ್ರನಿಗೆ ಮುಸ್ಲಿಂ ಕುಟುಂಬವೊಂದು ನರೇಂದ್ರ ಮೋದಿ ಎಂದು ನಾಮಕರಣ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಗುವಿನ ತಾಯಿ ಮೆನಾಜ್​ ಬೇಗಂ, ನನ್ನ ಪುತ್ರ ಮೇ 23ರಂದು ಜನಿಸಿದ. ಈ ಸುದ್ದಿಯನ್ನು ತಿಳಿಸಲು ದುಬೈನಲ್ಲಿರುವ ನನ್ನ ಪತಿಗೆ ದೂರವಾಣಿ ಕರೆ ಮಾಡಿದಾಗ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಯಿತೇ? ನರೇಂದ್ರ ಮೋದಿ ಗೆದ್ದರೇ ಎಂದು ಪ್ರಶ್ನಿಸಿದರು. ನಾನು ಹೌದೆಂದು ಉತ್ತರಿಸಿದೆ. ಅದಕ್ಕೆ ಅವರು ಪುತ್ರನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡುವಂತೆ ಹೇಳಿದರು. ಅದರಂತೆ ಮಾಡಿದೆ ಎಂದು ಹೇಳಿದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರಂತೆ ನನ್ನ ಮಗ ಕೂಡ ಉತ್ತಮ ಕೆಲಸ ಮಾಡಿ, ಯಶಸ್ಸಿನ ಉತ್ತುಂಗ ತಲುಪಲಿ ಎಂಬ ಹಾರೈಕೆಯೊಂದಿಗೆ ನರೇಂದ್ರ ಮೋದಿ ಅವರ ಹೆಸರನ್ನು ಇಟ್ಟಿರುವುದಾಗಿ ತಿಳಿಸಿದರು. (ಏಜೆನ್ಸೀಸ್​)

One Reply to “ಮೇ 23ರಂದು ಜನಿಸಿದ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ ಉತ್ತರ ಪ್ರದೇಶದ ಮುಸ್ಲಿಂ ಕುಟುಂಬ”

Leave a Reply

Your email address will not be published. Required fields are marked *