
ರಾಯಚೂರು ವಕ್ಪ್ ತಿದ್ದುಪಡಿ ಮಸೂದೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಚಕ್ ಬಚಾವ್ ಆಂದೋಲನ ಕಮಿಟಿಯಿಂದ ಶನಿವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಕಾಯ್ದೆ ಸಾಂವಿಧಾನಿಕ ಆಕ್ರಮಣ, ನ್ಯಾಯಕ್ಕಾಗಿ ಹೋರಾಟ, ವಕ್ಸ್ ಆಸ್ತಿ ಕಾಪಾಡೋಣ ಸೇವ್ ವಕ್, ಸಂವಿಧಾನ ರಕ್ಷಿಸಿ, ವಕ್ ರಾಜಕೀಯಗೊಳಿಸದಿರಿ, ಸಂವಿಧಾನ ವಿರೋಽ ಕಾಯ್ದೆಯನ್ನು ಹಿಂಪಡೆಯಿರಿ, ಸಂವಿಧಾನ ವಿರೋಽ ವಕ್ ಮಸೂದೆ ವಾಪಾಸಾಗಲಿ ಎಂದು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭನೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕ ಡಾ.ರಜಾಕ್ ಉಸ್ತಾದ್ ಮಾತನಾಡಿ, ಲೋಕಸಭೆ ಮತ್ತು ರಾಜ್ಯ ಸಭೆಯು ವಕ್ಪ್ ತಿದ್ದುಪಡಿ ಕಾಯ್ದೆ-೨೦೨೫ ಅನ್ನು ಅಂಗೀಕರಿಸಿದ್ದು, ಇದು ಸಂಪೂರ್ಣವಾಗಿ
ತಪ್ಪಾಗಿದೆ ಮತ್ತು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು. ವಕ್ಪ್ ತಿದ್ದುಪಡಿ ಕಾಯ್ದೆ ಸಂವಿಧಾನದ ೨೬ ನೇ ವಿಽಯು ಧಾರ್ಮಿಕ ಪಂಗಡಗಳಿಗೆ ಧರ್ಮದ ವಿಷಯದಲ್ಲಿ ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕುಗಳನ್ನು ನೀಡುತ್ತದೆ ಎಂಬುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಸಂವಿಧಾನದ ೨೯ ನೇ ವಿಽಯು ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುತ್ತದೆ. ವಕ್ಸ್ ತಿದ್ದುಪಡಿ ಕಾಯ್ದೆ, ೨೦೨೫ ಭಾರತದ ಸಂವಿಧಾನದ ವಿಽ ೧೪, ೧೫, ೨೫, ೨೬, ೨೯ಎಯ ನೇರ ಈ ಕಾಯ್ದೆಯು ಉಲ್ಲಂಘನೆಯಾಗಿದೆ, ಧರ್ಮದ ಸ್ವಾತಂತ್ರ‍್ಯ ಮತ್ತು ಆಸ್ತಿಯ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡುತ್ತದೆ ವಕ್ಪ್ ತಿದ್ದುಪಡಿ ಕಾಯ್ದೆಯು ವಕ್ ನ ಹಿತಾಸಕ್ತಿಗೆ ವಿರುದ್ಧವಾಗಿದೆ.
ಇದು ಮಿತಿ ಕಾಯ್ದೆಯ ವಿನಾಯಿತಿಯನ್ನು ತೆಗೆದುಹಾಕಲು ಉದ್ದೇಶಿಸಿದೆ ಮತ್ತು ಭಾರತದ ಸುಪ್ರೀಂ ಕೋರ್ಟ್ ಲ್ಯಾಂಡ್‌ಮಾರ್ಕ್ ತೀರ್ಪಿ ನಲ್ಲಿ ಬಳಕೆದಾರರಿಂದ ವಕ್ ಪರಿಕಲ್ಪನೆಯನ್ನು ಅನುಮೋದಿಸಿದೆ. ಇದು ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು ವಕ್ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ವಕ್ಸ್ ಮಂಡಳಿ ಮತ್ತು ಅದರ ಸಿಇಒ ವಕ್ಸ್ ಕಾಯ್ದೆಯ ಸೆಕ್ಷನ್ ೩೬ ಮತ್ತು ೪೦ ರ ಅಡಿಯಲ್ಲಿ ವಕ್ಸ್ ಅನ್ನು ನೋಂದಾಯಿಸುವ ಅಽಕಾರವನ್ನು ತೆಗೆದುಹಾಕುತ್ತದೆ,
ಇದರಿಂದಾಗಿ ವಕ್ ಮಂಡಳಿಯ ಅಽಕಾರವನ್ನು ದುರ್ಬಲಗೊಳಿಸುವುದನ್ನು ಪೂರ್ಣಗೊಳಿಸುತ್ತದೆ ಆದರಿಂದ ಸರ್ಕಾರ ಕೂಡಲೇ ಸಂವಿಧಾನ ವಿರೋಽಯಾದ ವಕ್ ತಿದ್ದುಪಡಿ ಕಾಯಿದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಸ್ಲಂ ಪಾಷಾ, ಮೌಲಾನಾ ರಫಿಕ್, -Àರೀದ್ ಖಾನ್,ಮೊಹಮ್ಮದ್ ಶಾಲಂ, ಮೌಲನಾ ಮೊಹಮ್ಮದ್,ಮಹಮದ್ -Áರುಖ್, ಸಾಜೀದ್ ಸಮೀರ್, ಅಬ್ದುಲ್ ಕರೀಂ, ಅಕ್ಬರ್ ಹುಸೇನ್ ನಾಗುಂಡಿ, ಪರೀದ್‌ಖಾನ್, ಎಂಕೆ ಬಾಬರ್, ಮಹಮದ್ ತೇರಜ್, ಮೌಲನಾ ರಫೀಕ್ ಸಾಬ, ಸೈಯದ್ ಅಶ್ರ-ï ರಜಾ, ಹಮ್ರಾಜ್, ಯೂಸೂ-ï ಖಾನ್, ಸೈಯದ್ ಅಕ್ಬರ್ ಪಾಷಾ ಸೇರಿ ಅನೇಕರು ಇದ್ದರು.