ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆ ಗುಡದೂರು ಬಳಿ 65ನೇ ಉಪಕಾಲುವೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಬುಧವಾರ ಭೇಟಿ ನೀಡಿ, ಗೇಜ್ ಪರಿಶೀಲಿಸಿದರು.

ರೈತರ ಗದ್ದೆಗಳಿಗೆ ನೀರು ಕೊರತೆಯಾಗದಂತೆ ಪೂರ್ಣ ಪ್ರಮಾಣದಲ್ಲಿ ಹರಿಸಬೇಕು. ಯಾವುದೇ ಕಾರಣಕ್ಕೂ ನೀರು ಸ್ಥಗಿತ ಮಾಡಬಾರದು ಎಂದು ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು.
ಕೆಳ ಭಾಗದ ರೈತರಿಗೆ ನೀರು ಒದಗಿಸಲು ತಕರಾರು ಇಲ್ಲ. ಆದರೆ, ಮೇಲೆ ಭಾಗದಲ್ಲಿ ನೀರು ಪೊಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳಿಗಿದೆ. ಸಮರ್ಪಕವಾಗಿ ನೀರು ಹರಿಯುವಂತೆ ನೋಡಿಕೊಳ್ಳಿ ಎಂದು ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಮೇಲ್ಭಾಗದಲ್ಲಿ ಅನಧಿಕೃತವಾಗಿ ನೀರು ಬಳಸಿಕೊಳ್ಳುತ್ತಿದ್ದು ನಮಗೆ ನೀರಿನ ತೊಂದರೆ ಆಗುತ್ತಿದೆ ಎಂದು ರೈತರು ಶಾಸಕರಿಗೆ ಅಳಲು ತೊಂಡಿಕೊಂಡರು.