ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ

ಬೆಂಗಳೂರು: ಕೊಡಗು ಮರುನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಜ್ಯೋತಿ ಚಾರಿಟಬಲ್ ಟ್ರಸ್ಟ್ ಖ್ಯಾತ ಗಾಯಕ ವಿಜಯಪ್ರಕಾಶ್ ನೇತೃತ್ವದ ಸಂಗೀತ ರಸಸಂಜೆ ಏರ್ಪಡಿಸಿದೆ. ಮಾ.16ರ ಸಂಜೆ 6ಕ್ಕೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜು ಕ್ಯಾಂಪಸ್​ನಲ್ಲಿ ರಸಸಂಜೆ ನಡೆಯಲಿದೆ.

‘ಕೊಡಗಿಗಾಗಿ ಓಟ’ ಶೀರ್ಷಿಕೆಯ ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ಮಾಧ್ಯಮ ಸಹಯೋಗವಿದೆ. ಕೊಡಗಿನ ಮೊಣ್ಣಂಗೇರಿ ಗ್ರಾಮಸ್ಥರಿಗೆ ಮನೆ, ವೈದ್ಯಕೀಯ ಸವಲತ್ತು ಒದಗಿಸಲು ರಸಸಂಜೆ ಆಯೋಜಿಸಲಾಗಿದೆ ಎಂದು ಟ್ರಸ್ಟ್​ನ ಟ್ರಸ್ಟಿ ಎಂ. ನರಸಿಂಹನ್ ತಿಳಿಸಿದ್ದಾರೆ.

ಗಣ್ಯರ ಉಪಸ್ಥಿತಿ: ಶಾಸಕರಾದ ಎಸ್.ಟಿ. ಸೋಮಶೇಖರ್, ರವಿ ಸುಬ್ರಮಣ್ಯ, ಡಾ. ಉದಯ್ ಬಿ. ಗರುಡಾಚಾರ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಎಡಿಜಿಪಿ ಭಾಸ್ಕರ್ ರಾವ್, ಬೆಂಗಳೂರು ದಕ್ಷಿಣ ಡಿಸಿಪಿ ಕೆ. ಅಣ್ಣಾಮಲೈ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಟ ಉಪೇಂದ್ರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ನರಸಿಂಹನ್ ತಿಳಿಸಿದ್ದಾರೆ.

ಉಚಿತ ಪಾಸ್

ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು www.vijayavani.net ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ಸರಳ ಪ್ರಶ್ನೆಗೆ ಉತ್ತರಿಸಿದರೆ ಉಚಿತ ಪಾಸ್ ನಿಮ್ಮದಾಗುತ್ತದೆ.

ಬುಕ್ ಮೈ ಶೋನಲ್ಲಿ ಟಿಕೆಟ್

ಸಂಗೀತ ರಸಸಂಜೆಗೆ ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸಿ ಕೊಳ್ಳಬಹುದು. ವಿವರಕ್ಕೆ www.forcoorg.com ವೆಬ್​ಸೈಟ್ ವೀಕ್ಷಿಸಬಹುದು. ದೂ: 85500 15370

3 Replies to “ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ”

Comments are closed.