More

    ಯುವಕರ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ

    ಧಾರವಾಡ: ಸುಗಮ ಸಂಗೀತ ಕಲಾವಿದರು ಸಾಕಷ್ಟು ಇದ್ದಾರೆ. ಆದರೆ, ವೇದಿಕೆ ಒದಗಿಸುವ ಅವಕಾಶಗಳನ್ನು ನೀಡುವ ಸಂಘ- ಸಂಸ್ಥೆಗಳು ವಿರಳ. ಆ ನಿಟ್ಟಿನಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ೧೭ ವರ್ಷದಿಂದ ಯುವ ಕಲಾವಿದರಿಗೆ ಅವಕಾಶ ಕೊಟ್ಟು ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದು ಖ್ಯಾತ ವಾಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ ಹೇಳಿದರು.
    ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ೧೭ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಂಗೀತ ಕ್ಷೇತ್ರ ಎ¯್ಲ ವರ್ಗದವರನ್ನು ಗೌರವಿಸುತ್ತದೆ. ಅದರಲ್ಲಿ ಆಸಕ್ತಿ¬ಂದ ತೊಡಗಿಕೊಂಡವರನ್ನು ಮÁತ್ರ ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ ಎಂದರು.
    ಸAಗೀತಗಾರ ಮಲ್ಲಿಕಾರ್ಜುನ ತರ್ಲಘಟ್ಟಿ ಮÁತನಾಡಿ, ಮನೋವಿಜ್ಞಾನ, ಸಂಗೀತ ಒಂದಕ್ಕೊAದು ಪೂರಕ ಎಂದರು.
    ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಎಚ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಉದ್ಘೋಷಕ ಡಾ. ಶಶಿಧರ ನರೇಂದ್ರ, ವಕೀಲ ಪ್ರಕಾಶ ಉಡಿಕೇರಿ, ರೇಷ್ಮೆ ಮÁರಾಟ ಮಂಡಳಿಯ ಮÁಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮÁರ ಬೆಕ್ಕೇರಿ, ಇತರರಿದ್ದರು.
    ಸಂಗೀತ ಸಾಧಕ ದಂಪತಿ ಡಾ. ಶ್ರೀಧರ ಕುಲಕರ್ಣಿ ಮತ್ತು ವಿದುಷಿ ಶ್ರುತಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ನಂತರ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜ ಹಿರೇಮಠ ಹಾರ್ಮೋನಿಯಂ ಮತ್ತು ರಾಜಕುಮÁರ ತಬಲಾ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts