ಕುಕನೂರು: ಗದಗಿನ ಡಾ.ಪುಟ್ಟರಾಜ ಗವಾಯಿಗಳು ಅಂಧರ ಬಾಳಿಗೆ ಬೆಳಕು ನೀಡಿದ ಪುಣ್ಯಾತ್ಮ ಎಂದು ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ಹೇಳಿದರು. ತಾಲೂಕಿನ ಮಂಗಳೂರು ಮಂಗಳೇಶ್ವರ ದೇವಸ್ಥಾನದಲ್ಲಿ ಶ್ರೀ ಗುರುಪುಟ್ಟರಾಜ ಕವಿ ಗವಾಯಿಗಳ 14ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಸಂಗೀತ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಇದನ್ನು ಓದಿ:ಪುಟ್ಟರಾಜರ ಪುಣ್ಯ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ 17ರಂದು
ಉತ್ತರ ಕರ್ನಾಟಕ ಭಾಗದ ಸಂಗೀತ ಕಲಾವಿದರು ಪುಟ್ಟರಾಜರನ್ನು ಸ್ಮರಣೆ ಮಾಡುವ ಮೂಲಕ ಸಂಗೀತ ಕಾರ್ಯಕ್ರಮ ಪ್ರಾರಂಭಿಸುತ್ತಾರೆ. ಗವಾಯಿಗಳ ಪುಣ್ಯಾರಾಧನೆ ಪ್ರತಿ ಗ್ರಾಮಗಳಲ್ಲಿ ಮಾಡಲಾಗುತ್ತದೆ. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳ ಜತೆ ತಬಲಾ, ಹಾರ್ಮೋನಿಯಂ, ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯ ನುಡಿಸುವಲ್ಲಿ ಪರಿಣತರಾಗಿದ್ದರು.
ಸಂಗೀತ ಕ್ಷೇತ್ರದಲ್ಲಿ ಪುಟ್ಟರಾಜರ ಹೆಸರು ಅಜರಾಮರ ಎಂದರು. ಭಜನಾ ಮಂಡಳಿ ಸದಸ್ಯರಾದ ಮಂಗಳೇಶ ಯತ್ನಟ್ಟಿ, ಚನ್ನಪ್ಪ ಉಳ್ಳಾಗಡ್ಡಿ, ಹನಮಂತಪ್ಪ ಭಜಂತ್ರಿ, ಕಲಾವಿದರಾದ ಸುಜಾತಾ ಮಹೇಶ ಬಂಡ್ರಕಲ್, ರಾಜೇಂದ್ರ ಚಿನ್ನೂರ, ಮಾಬುಸಾಬ ನೂರ್‌ಬಾಷಾ, ಆನಂದ ಚಿನ್ನೂರ, ಶರಣಪ್ಪ ಉಮಚಗಿ, ಮಂಗಳೇಶ ಎಲಿಗಾರ, ವಿಜಯಲಕ್ಷ್ಮೀ ಎಲಿಗಾರ, ಮುದಕಯ್ಯಸ್ವಾಮಿ, ಶರಣಯ್ಯ ಕಲ್ಮಠ, ಪ್ರಕಾಶ ಬೆಲ್ಲದ, ವೀರೇಶ ಉಮಚಗಿ ಇತರರಿದ್ದರು.