20.4 C
Bangalore
Monday, December 9, 2019

ಅಮರ ಗಾಯಕ ಮೊಹಮ್ಮದ್ ರಫಿ

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ಕವಿಯ ಕಲ್ಪನೆಯ ಆಳಕ್ಕಿಳಿದು, ಸಂಗೀತ ನಿರ್ದೇಶಕನ ನಿರೀಕ್ಷೆಯನ್ನು ಮೀರಿ ಪಾತ್ರಧಾರಿಯ ದನಿಗೆ ಹೊಂದುವಂತೆ ಕಂಠ ಬದಲಿಸಿ, ಹಾಡಿನ ಭಾವಾರ್ಥ ಗೂಢಾರ್ಥಗಳ ಒಳಹೊಕ್ಕು ಅತ್ಯಂತ ಸರಳವಾಗಿ ಸಹಜವಾಗಿ ನಾದದ ಒಂದು ದಿವ್ಯಲೋಕವನ್ನೇ ಸೃಷ್ಟಿಸಿ ಕೇಳುವ ಮನಸ್ಸುಗಳಿಗೆ ಬಹುಕಾಲ ಮುದ ನೀಡುವಂಥ ಗೀತೆಗಳನ್ನು ಧಾರೆಯೆರೆದು ಹೋಗಿರುವ ಗಾನಗಂಧರ್ವ ಮೊಹಮ್ಮದ್ ರಫಿ ಕಣ್ಮರೆಯಾಗಿ ಜುಲೈ 31ಕ್ಕೆ 38 ವರ್ಷ.

|ಎಂ. ವಿಶ್ವನಾಥ್

ಪ್ರತಿಯೊಂದು ಗೀತೆಯ ಹಿಂದೆ ಒಂದು ಪಾತ್ರ, ಸಂದರ್ಭ, ಸಾಹಿತ್ಯ ಇರುತ್ತದೆ. ಹೀಗಾಗಿ ಹಲವು ಪರಿಮಿತಿಗಳ ನಡುವೆಯೂ ಪಾತ್ರೋಚಿತವಾಗಿ ಸಾಂರ್ದಭಿಕವಾಗಿ, ಸಾಹಿತ್ಯಕವಾಗಿ ಹಾಡುವುದರ ಜೊತೆಗೆ ಆ ಸಂದರ್ಭದ ಭಾವವನ್ನು ತನ್ನ ಲಹರಿಯಲ್ಲಿ ಎಳೆಎಳೆಯಾಗಿ ಬಿಡಿಸಿಡುವ ವಿಶೇಷ ಶಕ್ತಿ ಬೇಕು. ರೂಢಿಸಿಕೊಂಡರೆ ಬರುವ ಸಾಮರ್ಥ್ಯ ಇದಲ್ಲ, ಭಗವಂತನ ಕೃಪೆ ಎನ್ನುತ್ತಾರೆ ಭಾರತರತ್ನ ಲತಾಮಂಗೇಶ್ಕರ್. ಅಂಥದೇ ಇನ್ನೊಂದು ರತ್ನ ನಮ್ಮ ಮೊಹಮ್ಮದ್ ರಫಿ.

ದೈವದತ್ತ ಕಂಠಮಾಧುರ್ಯ , ಪ್ರತಿಭೆ ಮತ್ತು ಸಾಮರ್ಥ್ಯಳೊಂದಿಗೆ ಅಪಾರ ಪರಿಶ್ರಮವನ್ನು ಮೇಳೈಸಿ ಪ್ರೇಮಗೀತೆ, ವಿರಹಗೀತೆ, ಶೋಕಗೀತೆ, ಭಕ್ತಿಗೀತೆ, ಖವ್ವಾಲಿ, ಗಜಲ್,ಭಜನೆ ಹೀಗೆ ಎಲ್ಲ ಪ್ರಕಾರದ ಸಾವಿರಾರು ಗೀತೆಗಳ ಮೂಲಕ ಇಡೀ ಭಾರತದ ದನಿಯಾಗಿ ಕಾಲಮಾನದ ವ್ಯಾಪ್ತಿಯನ್ನು ಮೀರಿ ಕೋಟ್ಯಂತರ ಹೃದಯಗಳನ್ನು ಆವಾಹಿಸಿರುವ ಅಪ್ರತಿಮ ಗಾಯಕ ಇವರು.

1924ರ ಡಿ.24ರಂದು ಪಂಜಾಬಿನ ಅಮೃತಸರ್ ಜಿಲ್ಲೆಯ ಕೋಟ್ಲಾ ಸುಲ್ತಾನ್​ಸಿಂಗ್ ಎಂಬ ಗ್ರಾಮದಲ್ಲಿ ಜನಿಸಿದ ರಫಿ ಸುಮಾರು ಒಂದು ಸಾವಿರ ಚಲನಚಿತ್ರಗಳಲ್ಲಿ, ಭಾರತದ ಹದಿನಾಲ್ಕು ಭಾಷೆಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್, ಪಾರ್ಸಿ, ಅರೇಬಿಕ್, ಸಿಂಹಳಿ ಮತ್ತು ಡಚ್ ಭಾಷೆಗಳಲ್ಲಿಯೂ ಹಾಡಿದ್ದಾರೆ.

ಪಂಜಾಬಿನ ಕುಗ್ರಾಮವೊಂದರಲ್ಲಿ ಸಂಗೀತದ ಯಾವುದೇ ಗಾಳಿಗಂಧವಿಲ್ಲದ ಕುಟುಂಬದಲ್ಲಿ ಹುಟ್ಟಿದ್ದರೂ ದೈವದತ್ತವಾಗಿ ಗಾಯನ ಕಲೆಯನ್ನು ಪಡೆದುಕೊಂಡಿದ್ದ ರಫಿಯ ಬದುಕಿನಲ್ಲಿ ಗಾಯನಕ್ಕೆ ಸ್ಪೂರ್ತಿ ನೀಡಿದವನೆಂದರೆ ದಿನನಿತ್ಯವೂ ಹಾಡುತ್ತಾ ಅವರ ಮನೆಯ ಮುಂದೆ ಭಿಕ್ಷೆಗೆ ಬರುತ್ತಿದ್ದ ಒಬ್ಬ ಫಕೀರ. ಅವನ ಬರುವಿಕೆಯನ್ನೇ ನಿತ್ಯವೂ ಎದುರು ನೋಡುತ್ತಿದ್ದ ಬಾಲಕ ರಫಿ ಅದೇ ಹಾಡನ್ನು ತಾನೂ ಕಲಿತು ಹಾಡಿಕೊಂಡು ಅದೆಷ್ಟೋ ದಿನ ಅವನನ್ನೇ ಹಿಂಬಾಲಿಸಿಕೊಂಡು ಹೋಗಿಬಿಡುತ್ತಿದ್ದನಂತೆ. ಹೊಟ್ಟೆಪಾಡಿಗಾಗಿ ಹಳ್ಳಿಬಿಟ್ಟು 1935ರಲ್ಲಿ ಲಾಹೋರ್​ಗೆ ವಲಸೆಹೋದ ತಂದೆ ಮಗನ ಆಸಕ್ತಿ ನೋಡಿ ಅಲ್ಲಿ ಸಂಗೀತದ ಶಿಕ್ಷಣ ಕೊಡಿಸಿದರು. ಹೀಗಾಗಿ ಬಾಲಕ ರಫಿ ತನ್ನ 13ನೇ ವಯಸ್ಸಿನಲ್ಲಿಯೇ ವೇದಿಕೆ ಹತ್ತಿ ಲಾಹೋರ್​ನಲ್ಲಿ ಹಾಡಿಬಿಟ್ಟ . ಅದೂ ತನ್ನ ನೆಚ್ಚಿನ ಗಾಯಕ ಕೆ.ಎಲ್. ಸೈಗಾಲ್ ಸಮ್ಮುಖದಲ್ಲಿ ! ಇದು ರಫಿಯ ಬದುಕಿನ ಮೊದಲ ಬೆಳಕು.

ಮುಂದೆ ಶ್ಯಾಮಸುಂದರ್ ಸಂಗೀತ ನಿರ್ದೇಶನದಲ್ಲಿ 1941ರಲ್ಲಿ ಲಾಹೋರ್​ನಲ್ಲಿಯೇ ಒಂದು ಪಂಜಾಬಿ ಚಿತ್ರ ಗುಲ್​ಬಲೋಚ್​ಗಾಗಿ , ಆ ಕಾಲದ ಪ್ರಸಿದ್ಧ ಗಾಯಕಿ ಜೀನತ್ ಬೇಗಂ ಜೊತೆ ಸೋನಿಯೇನೀ ಹೀರಿಯೇನೀ ಎಂಬ ಗೀತೆ ಹಾಡಿದಾಗ ರಫಿಗೆ ಹದಿನೇಳು ವರ್ಷ. ಇದು ಅವರ ಮೊಟ್ಟಮೊದಲ ಧ್ವನಿಮುದ್ರಿತ ಗೀತೆ. ಆ ಕಾಲದ ಪ್ರಸಿದ್ಧ ಚಿತ್ರನಗರಿಯಾಗಿದ್ದ ಮುಂಬೈಗೆ ಬಂದ ರಫಿ ಕುಖ್ಯಾತ ಬೀದಿ ಭೇಂಡಿ ಬಜಾರ್​ನಲ್ಲೊಂದು ಸಣ್ಣ ಕೊಠಡಿ ಮಾಡಿ ಅವಕಾಶಗಳಿಗಾಗಿ ಅಲೆಯತೊಡಗಿದಾಗ ತನ್ವೀರ್​ನಖ್ವಿ ಅವರನ್ನು ಆ ಕಾಲದ ಪ್ರಸಿದ್ಧ ಚಿತ್ರ ನಿರ್ವಪಕರುಗಳಾಗಿದ್ದ ಎ.ಆರ್. ಕರ್ದಾರ್ , ಮೆಹಬೂಬ್ ಖಾನ್ ಮತ್ತು ನಜೀರ್ ಅವರಿಗೆ ಪರಿಚಯ ಮಾಡಿಕೊಟ್ಟರು.

ಲಾಹೋರ್​ನಲ್ಲಿ ಹಾಡಿಸಿದ್ದ ಸಂಗೀತ ನಿರ್ದೇಶಕ ಶ್ಯಾಮಸುಂದರ್ ಮುಂಬೈನಲ್ಲಿ ಮತ್ತೆ ಆಪದ್ರಕ್ಷಕರಾಗಿ ಬಂದರು.1945ರಲ್ಲಿ, ಗಾವ್ ಕಿ ಗೋರಿ ಹಿಂದಿ ಚಿತ್ರಕ್ಕಾಗಿ ನಟ, ಗಾಯಕ ಜಿ.ಎಂ. ದುರಾನಿ ಜೊತೆ ಅಜಿ ದಿಲ್ ಹೋ ಕಾಬೂಮೆ ತೊ ದಿಲ್ದಾರ್ ಕಿ ಐಸಿ ತೈಸಿ …. ಹಾಡಿಸಿದರು. ಇದು ರಫಿಯವರ ಪ್ರಪ್ರಥಮ ಹಿಂದಿ ಚಿತ್ರಗೀತೆಯಾಯಿತು. ವಾಸ್ತವವಾಗಿ ನೌಷಾದ್ ನಿರ್ದೇಶನದಲ್ಲಿ ಇದಕ್ಕೆ ಮುಂಚೆಯೇ 1944ರಲ್ಲಿ ಎ.ಆರ್. ಕರ್ದಾರ್ ಅವರ ಪಹಲೇ ಆಪ್ ಚಿತ್ರಕ್ಕಾಗಿ ಹಿಂದುಸ್ತಾನ್ ಕೆ ಹಂ ಹೈ ಎಂಬ ಗೀತೆಯನ್ನು ಹಾಡಿದ್ದರೂ ಆ ಚಿತ್ರ ತಡವಾಗಿ ಬಿಡುಗಡೆಯಾಯಿತು.

1945ರಿಂದ 48ರವರೆಗೆ ಕೇವಲ ಸಮೂಹ ಗೀತೆಗಳಲ್ಲಿ ಹಾಡಿದ ರಫಿ ಅವರಿಗೆ ಸ್ವಂತ ಗೀತೆಗಳು ಸುಲಭವಾಗಿ ಸಿಕ್ಕಲಿಲ್ಲ. 1948 ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹುಸ್ನ್​ಲಾಲ್ ಭಗತ್​ರಾಂ, ಗೀತಕಾರ ರಾಜೇಂದ್ರಕೃಷ್ಣ ಮತ್ತು ಗಾಯಕ ರಫಿ ಸೇರಿ ನಿರ್ವಿುಸಿದ ಸುನೋ ಸುನೋ ಯೇ ದುನಿಯಾವಾಲೋ ಬಾಪೂಜೀ ಕಿ ಅಮರ್ ಕಹಾನಿ ಎಂಬ ಗೀತೆಯನ್ನು ಕೇಳಿ ಕಣ್ಣೀರು ಹಾಕಿದ ಪ್ರಧಾನಿ ಜವಹರಲಾಲ್ ನೆಹರೂ ಆ ಗೀತೆ ಹಾಡುವುದಕ್ಕೆಂದೇ ವಿಶೇಷವಾಗಿ ತಮ್ಮ ಭವನಕ್ಕೆ ರಫಿಯವರನ್ನು ಆಹ್ವಾನಿಸಿದ್ದಲ್ಲದೆ 1948 ರ ಸ್ವಾತಂತ್ರ್ಯ ದಿನಾಚರಣೆಯ ದಿವಸ ಅವರಿಗೊಂದು ವಿಶೇಷ ರಜತ ಪದಕವನ್ನೂ ನೀಡಿ ಗೌರವಿಸಿದರು. ಇಡೀ ದೇಶದಲ್ಲಿ ಬಾಪೂ ಸಾವಿನ ದುಃಖದ ಕಿಚ್ಚು ಹೊತ್ತಿಸಿದ ಈ ಗೀತೆ ರಫಿ ಬದುಕಿನ ಭಾಗ್ಯದ ಬಾಗಿಲನ್ನೇ ತೆರೆಯಿತು.

ಪಹಲೆ ಆಪ್​ನಿಂದ ಪ್ರಾರಂಭವಾದ ನೌಷಾದ್ ರಫಿ ಜೋಡಿ, ಬೈಜು ಬಾವ್ರಾದ ಓ ದುನಿಯಾಕೆ ರಖ್ವಾಲೆ ಮತ್ತು ಮನ್ ತರ್​ಪತ್ ಹರಿ ದರುಶನ್ ಕೊ ಆಜ್, ಮೊಘಲ್- ಎ- ಆಜಂನ – ನೂರು ಸಮೂಹ ಗಾಯಕರೊಂದಿಗೆ ಹಾಡಿದ ಜಿಂದಾಬಾದ್ ಜಿಂದಾಬಾದ್ ಐ ಮುಹಬ್ಬತ್ ಜಿಂದಾಬಾದ್ ಮುಂತಾದ ಅಮರ ಗೀತೆಗಳನ್ನು ನೀಡಿತು. ನೌಷಾದ್ ಜೊತೆ ರಫಿ 149 ಗೀತೆಗಳನ್ನು ಹಾಡಿರುವುದು ದಾಖಲೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವುದಕ್ಕೆ ಇಪ್ಪತ್ತು ವಿಧಾನಗಳಿದ್ದರೆ ಅದಷ್ಟೂ ವಿಧಾನಗಳು ರಫಿಗೆ ಗೊತ್ತಿತ್ತು ಮತ್ತು ಅವರ ಹಾಡುಗಳಲ್ಲಿ ಸಹಜವಾಗಿ ಹೊರಹೊಮ್ಮುತ್ತಿದ್ದವು ಎಂದು ಹೇಳುತ್ತಿದ್ದರು ನೌಷಾದ್. ಮುಂದೆ ಎಸ್.ಡಿ. ಬರ್ಮನ್ ಕಣ್ಣಿಗೆ ಬಿದ್ದ ರಫಿ, ಗುರುದತ್ ಮತ್ತು ದೇವಾನಂದ್ ದನಿಯಾಗಿ ಪ್ಯಾಸಾ, ಕಾಗಜ್ ಕೆ ಫೂಲ್, ಕಾಲಾಬಜಾರ್, ನೌದೋ ಗ್ಯಾರಾ, ಕಾಲಾಪಾನಿ, ತೆರೆ ಘರ್​ಕೆ ಸಾಮ್ನೆ, ಗೈಡ್, ಆರಾಧನಾ, ಅಭಿಮಾನ್​ವರೆಗೆ 37 ಚಿತ್ರಗಳ ಮೂಲಕ ನೂರಾರು ವೈವಿಧ್ಯಮಯ ಅಮರ ಗೀತೆಗಳ ಸೃ್ಟರ್ತರಾದರು.

ನಂತರದಲ್ಲಿ ಪ್ರಾರಂಭವಾದ ಶಂಕರ್ ಜೈಕಿಶನ್ ಮೋಡಿಯಲ್ಲಿ ಶಮ್ಮಿಕಪೂರ್, ಶಶಿಕಪೂರ್, ರಾಜೇಂದ್ರಕುಮಾರ್, ಮನೋಜ್ ಕುಮಾರ್, ಧಮೇಂದ್ರ ಅವರಿಗೆ ದನಿಯಾಗಿ ರಫಿ 341 ಕ್ಕೆ ಹೆಚ್ಚು ಹಾಡುಗಳನ್ನು ಹಾಡಿದರು. ಬಸಂತ್​ಬಹಾರ್ , ಫೊ›ಫೆಸರ್, ಬ್ರಹ್ಮಚಾರಿ, ಸೂರಜ್, ಜಂಗ್ಲಿ, ಜಾನ್ವರ್, ಎನ್ ಈವನಿಂಗ್ ಇನ್ ಪ್ಯಾರಿಸ್, ದಿಲ್ ತೇರಾ ದೀವಾನಾ, ಲವ್ ಇನ್ ಟೋಕಿಯೋ, ಬೇಟಿ ಬೇಟೆ, ದಿಲ್ ಏಕ್ ಮಂದಿರ್ ಹೀಗೆ ಸಾಲುಸಾಲು ಚಿತ್ರಗಳ ಮೂಲಕ ರಫಿ ವಿನೂತನ ನಾದ ಸಾಮ್ರಾಜ್ಯವನ್ನೇ ತೆರೆದಿಟ್ಟರು.

ಮೂರೂ ಸ್ಥಾಯಿಗಳಲ್ಲಿ ಸಮರ್ಥವಾಗಿ ಹಾಡಬಲ್ಲ ಅದ್ಭುತ ಪ್ರತಿಭೆಯಿದ್ದ ರಫಿಯವರನ್ನು ರವಿ ಮತ್ತು ಮದನ್ ಮೋಹನ್ ವಿಶೇಷವಾಗಿ ಬಳಸಿಕೊಂಡಿದ್ದು ಒಂದು ಅಚ್ಚಳಿಯದ ದಾಖಲೆ. ರವಿಯವರ ಚಾಂದನೀ ಕಾ ಚಾಂದ್, ನೀಲ್ ಕಮಲ್, ಚೈನಾಟೌನ್, ಕಾಜಲ್ ಮತ್ತು ದೋ ಬದನ್, ಮದನ್ ಹಾಗೂ ಮೋಹನ್ ಅವರ ಸಂಜೋಗ್, ಹಕೀಕತ್, ಪೂಜಾ ಕೆ ಫೂಲ್, ಹಸ್ತೇ ಜಖಂ, ಚಿರಾಗ್, ಗಜಲ್ ಮುಂತಾದ ಚಿತ್ರಗಳಲ್ಲಿನ ಸುಮಧುರ ಗೀತೆಗಳನ್ನು ಮರೆಯಲು ಸಾಧ್ಯವೇ ?

ಮುಂದೆ ಲಕ್ಷ್ಮೀಕಾಂತ್- ಪ್ಯಾರೇಲಾಲ್, ಕಲ್ಯಾಣ್​ಜಿ ಆನಂದ್​ಜಿ, ಉಷಾ ಖನ್ನಾ, ರೋಶನ್, ಖಯ್ಯಾಂ, ಜಯದೇವ್, ಚಿತ್ರಗುಪ್ತ, ಆರ್.ಡಿ. ಬರ್ಮನ್, ಎಸ್.ಎನ್. ತ್ರಿಪಾಠಿ ಮುಂತಾದ ಹತ್ತಾರು ಸಂಗೀತ ನಿರ್ದೇಶಕರುಗಳೊಂದಿಗೆ ರಫಿ ಮರೆಯಲಾಗದ ಸಾವಿರಾರು ವೈವಿಧ್ಯಮಯ ಮಧುರ ಗೀತೆಗಳನ್ನು ಸೃಷ್ಟಿಸಿಕೊಟ್ಟರು.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದವರು ಓ.ಪಿ.ನಯ್ಯರ್, 50-60 ರ ದಶಕದಲ್ಲಿ ಇಡೀ ದೇಶ ಗುನಗುನಿಸುವಂಥ ಜನಪ್ರಿಯ ಗೀತೆಗಳನ್ನು ಸೃಷ್ಟಿಸಿದ ಜೋಡಿ ಇದು. ನಯ್ಯರ್ ಸಂಪರ್ಕಕ್ಕೆ ಬಂದಮೇಲೆ ತಮ್ಮ ಗಾಯನದಲ್ಲೊಂದು ಹೊಸ ಲವಲವಿಕೆ ಕಂಡುಕೊಂಡ ರಫಿ ಅಲ್ಲಿಂದಾಚೆಗೆ ಸಂಪೂರ್ಣ ಬದಲಾಗಿಬಿಟ್ಟರು. ನೂರು ವರ್ಷಕ್ಕೆ ಒಬ್ಬ ರಫಿ ಹುಟ್ಟುತ್ತಾರೆ ಎಂದು ಹೇಳುತ್ತಿದ್ದ ನಯ್ಯರ್ ರಫಿಯ ಕಟ್ಟಾ ಅಭಿಮಾನಿಯಾಗಿದ್ದರು. ಅವರ ವಿಶೇಷ ಸಂಯೋಜನೆಗಳು ಮತ್ತು ರಫಿಯ ವಿಶಿಷ್ಟ ಗಾಯನದಿಂದಾಗಿ ಸಂಗೀತಕ್ಷೇತ್ರ ಧನ್ಯವಾಗಿಹೋಯಿತು. ರಜತಪರದೆಯ ಬಂಗಾರದ ದನಿಯಾಗಿದ್ದ ರಫಿ ವ್ಯಕ್ತಿತ್ವದಲ್ಲೂ ಅಪರಂಜಿಯಾಗಿದ್ದರು. ಯಾವುದೇ ಚಟ, ಹಠ, ದುರ್ವ್ಯಸನಗಳಿಲ್ಲದ ದೈವಭಕ್ತನಾಗಿದ್ದು ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ. ಗಾಯನ ಅವರ ಉಸಿರಾಗಿತ್ತು, ತಪಸ್ಸಾಗಿತ್ತು. ಆದುದರಿಂದಲೇ ನಮಗೆ ಅವರ ಯಾವುದೇ ಗೀತೆ ಕೇಳಿದರೂ ಮನಸ್ಸು ಹಿತವಾದ ಭಾವನೆಗಳಿಂದ ತುಂಬಿ ತುಳುಕಾಡುತ್ತದೆ.

31 ಜುಲೈ 1980ರ ರಾತ್ರಿ 10.25 ಕ್ಕೆ ಹೃದಯಾಘಾತದಿಂದ ರಫಿ ನಿಧನರಾದ ದಿವಸ ಮುಂಬೈ ನಗರದಲ್ಲಿ ಭೋರ್ಗರೆವ ಮಳೆ. ಲಕ್ಷಾಂತರ ಅಭಿಮಾನಿಗಳು ಆ ಮಳೆಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದರು. ರಫಿಯವರ ಗಾಢ ಅಭಿಮಾನಿ ನಮ್ಮ ಪಿಬಿಎಸ್ ಮುಂಬೈಗೆ ತೆರಳಿದ್ದರೂ ಆ ಅಪಾರ ಜನಜಂಗುಳಿಯಲ್ಲಿ ಅಂತಿಮ ದರ್ಶನ ಪಡೆಯಲಾಗದೆ ಕಣ್ಣೀರು ಹಾಕಿಕೊಂಡು ಹಿಂತಿರುಗಿದರು. ರಫಿ, ಮಧುಬಾಲಾ ಮುಂತಾದ ಪ್ರಸಿದ್ಧ ನಟ ನಟಿಯರ ಸಮಾಧಿಗಳಿದ್ದ ಸ್ಥಳವನ್ನು 2010 ರಲ್ಲಿ ಮುಂಬೈ ನಗರಪಾಲಿಕೆ ಹೊಸ ಶವಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಅಗೆದುಹಾಕಿತು. ವರ್ಷಕ್ಕೆರಡು ಬಾರಿ ಸಮಾಧಿ ಸ್ಥಳಕ್ಕೆ ಬರುವ ಸಾವಿರಾರು ಅಭಿಮಾನಿಗಳು ಸಮಾಧಿ ಸ್ಥಳದ ಹತ್ತಿರದಲ್ಲಿದ್ದ ತೆಂಗಿನ ಮರವೊಂದರ ಗುರುತಿನ ಮೇಲೆ ಇಂದೂ ರಫಿಗಾಗಿ ಕಣ್ಣುಮುಚ್ಚಿ ಅಶ್ರುತರ್ಪಣ ನೀಡುತ್ತಿದ್ದಾರೆ. ಮರ ಅಮರ, ನರ ನಶ್ವರವಾದರೂ ರಫಿಯಂಥ ನರರೂ ಅಮರರೇ! ಹಾಗೆ ನೋಡಿದರೆ ಭಾರತರತ್ನ ಸಿ. ವಿ. ರಾಮನ್ ಅವರನ್ನು ಜನ ನೆನಪಿಸಿಕೊಳ್ಳುತ್ತಿರುವುದು ಕೂಡಾ ಒಂದು ಮರದ ಮೂಲಕವೇ ಅಲ್ಲವೇ! ಒಬ್ಬ ವ್ಯಕ್ತಿಯಾಗಿ ಮಹಮದ್ ರಫಿ ದೈಹಿಕವಾಗಿ ಇಂದು ನಮ್ಮೊಡನಿಲ್ಲ, ಆದರೆ ಗಂಧರ್ವ ಕಂಠಸಿರಿ ಹೊತ್ತುಬಂದ ಒಬ್ಬ ದೈವಾಂಶಸಂಭೂತನಾಗಿ ಸಂಗೀತದ ನಾದಸಿರಿ ಇರುವವರೆಗೂ ಸದಾ ಅಮರ.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...