blank

ಸಂಗೀತದಿಂದ ಮನಸ್ಸಿನ ಸಮಚಿತ್ತತೆ ಸಾಧ್ಯ: ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅಭಿಮತ

blank

ಮೈಸೂರು: ಮನುಷ್ಯ ತನ್ನನ್ನು ತಾ ಅರಿತು ಸಮಸ್ಯೆಗಳಿಂದ ಹೊರಬರುವ ಸಮಚಿತ್ತತೆಯನ್ನು ಸಂಗೀತ ನೀಡಬಲ್ಲದು ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಹೇಳಿದರು.
ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್‌ನಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಆಯೋಜಿಸಿರುವ ಐದು ದಿನಗಳ 29ನೇ ಸಂಗೀತ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿದ್ದರೂ ಮನುಷ್ಯ ತನ್ನನ್ನು ಅರಿತುಕೊಳ್ಳದೇ ಸಮಸ್ಯೆಗೆ ಸಿಲುಕುತ್ತಿದ್ದಾನೆ. ತನ್ನನ್ನು ತಾನು ಅರಿತುಕೊಂಡಾಗಲಷ್ಟೇ ಜಗತ್ತನ್ನು ಅರಿಯಲು ಸಾಧ್ಯ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಯಾವುದೇ ಸಮಸ್ಯೆ ಬಗೆಹರಿಸುವ ಅವಕಾಶವನ್ನು ನೀಡುತ್ತದೆ. ಆದರೆ ನಮ್ಮನ್ನು ನಾವು ಅರಿಯಬೇಕಾದರೆ ಸಮಚಿತ್ತತೆ ಬೇಕು. ಆ ಸಮಚಿತ್ತತೆಯನ್ನು ಸಂಗೀತ ತಂದು ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನವು ಮನುಷ್ಯನ ಬದುಕನ್ನು ಸರಳೀಕೃತಗೊಳಿಸಿದೆ. ಸಾಧನಗಳು ಆವಿಷ್ಕಾರಗೊಳ್ಳುತ್ತಿವೆ. ಅನ್ಯ ಗ್ರಹಗಳಿಗೂ ಹೋಗುವ ಕನಸು ಕಂಡಿದ್ದಾನೆ. ನಮ್ಮಲ್ಲಿ ಐದು ಜ್ಞಾನೇಂದ್ರೀಯ, ಕರ್ಮೇಂದ್ರಿಯಗಳಿವೆ. ಅವುಗಳೊಂದಿಗೆ ಇದೀಗ ಕೃತಕ ಬುದ್ಧಿಮತ್ತೆ ಕೂಡ ಬಂದಿದೆ. ಕೃತಕಕ್ಕಿಂತ ಮನುಷ್ಯನ ಬುದ್ಧಿವಂತಿಕೆ ದೊಡ್ಡದೆಂದು ಅರ್ಥ ಮಾಡಿಕೊಳ್ಳಬೇಕು ಎಂದರು.
ಮನುಷ್ಯ ಭೂಮಿ ಮೇಲೆ ಬಂದಾಗಿನಿಂದಲೂ ಪ್ರಕೃತಿಯನ್ನು ಅನುಕರಿಸಿಯೇ ಎಲ್ಲವನ್ನೂ ಕಲಿತು, ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾನೆ. ಮಗು ಹೊರಡಿಸುವ ಶಬ್ಧ ಹಾಗೂ ಎದುರಾಗುವ ಪ್ರತಿಕ್ರಿಯೆ ಆಧರಿಸಿಯೇ ಭಾಷೆಯನ್ನು ಕಲಿಯುತ್ತದೆ ಎಂದು ಉದಾಹರಿಸಿದರು.
ಸಮ್ಮೇಳನಾಧ್ಯಕ್ಷ ಪ್ರೊ.ರಾ.ವಿಶ್ವೇಶ್ವರನ್ ಮಾತನಾಡಿ, ಜೆಎಸ್‌ಎಸ್ ಸಂಗೀತ ಸಭಾ ಸಂಗೀತ ಸೇವೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಸಂಗೀತ ಸಮ್ಮೇಳನವು ನೂರು ವರ್ಷ ಪೂರೈಸಲಿ ಎಂದು ಆಶಿಸಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸಂಗೀತ ದೇಶದ ಕಾಲಾತೀತ ಸಮೃದ್ಧಿಯ ಸಂಕೇತ. ಭಾರತೀಯ ಸಂಗೀತವು ಆತ್ಮದ ಅನ್ವೇಷಣೆಯಾಗಿದೆ. ಸಮ್ಮೇಳನವು ಸಂಗೀತಗಾರು, ತಜ್ಞರು ಹಾಗೂ ಹೊಸ ಕ್ಷಿತಿಜ ತೋರಲಿದೆ ಎಂದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸುರತ್ಕಲ್‌ನ ಕಲಾಪೋಷಕ ಪಿ.ನಿತ್ಯಾನಂದರಾವ್ ಅವರಿಗೆ ಸಂಗೀತ ಸೇವಾನಿಧಿ ಪ್ರಶಸ್ತಿ ಪ್ರದಾನ ಮಾಡಿದರು. ಟ್ರಸ್ಟ್ ಅಧ್ಯಕ್ಷ ರಮೇಶ್ ಕಣ್ಣನ್, ಉಪಾಧ್ಯಕ್ಷರಾದ ವಿದ್ವಾನ್ ಮೈಸೂರು ಎಂ.ನಾಗರಾಜ್, ವಿದ್ವಾನ್ ಡಾ. ಮೈಸೂರು ಮಂಜುನಾಥ್, ಸಂಘಟಕರಾದ ಪ್ರೊ.ಕೆ.ರಾಮಮೂರ್ತಿರಾವ್ ಇತರರು ಇದ್ದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…