ತಬಲಾ ವಾದ್ಯದಿಂದ ಸಂಗೀತ ಪರಿಪೂರ್ಣ

blank

ಸಾಗರ: ಸಂಗೀತಕ್ಕೆ ಎಂಥವರನ್ನೂ ತನ್ನತ್ತ ಸೆಳೆಯುವ ಶಕ್ತಿ ಇದೆ. ಹಿಂದುಸ್ತಾನಿ ಸಂಗೀತ ಪರಂಪರೆಯನ್ನು ನಮ್ಮ ನೆಲದಲ್ಲಿ ಉಳಿಸಿ, ಬೆಳೆಸಿಕೊಂಡು ಬರುತ್ತಿರುವವರಿಗೆ ಎಲ್ಲ ರೀತಿಯ ಸಹಕಾರದ ಅಗತ್ಯವಿದೆ ಎಂದು ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಅಭಿಪ್ರಾಯಪಟ್ಟರು.
ಸಾಗರದ ಅಜಿತ ಸಭಾಭವನದಲ್ಲಿ ತೇಜಸ್ವಿ ತಬಲಾ ವಿದ್ಯಾಲಯದಿಂದ ಆಯೋಜಿಸಿದ್ದ ನಾದವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತದ ಶಕ್ತಿ ಅಪರಿಮಿತವಾದುದು. ತೇಜಸ್ವಿ ತಬಲಾ ವಿದ್ಯಾಲಯ ಅನೇಕ ವರ್ಷಗಳಿಂದ ಸಂಗೀತವನ್ನು ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಸಂಗೀತ ಸಾರ್ಥಕವಾಗಲು ಪಕ್ಕಾವಾದ್ಯ ಅಗತ್ಯ. ತಬಲಾ ಕಲಿಸುವ ಮೂಲಕ ಸಂಗೀತದ ಪರಿಪೂರ್ಣತೆಗೆ ಈ ವಿದ್ಯಾಲಯ ಶ್ರಮಿಸುತ್ತಿದೆ. ನಾದವೈಭವದ ಮೂಲಕ ಸಂಗೀತದ ರಸದೌತಣ ನಮ್ಮೂರಿನ ಅಭಿಮಾನಿಗಳಿಗೆ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ, ತೇಜಸ್ವಿ ವಿದ್ಯಾಲಯ ಮಕ್ಕಳಿಗೆ ತಬಲಾ ಕಲಿಸುವ ಮೂಲಕ ಸಂಗೀತದ ಸಾರವನ್ನು ಹಂಚುವ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಸಹ ಅಗತ್ಯ. ಅದರಲ್ಲಿ ಸಂಗೀತವೂ ಸೇರಿದ್ದು, ಇಂತಹ ವಿದ್ಯಾಲಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಅಗತ್ಯ ಸಹಕಾರ ನೀಡುತ್ತಿದೆ. ನಮ್ಮ ಇಲಾಖೆಯಿಂದ ಕಲಾವಿದರ ಕಾರ್ಯಕ್ರಮಗಳಿಗೆ ವಿಶೇಷ ಸಹಕಾರವನ್ನು ನೀಡುತ್ತ ಬಂದಿದೆ ಎಂದು ಹೇಳಿದರು
ರಂಗಕರ್ಮಿ ಡಾ. ಟಿ.ಎಸ್.ರಾಘವೇಂದ್ರ, ಮಡಿವಾಳಯ್ಯ ಸಾಲಿಮಠ, ಚೇತನಾ ರಾಜೀವ್ ಉಪಸ್ಥಿತರಿದ್ದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…