ಅಣಬೆ ಬೆಳೆಯುವ ವಿಧಾನ

| ಉತ್ತರಿಸುವವರು: ಪೂರ್ಣಪ್ರಜ್ಞ ಬೇಳೂರು

# ಅಣಬೆ ಬೆಳೆಯುವ ವಿಧಾನ ತಿಳಿಸಿ.

| ಗಿರೀಶ್ ಪಟಗಾರ್

ಅಣಬೆ ಬೀಜದ ತಯಾರಿಕೆ

ಜೋಳದ ಬೀಜವನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ನೀರನ್ನು ಅರ್ಧ ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ. ಶೇ. 2 ಕ್ಯಾಲ್ಸಿಯಂ ಕಾರ್ಬೆನೇಟ್ ಮತ್ತು ಕ್ಯಾಲ್ಸಿಯಂ ಸಲ್ಪೇಟ್ ಅನ್ನು ಮಿಶ್ರಮಾಡಿ ಪ್ಲಾಸ್ಟಿಕ್ ಕವರ್ ಅಥವಾ ಬಾಟಲ್​ಗಳಲ್ಲಿ ತುಂಬಿ. ಕುಕ್ಕರ್ ಉಪಯೋಗಿಸಿ ಜೋಳದ ಬೀಜದ ಕವರ್​ಗಳನ್ನು ಪಾಶ್ಚರೀಕರಿಸಿ. ಶುದ್ಧ ಅಣಬೆ ಶಿಲೀಂಧ್ರವನ್ನು ಪ್ರಯೋಗಾಲಯದಿಂದ ಸಂಗ್ರಹಿಸಿ. ಸಂಗ್ರಹಿಸಿದ ಅಣಬೆ ಶಿಲೀಂಧ್ರವನ್ನು ಪಾಶ್ಚರೀಕರಿಸಿದ ಜೋಳಕ್ಕೆ ಸೋಂಕಿಸಿ. ಸೋಂಕಿಸಿದ ಪ್ಲಾಸ್ಟಿಕ್ ಕವರ್ ಅಥವಾ ಬಾಟಲ್​ಗಳನ್ನು ತಂಪಾದ ವಾತಾವರಣದಲ್ಲಿ ಇಟ್ಟು ಅಣಬೆ ಶಿಲೀಂಧ್ರ ಬೆಳೆಯಲು ಸೂಕ್ತ ಸ್ಥಿತಿ ನಿರ್ವಿುಸಿ. 8-10 ದಿನಗಳಲ್ಲಿ ಅಣಬೆ ಶಿಲೀಂಧ್ರ ಸಂಪೂರ್ಣವಾಗಿ ಬೆಳೆದು ಸಿದ್ಧವಾಗಿರುತ್ತದೆ.

ಚಿಪ್ಪು ಅಣಬೆ (ಪ್ಲಿರೋಟಸ್ ಸಾಜೊರಕಾಜು)

ಆಂಗ್ಲ ಭಾಷೆಯಲ್ಲಿ ಚಿಪ್ಪು ಅಣಬೆಗೆ ‘ಆಯ್ಸ್ಟರ್ ಮಶ್ರೂಮ್ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಗುಂಡಿ ಅಣಬೆ ನಂತರದ ಸ್ಥಾನ ಚಿಪ್ಪು ಅಣಬೆಗಿದೆ. ಇದು ಕೃಷಿ ತ್ಯಾಜ್ಯ ವಸ್ತುವನ್ನು ಬಳಸಿ ವಿಶೇಷವಾಗಿ ಭತ್ತ ಅಥವಾ ಗೋಧಿ ಹುಲ್ಲು ಬಳಸಿ ಬೆಳೆಯಬಹುದಾದ ಅಣಬೆ. ಈ ಅಣಬೆಯನ್ನು 20-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಶೇ. 75ಕ್ಕೂ ಮೇಲ್ಪಟ್ಟ ಆರ್ದ್ರತೆ ಇರುವ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯಬಹುದು.

ಚಿಪ್ಪು ಅಣಬೆ ಬೇಸಾಯ

ಭತ್ತದ ಹುಲ್ಲನ್ನು 2-3 ಅಂಗುಲದ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಹೆಚ್ಚುವರಿ ನೀರನ್ನು ಬಸಿಯಿರಿ. 30-45 ನಿಮಿಷಗಳ ಕಾಲ ಪಾಶ್ಚರೀಕರಿಸಿ. ಪಾಶ್ಚರೀಕರಿಸಿದ ನಂತರ 30-45 ನಿಮಿಷಗಳ ಕಾಲ ನೆರಳಿನಲ್ಲಿ ಆರಲು ಬಿಡಿ. 12ಗಿ18 ಅಳತೆಯ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಒಂದು ಪದರ ಹುಲ್ಲು ಮತ್ತು ಒಂದು ಪದರ ಅಣಬೆ ಶಿಲೀಂಧ್ರವನ್ನು 3-4 ಪದರ ತುಂಬಿ ತುದಿಯನ್ನು ಬಿಗಿಯಾಗಿ ಕಟ್ಟಿ, ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ 15-20 ದಿನಗಳ ಕಾಲ ಹಾಗೆಯೇ ಇಡಿ. 20 ದಿನಗಳ ನಂತರ ಪ್ಲಾಸ್ಟಿಕ್ ಕವರ್ ಕತ್ತರಿಸಿ ತೆಗೆದು ದಿನಕ್ಕೆ 2-3 ಬಾರಿ ನೀರನ್ನು ಚಿಮುಕಿಸಿ. 2-3 ದಿನಗಳ ನಂತರ ಅಣಬೆಯ ಮೊಳಕೆಗಳನ್ನು ಕಾಣಬಹುದು. ಅವು ಬೆಳೆದು ಅರಳುವ ಮೊದಲೇ ಕಟಾವ್ ಮಾಡಿ.

# ಅಣಬೆಯಿಂದ ಸಿಗುವ ಪ್ರಯೋಜನಗಳೇನು? ಯಾವೆಲ್ಲ ಅಡುಗೆ ಮಾಡಬಹುದು? ಕಾಡಿನಲ್ಲಿ ಸಿಗುವ ಎಣ್ಣಣಬೆಯನ್ನು ನಾವೂ ಬೆಳೆಯಬಹುದೇ?

| ದ್ರೌಪದಮ್ಮ ಭದ್ರಾವತಿ

ಅಣಬೆಯಿಂದ ತಯಾರಿಸಬಹುದಾದ ಪದಾರ್ಥಗಳು: ಬಿರಿಯಾನಿ, ಅಣಬೆ ಕರಿ, ಸೂಪ್, ಕಟ್​ಲೆಟ್, ಪಕೋಡ, ಉಪ್ಪಿನಕಾಯಿ, ಪಾಯಸ ಇತ್ಯಾದಿ. ಅಣಬೆಯಿಂದಾಗುವ ಉಪಯೋಗಗಳು: ಅಣಬೆಗಳು ಕೃಷಿ ತಾಜ್ಯಗಳನ್ನು ವಿಘಟಿಸುವ ಸಾಮರ್ಥ್ಯ ಹೊಂದಿವೆ. ತಾಜ್ಯ ವಸ್ತುಗಳಾದ ಒಣಹುಲ್ಲು, ಎಲೆ, ಕಾಂಡಗಳ ಮೇಲೆ ಬೆಳೆದು ಅವು ಕಳಿಯುವಂತೆ ಮಾಡುತ್ತವೆ. ಅಣಬೆ ಬೆಳೆಯಲು ಕೃಷಿ ತ್ಯಾಜ್ಯ ವಸ್ತುಗಳು ಸಾಕು. ಬಳಿಕ ಅವನ್ನು ಗೊಬ್ಬರವಾಗಿ ಮಾಡಿಕೊಳ್ಳಬಹುದು. ಅಣಬೆಗಳು ಬೆಳಕು ಮತ್ತು ಮಣ್ಣಿನ ಅವಲಂಬನೆ ಇಲ್ಲದೆ ಬೆಳೆಯುತ್ತವೆ. ಅಣಬೆಗಳು ಆಹಾರ ಮತ್ತು ಆದಾಯ ಕಲ್ಪಿಸುವ ಮಾರ್ಗವೂ ಹೌದು. ಬೇರೆ ಬೆಳೆಗಳೊಂದಿಗೆ ಸ್ಥಳ ಮತ್ತು ಪೋಷಕಾಂಶಗಳ ಜತೆ ಸ್ಪರ್ಧೆ ಇಲ್ಲದೆ ಬೆಳೆಯುತ್ತದೆ. ಅಣಬೆಗಳ ತ್ಯಾಜ್ಯವು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯಲ್ಲಿ ಆಹಾರ.

ಬಿಳಿಗುಂಡಿ ಅಣಬೆ (ಅಗ್ಯಾರಿಕಸ್ ಬೈಸ್ವೋರಸ್)

ಈ ಅಣಬೆಯನ್ನು ಟೆಂಪರೆಟ್ ಮಶ್ರೂರಿ, ಯೂರೋಪಿನ್ ಮಶ್ರೂಂ, ಗುಂಡಿ ಅಣಬೆ ಹೀಗೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಎರಡು ಪ್ರಭೇದಗಳಿವೆ. ಅವುಗಳೆಂದರೆ, ಅಗ್ಯಾರಿಕಸ್ ಬೈಸ್ಪೋರಸ್ ಮತ್ತು ಅಗ್ಯಾರಿಕಸ್ ಬ್ಶೆರ್ಟಾಸ್. ಹೆಚ್ಚಾಗಿ ಬೆಳೆಯುತ್ತಿರುವ ಅಗ್ಯಾರಿಕಸ್ ಬೈಸ್ಪೋರಸ್​ಗೆ 10-15 ಡಿಗ್ರಿ ತಾಪಮಾನ ಸ್ಪಾನ್ ರನ್ ಅವಧಿ ಮತ್ತು 15-18 ಡಿಗ್ರಿ ತಾಪಮಾನ ಅಣಬೆ ಮೊಳಕೆಯೊಡೆಯುವ ವೇಳೆಯಲ್ಲಿ ಮತ್ತು ಕೊಯ್ಲು ಮಾಡುವ ಸಮಯದಲ್ಲಿ ಬೇಕಾಗಿರುತ್ತದೆ. ಆದ್ದರಿಂದ ಈ ಅಣಬೆಯನ್ನು ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯಲು ಬರುವುದಿಲ್ಲ.

ಕಾಂಪೋಸ್ಟ್ ಅನ್ನು ಪಾಶ್ಚರೀಕರಿಸುವುದು, ತೊಟ್ಟಿಯಲ್ಲಿ ಹರಡುವುದು, ಗುಂಡಣಬೆಯ ಬೀಜವನ್ನು ಬಿತ್ತುವುದು, ಇದರ ಮೇಲೆ ಕೇಸಿಂಗ್ ವಸ್ತುವನ್ನು ಹಾಕಬೇಕು. ಕೆಂಪು ಮಣ್ಣು, ಮರಳು ಮತ್ತು ಚಾಕ್ ಅಥವಾ ಸುಣ್ಣದ ಪುಡಿಯನ್ನು 1:1 ಪ್ರಮಾಣದಲ್ಲಿ ಮಿಶ್ರ ಮಾಡಿ, ಪಾಶ್ಚರೀಕರಿಸಿ ಕೇಸಿಂಗ್ ವಸ್ತುವನ್ನು ತಯಾರಿಸಿಕೊಳ್ಳಿ. ಇದರ ರಸಸಾರವು 7ರಿಂದ 7.5 ಇರಬೇಕು. ವ್ಯತ್ಯಾಸವಿದ್ದಲ್ಲಿ ಸುಣ್ಣ ಅಥವಾ ಚಾಕ್ ಪುಡಿಯನ್ನು ಉಪಯೋಗಿಸಿ ಸರಿದೂಗಿಸಬೇಕು. ಕೇಸಿಂಗ್ ವಸ್ತುವಿನ ಮೇಲೆ ಎರಡು ದಿನಗಳಿಗೊಮ್ಮೆ ತಣ್ಣೀರನ್ನು ಸಿಂಪಡಿಸಬೇಕು.

ಓದುಗರ ಪ್ರಶ್ನೆ

ನಾವು ಸೇವಿಸಬಹುದಾದ ಅಣಬೆಗಳು ಯಾವುವು? ಅದನ್ನು ಎಲ್ಲಾದರೂ ಬೆಳೆಯಬಹುದೇ? ಚಿಪ್ಪು ಅಣಬೆ ಮತ್ತು ಹಾಲು ಅಣಬೆ ಬೆಳೆಯುವ ವಿಧಾನಗಳನ್ನು ತಿಳಿಸಿ.

| ಮಂಜು, ಸಿದ್ದಾಪುರ