More

    ಅಣಬೆ ಬೇಸಾಯ ಲಾಭದಾಯಕ ಕಸುಬು

    ಚನ್ನಗಿರಿ: ಕೃಷಿ ಪದ್ಧತಿಯಲ್ಲಿ ಅಣಬೆ ಬೇಸಾಯ ಅತ್ಯಂತ ಲಾಭದಾಯಕ ಉಪ ಕಸುಬು. ಕಡಿಮೆ ಸ್ಥಳ, ಹಣ ಹಾಗೂ ಮಣ್ಣು ಬಳಸದೆ ಬೆಳೆಯುವಂತ ಬೆಳೆಯಾಗಿದ್ದು, ಅರ್ಥಿಕವಾಗಿ ಬೆಳೆಗಾರರನ್ನು ಸದೃಢರನ್ನಾಗಿಸುತ್ತದೆ ಎಂದು ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಗಂಗಪ್ಪಗೌಡ ಬಿರಾದಾರ ತಿಳಿಸಿದರು.

    ತಾಲೂಕಿನ ಕತ್ತಲಗೆರೆ ಗ್ರಾಮದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಶಿವಮೊಗ್ಗ ಹಾಗೂ ವಿಸ್ತರಣಾ ಶಿಕ್ಷಣ ಘಟಕ ಕತ್ತಲಗೆರೆ ಸಹಯೋಗದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

    ಇಂದಿನ ಯುವಕ, ಯುವತಿಯರು ಮನೆಯಲ್ಲಿ ಸುಲಭವಾಗಿ ಕಡಿಮೆ ಹಣ ವಿನಿಯೋಗಿಸಿ ಕಡಿಮೆ ಅವಧಿಯಲ್ಲಿ ಅಣಬೆ ಬೆಳೆದು ಅರ್ಥಿಕವಾಗಿ ಸಬಲರಾಗಬಹುದು. ವಿಶ್ವ ಅಹಾರ ಮತ್ತು ವಿಶ್ವಸಂಸ್ಥೆ ಅಣಬೆ ಬೆಳೆಯನ್ನು ಸಸ್ಯಹಾರಿ ತರಕಾರಿ ಎಂದು ಘೋಷಣೆ ಮಾಡಿದೆ. ಅಣಬೆಯಲ್ಲಿ ಹೆಚ್ಚು ಪ್ರೋಟಿನ್ ಒದಗಿಸುವ ಗುಣವಿದೆ ಎಂದರು.

    ಕಾರ್ಯಕ್ರಮದ ಉದ್ಘಾಟಿಸಿ, ವೈಜ್ಞಾನಿಕ ಬೇಸಾಯದ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ದಾವಣಗೆರೆ ಜಿಪಂ ಯೋಜನಾ ನಿರ್ದೇಶಕ ಡಾ. ಹನುಮಂತಪ್ಪ, ಅಣಬೆಯಲ್ಲಿ ಹೆಚ್ಚು ಖನಿಜಾಂಶ ಮತ್ತು ಪ್ರೋಟಿನ್ ಇರುವುದರಿಂದ ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅಣಬೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಸಕ್ಕರೆ ಕಾಯಿಲೆಗಳಿಗೆ ರಾಮಬಾಣವಾಗಿದೆ. ಜತೆಗೆ ಎಲ್ಲ ಕಡೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಹೆಚ್ಚಾಗಿ ಬೆಳೆಯಬಹುದಾಗಿದೆ ಎಂದರು.

    ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ಡಾ.ಬಿ.ಎಂ. ಆನಂದಕುಮಾರ್, ಮಣ್ಣು ವಿಜ್ಞಾನಿ ಸರ್ವಜ್ಞ ಸಾಲಿಮಠ, ಡಾ.ಸಣ್ಣತಿಮ್ಮಪ್ಪ, ಡಾ.ಶರಣಪ್ಪ, ಡಾ.ಜಿ.ಟಿ.ಸಂತೋಷಗೌಡ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts