ಅಥಣಿ: ಸಮೀಪದ ಬಿಳ್ಳೂರು ವಿರಕ್ತಮಠದ ಮಠಾಧೀಶರಾದ ಮ.ನಿ.ಪ್ರ ಮುರುಘೇಂದ್ರ ಮಹಾಸ್ವಾಮೀಜಿ (73) ಶನಿವಾರ ಲಿಂಗೈಕ್ಯರಾದರು.
ಪೂಜ್ಯರು ಬಸವತತ್ತ್ವದ ಪ್ರಸಾರಕರಾಗಿ ತಮ್ಮ ಪ್ರವಚನದ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಸರು ಗಳಿಸಿದ್ದರು.
ಬಿಳ್ಳೂರು, ಸಂಕ, ಸಿಂದಗಿ, ಬಸವನ ಬಾಗೇವಾಡಿ, ಬಾಗಲಕೋಟೆ ಮಠ ಹಾಗೂ ಸಂಸ್ಥೆಗಳ ಉಸ್ತುವಾರಿ ವಹಿಸಿಕೊಂಡು ಭಕ್ತರ ಸಹಕಾರದಿಂದ ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದರು.
ಶ್ರೀಮಠಕ್ಕೆ ಬರುವ ಭಕ್ತರಿಗೆ ಪ್ರಸಾದ, ಆಶ್ರಯ ಕಲ್ಪಿಸುವುದರ ಜತೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ನೂರಾರು ಬಡವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದಾರೆ. ಗೋವು ರಕ್ಷಕರಾಗಿ ಶ್ರೀಮಠದಲ್ಲಿ ಗೋವು ಸಾಕಿ ಪಾಲನೆ ಪೋಷಣೆ ಮಾಡಿದ್ದಾರೆ. ವೀರಶೈವ ಲಿಂಗಾಯತ ಪರಂಪರೆಯಂತೆ ಜ.19ರಂದು ಧಾರ್ಮಿಕ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ಸಂಜೆ ಬಿಳ್ಳೂರು ಮಠದ ಆವರಣದಲ್ಲಿ ಜರುಗಲಿದೆ.