More

    ಬೆಂಗಳೂರು ಮುರ್ಡೇಶ್ವರ ರೈಲಿನ ವೇಳಾ ಪಟ್ಟಿ ಪರಿಷ್ಕರಣೆ

    ಕಾರವಾರ:ಬೆಂಗಳೂರು-ಮಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
    ರೈಲು ಸೆ. 24 ರಿಂದ ಮೊದಲಿಗಿಂತ 40 ನಿಮಿಷ ಮುಂಚಿತವಾಗಿ ಮುರ್ಡೇಶ್ವರಕ್ಕೆ ತಲುಪಲಿದೆ.
    ಬೆಂಗಳೂರು-ಮೈಸೂರು-ಮಂಗಳೂರು ರೈಲು 16585 ನ್ನು ಸೆ. 16 ರಿಂದ ಮುರ್ಡೇಶ್ವರವರೆಗೆ ವಿಸ್ತರಿಸಲಾಗಿತ್ತು. ವಾರದ ಆರು ದಿನ ಅದು ಸಂಚಾರ ಆರಂಭಿಸಿತ್ತು. ಆದರೆ, ರೈಲು ಮಂಗಳೂರಿನಿಂದ ಮುರ್ಡೇಶ್ವರ ತಲುಪಲು ಅನಗತ್ಯ ವಿಳಂಬವಾಗುತ್ತಿದೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ನಿಧಾನವಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು.

    ಇದನ್ನೂ ಓದಿ:20 ಕಿಮೀ ಪ್ರಯಾಣಕ್ಕೆ ಎರಡುಕಾಲು ತಾಸು

    ಈ ಕುರಿತು ವಿಜಯವಾಣಿ ಸೆ. 22 ರಂದು “20 ಕಿಮೀ ಪ್ರಯಾಣಕ್ಕೆ ಎರಡುಕಾಲು ತಾಸು” ಎಂಬ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು.‌ ಕಾರವಾರ, ಕುಂದಾಪುರ ರೈಲ್ವೆ ಸೇವಾ ಸಮಿತಿಗಳು ವೇಳಾ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ತಿಳಿಸಲಾಗಿತ್ತು.
    ಮತ್ಸ್ಯಗಂಧ ರೈಲು 40 ನಿಮಿಷದಲ್ಲಿ ಸಂಚರಿಸುವ ದೂರವನ್ನು ಮುರ್ಡೇಶ್ವರ ರೈಲು ಎರಡುಕಾಲು ತಾಸು ತೆಗೆದುಕೊಳ್ಳುತ್ತಿದೆ ಎಂದು ಸಮಸ್ಯೆ ವಿವರಿಸಲಾಗಿತ್ತು.
    ನೈರುತ್ಯ ರೈಲ್ವೆ ವೇಳಾ ಪಟ್ಟಿಯನ್ನು ಶನಿವಾರ ಪರಿಷ್ಕರಿಸಿದ್ದು, ಮಂಗಳೂರು ಸೆಂಟ್ರಲ್‌ ವರೆಗೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಿಲ್ಲ. ಅಲ್ಲಿಂದ ಮುಂದೆ ಸುರತ್ಕಲ್ ಗೆ 10.34 ಕ್ಕೆ ತಲುಪುತ್ತಿದ್ದ ರೈಲು ಇನ್ನು 9.48 ತಲುಪಲಿದೆ. ಮಧ್ಯಾಹ್ನ 1.35 ಕ್ಕೆ ಮುರ್ಡೇಶ್ವರಕ್ಕೆ ತಲುಪುತ್ತಿದ್ದ ರೈಲು ಇನ್ನು 12.55ಕ್ಕೆ ತಲುಪಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಸ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts