blank

Murdeshwara Tragedy: ಮುಗಿಲು ಮುಟ್ಟಿದ 4 ಪಾಲಕರ ಗೋಳು

Murdeshwara Tragedy

ಭಟ್ಕಳ: Murdeshwara Tragedy ಯಲ್ಲಿ  ಮೃತ ವಿದ್ಯಾರ್ಥಿನೀಯರ ಪಾಲಕರು ಭಟ್ಕಳಕ್ಕೆ ಆಗಮಿಸಿ ತಮ್ಮ ಮಕ್ಕಳನ್ನು ಬದುಕಿಸಿ ಕೊಡಿಸುವಂತೆ ರೋಧಿಸುತ್ತಿರುವ ಘಟನೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರ ಮನಕಲುಕುವಂತಿತ್ತು.
ಶೈಕ್ಷಣಿಕ ಪ್ರವಾಸಕ್ಕೆಂದು ಬಂದು ನೀರಿನಲ್ಲಿ ಆಟವಾಡಲು ತೆರಳಿ 7 ವಿದ್ಯಾರ್ಥಿನೀಯರು ನೀರುಪಾಲಾಗಿದ್ದರು. ಅದರಲ್ಲಿ ಮೂವರನ್ನು ಸ್ಥಳೀಯ ಮೀನುಗಾರರು, ಲೈಫ್ ಗಾರ್ಡ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅದರಲ್ಲಿ ಮೂವರು ಕಣ್ಮರೆಯಾಗಿದ್ದರೆ ಒರ್ವ ವಿದ್ಯಾರ್ಥಿನಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ಬಳಿಕ ಮರಣಹೊಂದಿದ್ದಳು. ಬುಧವಾರ ಬಳಿಕ ಮೂವರ ಶವ ಪತ್ತೆಯಾಗಿದ್ದು ಅದನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿತ್ತು.

ಈ ಸಂದರ್ಬದಲ್ಲಿ ತಮ್ಮ ಮಕ್ಕಳಿಗಾಗಿ ಭಟ್ಕಳಕ್ಕೆ ಆಗಮಿಸಿ ರೋಧಿಸುತ್ತಿರುವ ಪಾಲಕರ ಪರಿಸ್ಥಿತಿ ಎಂತವರ ಎದೆಯನ್ನು ನಡುಕಿಸುವಂತಿತ್ತು. ಪ್ರವಾಸಕ್ಕೆ ಕಳುಹಿಸಿದ್ದೆ ತಪ್ಪಾಯಿತು ಎಂದು ಎದೆಹೊಡೆದುಕೊಂಡು ಪರತಪಿಸುತ್ತಿರುವದು ಮನಕಲುಕುವಂತಿತ್ತು. ಪಾಲಕರನ್ನು ಸಾಂತ್ವಾನಪಡಿಸಿ ನಾಲ್ವರ ಶವವಗಳನ್ನು ಅವರ ಸ್ವಗ್ರಾಮಕ್ಕೆ ತಾಲೂಕಾಡಳಿತ ಕಳುಹಿಸಿಕೊಟ್ಟಿದೆ.

ಭಟ್ಕಳದ ಶವಗಾರಕ್ಕೆ ಬೇಟಿ ನೀಡಿ ಸಚಿವ ಮಂಕಾಳ ವೈದ್ಯ ಪಾಲಕರಿಗೆ ಸಾಂತ್ವಾನ ಹೇಳಿದರು. ನಡೆಯಬಾರದ ಘೋರ ದುರಂತವೊಂದು ನಡೆದು ಹೋಗಿದೆ. ಸುರಕ್ಷತೆಗೆ ಸಾಕಷ್ಟು ಆಧ್ಯತೆ ನೀಡಿದ್ದೆವೆ. ಕೋಸ್ಟ್‌ ಗಾರ್ಡ, ಹೋಮ್‌ ಗಾರ್ಡ್‌. ಸ್ಥಳೀಯ ಪೊಲೀಸರು, ಲೈಫ್ ಗಾರ್ಡ್‌ಗಂಥ ನಾಲ್ಕು ಸುರಕ್ಷಾ ಕವಚವಿದೆ.

ಸಮುದ್ರದಲ್ಲಿ ಈ ನಾಲ್ವರ ತಂಡ ಎಲ್ಲವನ್ನು ಗಮನಿಸುತ್ತದೆ. ಸಂಜೆ 5.30ಬಳಿಕ ಪ್ರವಾಸಿಗರನ್ನು ಸಮುದ್ರ ದಡದಿಂದ ಮೇಲೆಕ್ಕೆ ಹೋಗುವಂತೆ ಸಾಕಷ್ಟು ತಿಳಿ ಹೇಳಿದರು ಕೆಲವು ಬಾರಿ ಕೇಳುವದಿಲ್ಲ. ಸಂಜೆಯ ಬಳಿಕ ನಡೆದ ಈ ದುರಂತ Murdeshwara Tragedy ಸಾಕಷ್ಟು ನೋವು ತಂದಿದೆ. ಮೃತ ವಿದ್ಯಾರ್ಥಿನೀಯರ ಕುಟುಂಬಕ್ಕೆ ಈಗಾಗಲೆ 5 ಲಕ್ಷರೂಗಳ ಪರಿಹಾರ ಧನವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸುರಕ್ಷತೆಯ ವಿಷಯದಲ್ಲಿ ಮತ್ತಷ್ಟು ಬಿಗಿ ನಿಯಮಗಳನ್ನು ರೂಪಿಸಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Murdeshwara Tragedy ಮುಳಬಾಗಿಲು ಶಾಸಕ ಆಕ್ರೋಶ

ಮುಳುಬಾಗಿಲ ಶಾಸಕ ಸಮೃದ್ಧಿ ಮಂಜುನಾಥ ಸಥಳಕ್ಕೆ ಬೇಟಿ ನೀಡಿ ಇದು ಪ್ರವಾಸೋಧ್ಯಮ ಇಲಾಖೆಯ ವೈಪಲ್ಯ. ಇದರಿಂದ ನಮ್ಮ 4 ಮಕ್ಕಳು ಹಸುನೀಗಿದ್ದಾರೆ. ಜೀವರಕ್ಷಕ ಸಿಬ್ಬಂದಿಗೆ ಸರಿಯಾದ ಸಾಮಗ್ರಿ ನೀಡುವ ಯೋಗ್ಯತೆ ಇಲ್ಲದೆ ಇದ್ದರೆ ಇಂತಹದೊಂದು ಇಲಾಖೆ ಯಾಕಿರಬೇಕು. ಮಕ್ಕಳನ್ನು ಕರೆತಂದ ಶಿಕ್ಷರನ್ನು ಅಮಾನತು ಮಾಡಿದ್ದೀರಿ, ಪ್ರವಾಸೋದ್ಯಮ ಇಲಾಖೆಯ ಡಿಸಿಯವರನ್ನು ಅಮಾನತು ಮಾಡಿ. ಮುರ್ಡೇಶ್ವರದಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದು ಆಕ್ರೋಶವ್ಯಕ್ತಪಡಿಸಿದರು.

 

ಇದನ್ನೂ ಓದಿ: Murdeshwara beach ವಿದ್ಯಾರ್ಥಿನಿಯರ ಸಾವಿನ ಪ್ರಕರಣ 6 ಶಿಕ್ಷಕರು, ಅಮಾನತು ಅವರ ವಿರುದ್ಧ FIR 

ttps://www.facebook.com/share/p/15uM6YqtG2/

Share This Article

ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಆಹಾರದ ರುಚಿಯ ಜತೆಗೆ ಆರೋಗ್ಯಕವೂ ಆಗಿರುವ ಉಪ್ಪಿನಕಾಯಿ ಮಾಡಿದರೆ ಎಲ್ಲರೂ…

ಸಕ್ಕರೆ ಅಥವಾ ಬೆಲ್ಲ ಯಾವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ತೂಕವನ್ನು ಇಳಿಸಲು ಅಥವಾ ಆರೋಗ್ಯಕರ ಆಹಾರವನ್ನು ಸೇವಿಸುವ ವಿಷಯಕ್ಕೆ ಬಂದಾಗ ಆಹಾರದಿಂದ ಸಕ್ಕರೆಯನ್ನು ತೆಗೆದುಹಾಕುವುದು ಅಥವಾ…

ತೂಕ ಇಳಿಕೆ ನಿಂಬೆರಸ ಅತ್ಯುತ್ತಮ ಮನೆಮದ್ದು ಎಂಬುದು ಗೊತ್ತೆ; ಇಲ್ಲಿದೆ ಬಳಸುವ ಸರಿಯಾದ ವಿಧಾನ | Health Tips

ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ…