ಅಣ್ಣನಿಂದಲೇ ತಮ್ಮನ ಕೊಲೆ, ಆಸ್ತಿ ಕಲಹ ಶಂಕೆ

ವಿಜಯಪುರ: ಆಸ್ತಿ ಕಲಹ ಹಿನ್ನೆಲೆಯಲ್ಲಿ ಅಣ್ಣನಿಂದಲೇ ತಮ್ಮನ ಕೊಲೆಯಾಗಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಘಟನೆ ರೂಡಗಿ ಗ್ರಾಮದಲ್ಲಿ ನಡೆದಿದೆ.

ಶ್ರೀಕಾಂತ್ ಈಳಗೇರ (35) ಎಂಬಾತನನ್ನು ಅಣ್ಣ ಲಕ್ಷ್ಮಣ್ ಕೊಲೆಗೈದಿದ್ದು, ಆಸ್ತಿ ಕಲಹ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿ ಅಣ್ಣ ಲಕ್ಷ್ಮಣ್‌ ಈಳಗೇರನನ್ನು ಪೊಲೀಸರ ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)