ವೇಮಗಲ್: ಕೋಲಾರ ತಾಲೂಕಿನ ಚನ್ನಸಂದ್ರ ಸಮೀಪ ನ.29ರಂದು ಕುರಿಗಾಹಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ವೇಮಗಲ್ ಠಾಣೆ ಪೋಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಳ್ಳಹಳ್ಳಿಯ ಮಾಧವ (21) ಬಂಧಿತ. ಚನ್ನಸಂದ್ರ ಗ್ರಾಮದ ತಳಾರಿ ನಾಗರಾಜ ಎಂಬುವರು ಕುರಿ ಮೇಯಿಸುತ್ತಿದ್ದಾಗ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ನಾಗರಾಜ ಅವರು ಬಡ್ಡಿಗೆ ಹಣ ನೀಡುತ್ತಿದ್ದರು. ತನಗೂ ಸಹ ಹಣ ನೀಡುವಂತೆ ಮಾಧವ ಕೇಳಿದ್ದ, ಸಾಲ ನೀಡಲು ಕುರಿಗಾಹಿ ನಿರಾಕರಿಸಿದ್ದರಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಲ್ಲದೆ ಆತನ ಬಳಿಯಿದ್ದ 40 ಸಾವಿರ ಹಣ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ವೇಮಗಲ್ ಪೊಲೀಸ್ ನಿರೀಕ್ಷಕ ಬಿ.ಪಿ.ಮಂಜು, ಪಿಎಸ್ಐ ಹೇಮಂತ್ ಹಾಗೂ ಸಿಬ್ಬಂದಿ ನಾರಾಯಣಸ್ವಾಮಿ, ರಾಘವೇಂದ್ರ, ಆಂಜಿನಪ್ಪ, ಮಹೇಶ್, ಮಂಜುನಾಥ, ಸತೀಶ್, ನವೀನ್, ಸುರೇಶ್ ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.