ಅಪರಚಿತ ವ್ಯಕ್ತಿ ಕೊಲೆ

ಶ್ರೀರಂಗಪಟ್ಟಣ: ಅಪರಿಚಿತ ಯುವಕನೊಬ್ಬನ ಮೃತದೇಹ ಪಟ್ಟಣದ ಒಬೆಲಿಸ್ಕ್ ಸ್ತಂಭದ ಬಳಿಯ ಕೋಟೆ ಒಳಭಾಗದ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಬೇರೆ ಎಲ್ಲೋ ಕೊಲೆ ಮಾಡಿರುವ  ದುಷ್ಕರ್ಮಿಗಳು ಶವವನನ್ನು  ನದಿಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾಗಿರುವ ವ್ಯಕ್ತಿ 26ರಿಂದ 28 ವಯಸ್ಸಿನಾಗಿರಬಹುದು. ಈತನನ್ನು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. 2 ದಿನಗಳ ಹಿಂದೆಯೆ ಕೊಲೆಯಾಗಿರುವ ಸಾಧ್ಯತೆ ಇರುವುದಾಗಿ ಶ್ರೀರಂಗಪಟ್ಟಣ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.