ಇತ್ಯರ್ಥವಾಗದ ಮೀಸಲಾತಿ ವಿಚಾರ

blank

ಚನ್ನಗಿರಿ: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ವಿಷಯ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ 23 ಸದಸ್ಯ ಬಲದ ಚನ್ನಗಿರಿ ಪುರಸಭೆ ಕಳೆದ ಒಂದು ತಿಂಗಳಿನಿಂದ ಸಾರಥಿಗಳಿಲ್ಲದೆ ಸೊರಗಿದೆ.

blank

ಅಧಿಕಾರವಂಚಿತ ಸದಸ್ಯರು ಪ್ರತಿದಿನ ಕಚೇರಿಗೆ ಹೋಗಿಬರುವುದು ಬಿಟ್ಟರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪರಿತಪಿಸುತ್ತಿದ್ದಾರೆ.

2018 ಅಗಸ್ಟ್ 31ಕ್ಕೆ ಪುರಸಭೆಗೆ ಚುನಾವಣೆ ನಡೆಯಿತು. ಸೆಪ್ಟಂಬರ್ 3ರಂದು ಫಲಿತಾಂಶ ಪ್ರಕಟವಾಯಿತು. ಬಿಜೆಪಿ 10, ಕಾಂಗ್ರೆಸ್ 10, ಜೆಡಿಎಸ್ 3 ಸ್ಥಾನಗಳನ್ನು ಪಡೆದುಕೊಂಡವು.

ಹೊಸ ಸದಸ್ಯರು ಮೀಸಲು ನಿಗದಿಗೆ ನ್ಯಾಯಾಲಯದ ಮೊರೆಹೋದರು. ಮೂರು ವರ್ಷ ಕಾದರೂ ಅಧಿಕಾರ ಹಿಡಿಯಲಾಗದೆ ಮನೆಯಲ್ಲಿಯೇ ಉಳಿಯುವ ಪ್ರಸಂಗ ಎದುರಾಯಿತು.

2021ರ ಏಪ್ರಿಲ್28ರಂದು ಚುನಾವಣಾ ಆಯೋಗವು ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ಘೂಷಣೆ ಮಾಡಿತು.

ಒಟ್ಟು ಸದಸ್ಯರ ಪೈಕಿ ಬಿಜೆಪಿಯ ಲಕ್ಷ್ಮಿದೇವಮ್ಮ ಮಾತ್ರ ಎಸ್ಸಿ ಕ್ಷೇತ್ರ ಪ್ರತಿನಿಧಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತು. ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಅನ್ವಯ ಜೆಡಿಎಸ್​ನ ಜರೀನಾಬಿ ಉಪಾಧ್ಯಕ್ಷರಾಗಿ 30 ತಿಂಗಳು ಆಡಳಿತ ನಿರ್ವಹಿಸಿದರು.

2023ರ ಅಕ್ಟೋಬರ್​ನಲ್ಲಿ ಎರಡನೇ ಅವಧಿಗೂ ಮೀಸಲು ಪ್ರಕಟವಾದಾಗ ಕೂಡ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಸಿಕ್ಕಿತು.

ಪುನಃ ಹಳೇ ಮೀಸಲು ಬಂದಿದೆ ಎಂದು ಕೆಲ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದು ಇದರಿಂದ ಯಾರಿಗೂ ಅಧಿಕಾರ ಸಿಗದೆ ಪುರಸಭೆ ಸಾರಥಿಗಳ ಹುದ್ದೆ ಖಾಲಿ ಉಳಿದಿದೆ.

ಈ ನಡುವೆ ಸದಸ್ಯರಾದ ಯಶೋದಮ್ಮ ಮತ್ತು ಅಸ್ಲಾಂಬೇಗ್ ಮೃತಪಟ್ಟಿದ್ದು,ಖಾಲಿ ಉಳಿದ ಸ್ಥಾನಗಳಿಗೆ ಮರು ಚುನಾವಣೆ ನಡೆದಿದೆ.

ಪುರಸಭೆ ಚುನಾವಣೆ ನಡೆದು 7 ವರ್ಷ ತುಂಬುತ್ತಾ ಬಂದರು ಸದಸ್ಯರಾದವರಿಗೆ ಪೂರ್ಣ ಪ್ರಮಾಣದ ಅಧಿಕಾರ ಪಡೆಯಲಾಗುತ್ತಿಲ್ಲ. ಮತದಾರರ ಸೇವೆ ಮಾಡಲು ಅವಕಾಶ ಸಿಗದೆ ಪರದಾಡುತ್ತಿದ್ದಾರೆ. ಸದಸ್ಯರಿಗೆ ಅಧಿಕಾರವಿದ್ದರೆ ಮಾತ್ರ ಅಧಿಕಾರಿಗಳು ಮಾತು ಕೇಳುತ್ತಾರೆ ಇಲ್ಲದಿದ್ದರೆ ಗೌರವ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಸದಸ್ಯರು ಯಾರು ಪುರಸಭೆ ಕಡೆಗೆ ಹೋಗುತ್ತಿಲ್ಲ.

 

ಜನಸೇವೆ ಮಾಡಬೇಕೆಂದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದಿದ್ದೇನೆ. ಆದರೆ ಮೀಸಲು ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನಾವು ಅಧಿಕಾರ ವಂಚಿತರಾಗಿದ್ದೇವೆ. ಸರ್ಕಾರ ನೀಡಿದ ಅವಕಾಶದಿಂದ ಅಧ್ಯಕ್ಷೆಯಾದೆ. ಆದರೆ ಮೀಸಲಾತಿ ವಿಚಾರ ಕೋರ್ಟ್ ಮೆಟ್ಟಿಲೇರಿರುವುದು ಬೇಸರ ತಂದಿದೆ.

| ಲಕ್ಷ್ಮೀದೇವಮ್ಮ, ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ.

 

ನಾವು ಹೆಸರಿಗೆ ಮಾತ್ರ ಪುರಸಭೆ ಸದಸ್ಯರಾಗಿದ್ದೇವೆ, ಆಡಳಿತಾಧಿಕಾರಿಯಾಗಿರುವ ಹೊನ್ನಾಳಿ ಉಪ ವಿಭಾಗಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೋರ್ಟ್ ಮತ್ತೆ ಅದೇ ಮೀಸಲಾತಿ ನೀಡಿದೆ. ಮುಂದುವರಿಯಲು ಬಿಡಬೇಕು, ಈ ವಿಚಾರದಲ್ಲಿ ಮತ್ತೆ ನ್ಯಾಯಾಲಯಕ್ಕೆ ಹೋಗುವುದು ಸರಿಯಲ್ಲ.

| ಕಮಲಾ ಹರೀಶ್, ಸದಸ್ಯರು.

 

ನ್ಯಾಯಾಲಯದ ಆದೇಶದಂತೆ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ವಿಚಾರ ನ್ಯಾಯಾಲಯದಲ್ಲಿದೆ. ಸದಸ್ಯರು ಕಚೇರಿಗೆ ಬಂದಾಗ ಅವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಲಾಗುತ್ತದೆ, ಪುರಸಭೆಯಲ್ಲಿ ನಡೆಯುವ ಸರ್ಕಾರದ ಕಾರ್ಯಕ್ರಮಗಳಿಗೆ ಸದಸ್ಯರನನ್ನು ಆಹ್ವಾನಿಸಲಾಗುತ್ತದೆ.

| ಕೃಷ್ಣ ಡಿ.ಕಟ್ಟಿಮನಿ, ಮುಖ್ಯಾಧಿಕಾರಿ ಪುರಸಭೆ ಚನ್ನಗಿರಿ.

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank