150 ಅಕ್ರಮ ಗುಡಿಸಲು ತೆರವು

ಚಿಕ್ಕಮಗಳೂರು: ಮೂರು ದಿನಗಳಿಂದ ದಿಢೀರ್ ಆಗಿ ನಿರ್ವಿುಸಿದ್ದ ಇಂದಿರಾ ಗಾಂಧಿ ಬಡಾವಣೆಯ ಸಮೀಪದ 150ಕ್ಕೂ ಹೆಚ್ಚು ಅಕ್ರಮ ಗುಡಿಸಲುಗಳನ್ನು ನಗರಸಭೆ ತೆರವುಗೊಳಿಸಿತು.

ಈಗಾಗಲೆ ವಸತಿ ಸೌಲಭ್ಯ ಹೊಂದಿರುವ 150 ಕ್ಕೂ ಹೆಚ್ಚು ಮಂದಿ ತಮ್ಮ ಮಕ್ಕಳಿಗೆ ಮತ್ತು ಸಂಬಂಧಿಕರಿಗೆಂದು ನಗರ ಪ್ರದೇಶದಿಂದ ಹೋಗಿ ಗುಡಿಸಲುಗಳನ್ನು ಹಾಕಿಕೊಂಡು ಮನೆ ಕಟ್ಟಿಕೊಳ್ಳಲು ತಳಪಾಯ ತೋಡಲು ಸಿದ್ಧತೆ ನಡೆಸಿದ್ದರು.

ಈ ಜಾಗದಲ್ಲಿ ಪ್ರಾರ್ಥನಾ ಮಂದಿರ, ಪೂಜಾಸ್ಥಳ, ಸಮುದಾಯ ಭವನ ನಿರ್ವಿುಸಲು ಕಾಯ್ದಿರಿಸಲಾಗಿತ್ತು. ಆದರೆ ಕೆಲವರ ಪ್ರಚೋದನೆಯಿಂದ ಏಕಾಏಕಿ 150 ರಿಂದ 200 ಗುಡಿಸಲುಗಳನ್ನು ನಿರ್ವಿುಸಿ ಅಲ್ಲೇ ವಾಸಮಾಡಲು ಆರಂಭಿಸಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅದನ್ನು ಲೆಕ್ಕಿಸಿರಲಿಲ್ಲ. ಈ ಗುಡಿಸಲುಗಳನ್ನು ತೆರವುಗೊಳಿಸುವಂತೆ ನಗರಸಭೆ ಸೂಚಿಸಿದ್ದರೂ ಅದನ್ನು ಗಂಭೀರವಾಗಿ ಗುಡಿಸಲು ವಾಸಿಗಳು ಪರಿಗಣಿಸಿರಲಿಲ್ಲ. ಇದನ್ನು ಗಮನಿಸಿದ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಎಸ್ಪಿ ಹರೀಶ್​ಪಾಂಡೆ ಅವರಿಗೆ ಮನವಿ ಸಲ್ಲಿಸಿ ಪೊಲೀಸರ ರಕ್ಷಣೆಯಲ್ಲಿ ತೆರವುಗೊಳಿಸಿದರು.

ಇದೇ ವೇಳೆ ಕೆಲವರು ಆತ್ಮಹತ್ಯೆಯ ಬೆದರಿಕೆ ಹಾಕಿದರೆಂದು ಹೇಳಲಾಗಿದ್ದು, ಇದಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮಕ್ಕೆ ನಗರಸಭೆ ದೂರು ನೀಡುವ ಸಾಧ್ಯತೆಯಿದೆ.

1ಸಿಕೆಎಂ25: ನಗರ ಹೊರವಲಯದ ಇಂದಿರಾಗಾಂಧಿ ಬಡಾವಣೆಯಲ್ಲಿ 150ಕ್ಕೂ ಹೆಚ್ಚು ಗುಡಿಸಲುಗಳನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು.</