ಕಡೂರು: ರೋಟರಿ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಪುರಸಭೆ ಸಾಥ್ ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಸಮೀಪದ ಹಿಂದು ರುದ್ರಭೂಮಿಯಲ್ಲಿ ಅನಿಲ ಚಿತಾಗಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಹಿಂದೂ ರುದ್ರಭೂಮಿಯಲ್ಲಿ ಸುಮಾರು 30 ಲಕ್ಷ ವೆಚ್ಚದಡಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಹೊರತುಪಡಿಸಿ ವಿಶೇಷವಾಗಿ ಸಶ್ಮಾನದ ಅಭಿವೃದ್ಧಿ ಪರಿಕಲ್ಪನೆಗೆ ಒತ್ತು ನೀಡಿದರೆ ಸಾರ್ವಜನಿಕರ ಬಳಕೆಗೆ ಹೆಚ್ಚು ಉಪಯೋಗವಾಗಲಿದೆ ಎಂಬ ಆಶಯ ನನ್ನದಾಗಿದೆ. ಇದಕ್ಕೆ ರೋಟರಿ ಸಂಸ್ಥೆ ಹೆಚ್ಚು ಕಾಳಜಿ ವಹಿಸಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ಕೆ ಸ್ಥಳೀಯ ಶಾಸಕರು ಮತ್ತು ಪುರಸಭೆ ಅನುದಾನ ನೀಡುವ ಮೂಲಕ ಶಾಶ್ವತ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಮಾತನಾಡಿ, ರುದ್ರಭೂಮಿಯಲ್ಲಿ 120 ಅಡಿ ಎತ್ತರದ ಚಿಮಣಿ ನಿರ್ಮಾಣವಾಗಲಿದ್ದು, ಒಂದು ಶವದಹನಕ್ಕೆ 10 ಕೆಜಿ ಅನಿಲದ ಅಗತ್ಯವಿದೆ. ಒಟ್ಟು 19 ಸಿಲಿಂಡರ್ ಸದಾ ಲಭ್ಯವಿರುವಂತೆ ಯೋಜನೆ ರೂಪಿಸಲಾಗಿದೆ. ಸರ್ವ ಸಮಾಜದವರು, ಸಂಘ ಸಂಸ್ಥೆಗಳು ದೇಣಿಗೆ ನೀಡಿದ್ದಾರೆ. ರೋಟರಿಯ 56 ಸದಸ್ಯರು, ಶಾಸಕರು ಮತ್ತು ಪುರಸಭೆ ಸದಸ್ಯರು ಕೈಜೋಡಿಸಿದ್ದಾರೆ ಎಂದರು.
ಕಾಮಗಾರಿ ಆರಂಭಕ್ಕೆ ಸಂಗ್ರಹವಾದ ಮೊತ್ತದಲ್ಲಿ 5 ಲಕ್ಷ ಚೆಕ್‌ನ್ನು ಗುತ್ತಿಗೆದಾರ ರಮೇಶ್‌ಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ.ರಾಜನ್, ಕಾರ್ಯದರ್ಶಿ ಚಂದ್ರಪ್ಪ, ರುದ್ರಭೂಮಿ ಸಮಿತಿ ಅಧ್ಯಕ್ಷ ಮುರುಳಿ ಕೊಠಾರಿ, ಮಂಜುನಾಥ್, ವಕೀಲ ಕೆ.ಜಿ.ಅಣ್ಣಪ್ಪ, ಪ್ರೇಮಬಿಂದು ಪ್ರತಿ?್ಟಾನದ ಅಧ್ಯಕ್ಷ ಪ್ರೇಮ್ ಕುಮಾರ್, ಬಿ.ಶಿವಕುಮಾರ್, ಟಿ.ಡಿ.ಸತ್ಯನ್, ಚಂದ್ರಪ್ಪ, ಚಿನ್ನರಾಜು, ಪುಂಡಲೀಕರಾವ್ ಮತ್ತಿತರಿದ್ದರು.
ಸಾಮಾಜಿಕ ಕಾರ್ಯಗಳಿಗೆ ಪುರಸಭೆ ಸಾಥ್
You Might Also Like
A. P. J. Abdul Kalam ಅವರ ಈ ಟ್ರಿಕ್ಸ್ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್ ಮಾಡ್ದೆ ಅನುಸರಿಸಿ
ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…
ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies
ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…
ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing
Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…