ಕೊಳ್ಳೇಗಾಲ: ನಗರಸಭೆ ಸಭಾಂಗಣದಲ್ಲಿ ಮಾ.24ರಂದು ಬೆಳಗ್ಗೆ 11 ಗಂಟೆಗೆ ನಗರಸಭೆ 2025-26ನೇ ಸಾಲಿನ ಆಯವ್ಯಯ ಸಭೆ ಹಾಗೂ ಮಧ್ಯಾಹ್ನ 12 ಗಂಟೆಗೆ ಸಾಮಾನ್ಯ ಸಭೆಯನ್ನು ನಗರಸಭಾಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್, ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಜೆಟ್ ಮಂಡನೆಗೆ ಸಹಮತ ಇಲ್ಲ: ಮಾ.24 ರಂದು ನಗರಸಭೆ 2025-2026ನೇ ಸಾಲಿನ ಬಜೆಟ್ ಸಭೆಯನ್ನು ಏಳು ದಿನಗಳ ನಂತರ ಮಂಡಿಸಿದರೆ ಮಾತ್ರ ನನ್ನ ಸಹಮತ ಇರುತ್ತದೆ ಇಲ್ಲವಾದರೆ ನನ್ನ ಸಹಮತ ಇರುವುದಿಲ್ಲ ಎಂದು ನಗರಸಭೆ ಸದಸ್ಯ ಮನೋಹರ್ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ.
ಮಾ.24 ರಂದು ನಡೆಯುವ ಸಾಮಾನ್ಯ ಸಭೆ ಅಜೆಂಡಾದಲ್ಲಿ ಚರ್ಚಿಸುವ ಬಹಳಷ್ಟು ವಿಚಾರಗಳು ಇವೆ. ಅದೇ ದಿನ ಮಂಡಿಸಿದರೆ ಖಂಡಿಸಿ ಅಲ್ಲೇ ಧರಣಿ ಸತ್ಯಾಗ್ರಹ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
