ಬರ್ತಡೇ ಪಾರ್ಟಿಯಲ್ಲಿ ಸ್ನೇಹಿತನೊಂದಿಗೆ ಸೇರಿ ಪ್ರಿಯಕರನಿಂದಲೇ ಯುವತಿ ಮೇಲೆ ಅತ್ಯಾಚಾರ

ಮುಂಬೈ: ಸ್ನೇಹಿತನ ಮನೆಯಲ್ಲಿ ಆಯೋಜಿಸಿದ್ದ ಬರ್ತಡೇ ಪಾರ್ಟಿಯಲ್ಲಿ ಪ್ರಿಯಕರನಿಂದಲೇ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪಲ್ಘಹಾರ್‌ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯ ಪ್ರಿಯಕರನೇ ಸಂತೋಷ ಕೂಟವನ್ನು ಆಯೋಜಿಸಿದ್ದ ಮತ್ತು ಸ್ನೇಹಿತನೊಂದಿಗೆ ಸೇರಿ ಆಕೆಗೆ ಚೆನ್ನಾಗಿ ಕುಡಿಸಿ ನಶೆ ಏರುವಂತೆ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ಥೆಯು ನಶೆಯಲ್ಲಿದ್ದಾಗ ಸ್ನೇಹಿತನೊಂದಿಗೆ ಸೇರಿ ಇಬ್ಬರು ಅತ್ಯಾಚಾರ ಎಸಗಿದ್ದು, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆವೊಡ್ಡಿದ್ದಾರೆ.

ಮುಂಬೈನ ಕಂದಿವಾಲಿ ನಿವಾಸಿಯಾಗಿರುವ 27 ವರ್ಷದ ಯುವತಿಯು ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಅತ್ಯಾಚಾರ ಮತ್ತು ಕ್ರಿಮಿನಲ್‌ ಬೆದರಿಕೆ ದೂರನ್ನು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)