ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಸಾವಿನ ಬಗ್ಗೆ ಪೊಲೀಸರು ಹೇಳಿದಿಷ್ಟು..

ಮುಂಬೈ: ಬಾಲಿವುಡ್​ ನಟಿ ಮಲೈಕಾ ಅರೋರಾ ಅವರ ತಗಂದೆ ಅನಿಲ್​ ಅರೋರಾ ಬುಧವಾರ (ಸೆಪ್ಟೆಂಬರ್​​ 11) ವಿಧಿವಶರಾದರು. ಸುದ್ದಿ ತಿಳಿಯುತ್ತಿದ್ದಂತೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅರ್ಬಾಜ್ ಖಾನ್, ಅರ್ಜುನ್ ಕಪೂರ್ ಸೇರಿದಂತೆ ಅನೇಕ ಬಿಟೌನ್​ ಸೆಲಿಬ್ರಿಟಿಗಳು ಮಲೈಕಾ ಅವರ ಮನೆಗೆ ತಲುಪಿದ್ದರು. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಮುಂಬೈ ಪೊಲೀಸರು ಇದೀಗ ನಟಿಯ ತಂದೆಯ ಸಾವಿನ ಬಗ್ಗೆ ಮೊದಲ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಕಾರಣವೇನು?

ಮಲೈಕಾ ಅವರ ತಂದೆ ಅನಿಲ್​ ಅರೋರಾ ಅವರ ಸಾವು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ತೋರುತ್ತದೆ. ಆತ್ಯಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅನಿಲ್​ ಅರೋರಾ ಕಟ್ಟಡದ ಆರನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಪ್ರತಿಯೊಂದು ಅಂಶವನ್ನು ನಿಖರವಾಗಿ ಪರಿಶೀಲಿಸುತ್ತಿದ್ದೇವೆ. ನಮ್ಮ ತಂಡದ ಜತೆಗೆ ಫೋರೆನ್ಸಿಕ್ ತಂಡ ಕೂಡ ಘಟನಾ ಸ್ಥಳದಲ್ಲಿದೆ. ತನಿಖೆ ಇನ್ನೂ ಮುಂದುವರಿದಿದೆ ಎಂದು ಡಿಸಿಪಿ ಕ್ರೈಂ ಬ್ರಾಂಚ್ ರಾಜ್ ತಿಲಕ್ ರೋಷನ್ ತಿಳಿಸಿದ್ದಾರೆ. 

ಮಲೈಕಾ ಅವರ ತಂದೆ ಇಂದು ಬೆಳಿಗ್ಗೆ ನಿಧನರಾದರು ನಿಜ. ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೊಂದು ಅಪಘಾತ. ಆತನಿಗೆ ಯಾವುದೇ ಕಾಯಿಲೆ ಅಥವಾ ಅಂತಹದ್ದೇನೂ ಇರಲಿಲ್ಲವಾದ್ದರಿಂದ ಎಲ್ಲರೂ ಶಾಕ್ ಆಗಿದ್ದಾರೆ ಎಂದು ಮೂಲವೊಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅನಿಲ್​ ಅರೋರಾ ಅವರ ಸಾವಿನ ಸುದ್ದಿ ಬೆಳಗ್ಗೆ 9 ಗಂಟೆಗೆ ಬಹಿರಂಗವಾಹಿತು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಭವಿಸಿದಾಗಿ ನಟಿ ಮಲೈಕಾ ಅರೋರಾ ಮುಂಬೈನಲ್ಲಿ ಇರಲಿಲ್ಲ. ವಿಷಯ ತಿಳಿದ ಬಳಿಕ ಪುಣೆಯಿಂದ ಮುಂಬೈಗೆ ಬಂದರು ಎಂದು ಎನ್ನಲಾಗಿದೆ. (ಏಜೆನ್ಸೀಸ್​​)

ಬೃಂದಾವನ ಸಿರಿಯಲ್​ ನಟ ವರುಣ್​​​ ಆರಾಧ್ಯ ವಿರುದ್ಧ FIR; ಕಾರಣ ಹೀಗಿದೆ…

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…