ನದಿ ಕೆಳಗೆ ಮುಂಬೈ ಮೆಟ್ರೋ ಮಾರ್ಗ!

ಮುಂಬೈ: ನದಿಯ ಕೆಳಗೆ ರೈಲು ಮಾರ್ಗ ನಿರ್ವಿುಸಲು ಮುಂಬೈ ಮೆಟ್ರೋ ರೈಲು ನಿಗಮ ಯೋಜನೆ ರೂಪಿಸಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಸುಮಾರು 170 ಮೀಟರ್ ಉದ್ದದ ಮೆಟ್ರೋ ಹಳಿ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ. ಮುಂಬೈ ಮೆಟ್ರೋದಲ್ಲಿ ಮೊದಲ ಬಾರಿಗೆ ಇಂಥ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ಸವಾಲಿನ ಕೆಲಸ: ನದಿ ಕೆಳಗೆ 170 ಮೀಟರ್ ಉದ್ದದ ಸುರಂಗ ಮಾರ್ಗ ಕೊರೆಯುವುದು ಸವಾಲಾಗಿದೆ. ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆಯಿದೆ. ಪ್ರಸ್ತುತ ನ್ಯೂ ಆಸ್ಟ್ರೇನ್ ಟೆಕ್ನಾಲಜಿ ಮೆಥೆಡ್ (ಎನ್​ಎಟಿಎಂ) ಮೂಲಕ ಸುರಂಗದ ಕಾಮಗಾರಿ ಆರಂಭಿಸಲಾಗಿದೆ. ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ ನಿರ್ವಿುಸಲಾಗುತ್ತದೆ. ನದಿ ನೀರಿನ ಒತ್ತಡ ಒಂದು ಸವಾಲಾದರೆ, ಇಲ್ಲಿರುವ ಬಂಡೆಗಳು ದುರ್ಬಲವಾಗಿರುವುದು ಮಳೆಗಾಲದಲ್ಲಿ ನದಿ ನೀರು ಪ್ರಮಾಣ ಹೆಚ್ಚಿದರೆ ಕೆಸರು ಮತ್ತು ನೀರು ಸುರಂಗದ ಒಳನುಸುಳದಂತೆ ಇಂಜಿನಿಯರಿಂಗ್ ವ್ಯವಸ್ಥೆ ಮಾಡುವುದು ಮತ್ತೊಂದು ಸವಾಲಾಗಿದೆ ಎಂದು ಎಂಎಂಆರ್​ಸಿ ಯೋಜನಾ ನಿರ್ದೇಶಕ ಎಸ್.ಕೆ.ಗುಪ್ತಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *