More

    ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಹರ್ಮಾನ್‌ಪ್ರೀತ್ ಫಿಟ್: ಹೊರಬಿದ್ದ ಕನ್ನಡತಿ

    ಬೆಂಗಳೂರು: ಯುಪಿ ವಾರಿಯರ್ಸ್‌ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯದಲ್ಲಿ ಕಣ್ಕಕಿಳಿಯಲಿದ್ದಾರೆ ಎಂದು ಮುಂಬೈ ಕೋಚ್ ಚಾರ್ಲೋಡ್ ಎಡ್ವರ್ಡ್ಸ್ ತಿಳಿಸಿದ್ದಾರೆ. ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಯುಪಿ ವಾರಿಯರ್ಸ್‌ ವಿರುದ್ಧ ಆಡದ ಹರ್ಮಾನ್‌ಪ್ರೀತ್ ಸಂಪೂರ್ಣ ಫಿಟ್ ಆಗಿದ್ದಾರೆ.

    ಹಾಲಿ ಚಾಂಪಿಯನ್ ಮಂಬೈ ಪರ ಹರ್ಮಾನ್‌ಪ್ರೀತ್ ಕೌರ್ ಹಾಲಿ ಟೂರ್ನಿಲ್ಲಿ ಆಡಿರುವ 2 ಪಂದ್ಯಗಳಲ್ಲಿ 101 ರನ್‌ಗಳಿಸಿದ್ದು, ಇದರಲ್ಲಿ ಅರ್ಧಶತಕ ಸಹ ಸೇರಿದೆ. ಇವರ ಅನುಪಸ್ಥಿತಿಯಲ್ಲಿ ನ್ಯಾಟ್ ಸೀವರ್ ಬ್ರಂಟ್ ತಂಡವನ್ನು ಮುನ್ನಡೆಸಿದ್ದರು. ಮುಂಬೈ 7 ವಿಕೆಟ್‌ಗಳಿಂದ ಆವೃತ್ತಿಯ ಮೊದಲ ಸೋಲುಂಡಿತ್ತು. ಅನುಭವಿ ವೇಗಿ ಶಬ್ನಮ್ ಇಸ್ಮಾಯಿಲ್ ಸಹ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಆರ್‌ಸಿಬಿ ವಿರುದ್ಧ ಆಡುವುದು ಅನುಮಾನ ಎನಿಸಿದೆ.

    ವೃಂದಾ ಟೂರ್ನಿಯಿಂದ ಔಟ್: ಬುಧವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದ ಯುಪಿ ವಾರಿಯರ್ಸ್‌ ತಂಡದ ಆರಂಭಿಕ ಬ್ಯಾಟರ್ ಕನ್ನಡತಿ ವೃಂದಾ ದಿನೇಶ್ ಹಾಲಿ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಮುಂಬೈ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಬೌಂಡರಿ ಬಳಿ ಚೆಂಡನ್ನು ನಿಲ್ಲಿಸಲು ಯತ್ನಿಸುತ್ತಿದ್ದಾಗ ಬಲ ಭುಜಕ್ಕೆ ಪೆಟ್ಟು ತಿಂದಿದ್ದ ವೃಂದಾ, ಬಳಿಕ ಸ್ಕಾೃನಿಂಗ್‌ಗೆ ಒಳಪಟ್ಟಿದ್ದು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಮಿನಿ ಹರಾಜು ಪ್ರಕ್ರಿಯೆಯಲ್ಲಿ ₹1. 3 ಕೋಟಿ ನೀಡಿ ಯುಪಿ ತಂಡ ಖರೀದಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts