‘ರನ್​ ಮಷಿನ್​’ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು! ಈ 3 ಕಾರಣಗಳ ಹಿಂದೆ ಕ್ಯಾಪ್ಟನ್ ಹಾರ್ದಿಕ್​ ಓಟ

ನವದೆಹಲಿ: ಐಪಿಎಲ್​ 2025ರ ಮೆಗಾ ಆಕ್ಷನ್​ ಪ್ರಕ್ರಿಯೆಗೆ ಇನ್ನೇನು ಕೆಲವೇ ತಿಂಗಳಷ್ಟೇ ಬಾಕಿ ಉಳಿದಿದ್ದು, ಇಂಡಿಯನ್​ ಪ್ರೀಮಿಯರ್​ ಲೀಗ್​ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಮ್ಮ ತಂಡದಿಂದ ಕೈಬಿಡಬೇಕು, ಯಾರನ್ನು ಉಳಿಸಿಕೊಳ್ಳಬೇಕು ಜತೆಗೆ ಯಾರೊಬ್ಬ ಸ್ಟಾರ್​ ಆಟಗಾರರನ್ನು ಆಕ್ಷನ್​ನಲ್ಲಿ ಖರೀದಿಸಬೇಕು ಎಂಬ ಲೆಕ್ಕಾಚಾರಗಳನ್ನು ಬಹಳ ಜೋರಾಗಿ ನಡೆಸುತ್ತಿರುವುದು ಇದೀಗ ಮುನ್ನೆಲೆಗೆ ಬಂದಿದೆ. ಒಂದೆಡೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮ ಉಳಿಯುವುದು ಬಹುತೇಕ ಡೌಟ್ ಎಂದಾದರೆ, ಅತ್ತ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಕ್ಯಾಪ್ಟನ್ ಫಾಫ್​ ಡು ಪ್ಲೆಸಿಸ್​ರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ನನ್ನ ದೇಹದ ಬಗ್ಗೆ ಮೊದಲೇ ಗೊತ್ತಿರಲಿಲ್ಲವೇ? ಬೇಡ ಎನ್ನಲು ಇಂಥಾ ನೀಚ ಕಾರಣ ಕೊಡಬೇಕಿತ್ತಾ? ಕಸ್ತೂರಿ ಆಕ್ರೋಶ

ಸ್ಟಾರ್​ ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಸದ್ಯ ಆಯಾ ಫ್ರಾಂಚೈಸಿಗಳ ನಿರ್ಧಾರವಾದ ಕಾರಣ ಇಲ್ಲಿ ಯಾವುದನ್ನು ನಿಖರವಾಗಿ ಹೇಳುವುದು ಕಷ್ಟಸಾಧ್ಯ. ಆದ್ರೆ, ಕಳೆದ ಬಾರಿ ರೋಹಿತ್​ ಶರ್ಮರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ತಾನು ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಕ್ಯಾಪ್ಟನ್ ಆದ ಹಾರ್ದಿಕ್ ಪಾಂಡ್ಯ, ಎಂಐ ನಾಯಕನಾಗಿ ಆಡಿದ ಮೊದಲ ಸೀಸನ್​ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಮುಗ್ಗರಿಸಿದರು. ವ್ಯಾಪಕ ಛೀಮಾರಿ, ಟೀಕೆಗಳ ನಡುವೆಯೂ ತನ್ನ ಸ್ಥಾನ ಕಳೆದುಕೊಳ್ಳದ ಹಾರ್ದಿಕ್​, ಇದೀಗ 2025ರ ಐಪಿಎಲ್​ ಆವೃತ್ತಿಯಲ್ಲಿ ಮುಂಬೈಗೆ ಗೆಲುವನ್ನು ತಂದುಕೊಡಲು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್​ಮನ್​, ಫೀಲ್ಡರ್​ ಆಗಿರುವ ವಿರಾಟ್​ ಕೊಹ್ಲಿ, 2008ರಿಂದ ಪ್ರಾರಂಭವಾದ ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರವೇ ಆಡಿದ್ದಾರೆ ಹೊರತು ಇನ್ಯಾವ ಟೀಮ್​ಗೂ ಆಡಿಲ್ಲ ಎಂಬುದೇ ವಿಶೇಷ. 2008ರಿಂದ 2024ರವರೆಗೂ ಒಂದೇ ಫ್ರಾಂಚೈಸಿ ಪರ ಮೈದಾನಕ್ಕಿಳಿದಿರುವ ವಿರಾಟ್​ ಆರ್​ಸಿಬಿ ಫ್ರಾಂಚೈಸಿಯೊಂದಿಗೆ ವಿಶೇಷ ಸಂಬಂಧ, ಅನುಬಂಧ ಹೊಂದಿದ್ದಾರೆ. ಸದ್ಯ ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ರನ್​ ಮಷಿನ್​ರನ್ನು ಕರೆತರಲು ಹಾರ್ದಿಕ್​ ಎದುರುನೋಡುತ್ತಿದ್ದು, ಈ ಮೂರು ವಿಷಯಗಳೇ ಅದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮೀಸಲಾತಿ ವಿರೋಧಿ; ಸಂಸದ ರಮೇಶ ಜಿಗಜಿಣಗಿ ಹೇಳಿಕೆ

ಆಕ್ರಮಣಕಾರಿ, ಪಂದ್ಯಕ್ಕೆ ಕಿಚ್ಚು ಹೆಚ್ಚಿಸುವ ಆಟ:

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಮೈದಾನಕ್ಕೆ ಕೊಹ್ಲಿ ಎಂಟ್ರಿ ಕೊಡುತ್ತಿದ್ದಾರೆ ಎಂದರೆ ಅಲ್ಲಿ ‘ವಿರಾಟ ರೂಪ’ ಇದ್ದೇ ಇರುತ್ತದೆ. ತಂಡ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ ಅದ್ಯಾವುದು ‘ರನ್​ ಮಷಿನ್’​ಗೆ ಲೆಕ್ಕಕ್ಕಿಲ್ಲ. ತಮ್ಮ ದಾಟಿಯಲ್ಲೇ ಪಂದ್ಯವನ್ನಾಡುವ ವಿರಾಟ್ ಕೊಹ್ಲಿ, ಅಬ್ಬರದ ಬ್ಯಾಟಿಂಗ್, ಫೀಲ್ಡಿಂಗ್ ಜತೆ ಜತೆಯಲ್ಲೇ ಎದುರಾಳಿಗಳಲ್ಲಿ ಕಿಚ್ಚು ಹಚ್ಚಿಸುತ್ತಾರೆ. ಮೈದಾನದಲ್ಲಿ ಸೇರಿರುವ ಅಭಿಮಾನಿಗಳಿಗೂ ತಮ್ಮ ಕಿಚ್ಚನ್ನು ಹಬ್ಬಿಸುವ ವಿರಾಟ್​, ಸ್ಟೇಡಿಯಂನಲ್ಲಿರುವ ಫ್ಯಾನ್ಸ್​ಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಾರೆ.

ಫಿಟ್​ ಅಂಡ್​ ಫೈನ್​:

ಈ ಹಿಂದೆ ಟೀಮ್ ಇಂಡಿಯಾ ಹಾಗೂ ಆರ್​ಸಿಬಿ ತಂಡವನ್ನು ಕ್ಯಾಪ್ಟನ್​ ಆಗಿ ಮುನ್ನಡೆಸಿರುವ ವಿರಾಟ್​ ಕೊಹ್ಲಿ, ಅದ್ಭುತ ಫಿಟ್ನೆಸ್​ ಹೊಂದಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್​ ಆಗಿ ಬರುವುದರಿಂದ ಹಿಡಿದು ಫೀಲ್ಡಿಂಗ್ ಕೂಡ ಅದ್ಭುತವಾಗಿ ನಿಭಾಯಿಸುತ್ತಾರೆ. ಮಿಂಚಿನ ಓಟ, ವೇಗದ ಎಸೆತ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತಂಡದ ಪ್ರದರ್ಶನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡುತ್ತದೆ. ಪ್ರಾಯಶಃ ಇದು ಮುಂಬೈಗೆ ಪ್ಲಸ್​ ಪಾಯಿಂಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

ಅಪಾರ ಸಂಖ್ಯೆಯ ಅಭಿಮಾನಿ ಬಳಗ:

ಕ್ರಿಕೆಟ್​ ಪ್ರದರ್ಶನ ಎಂಬುದನ್ನು ಹೊರತುಪಡಿಸಿ ನೋಡುವುದಾದರೆ, ಅಪಾರ ಸಂಖ್ಯೆಯ ಅಭಿಮಾನಿಗಳ ಅಗಾಧ ಪ್ರೀತಿಯನ್ನು ಸಂಪಾದಿಸಿರುವ ವಿರಾಟ್​, ಮಾರುಕಟ್ಟೆಯಲ್ಲಿ ಒಂದೊಳ್ಳೆ ಟ್ರೆಂಡ್​ ಸೆಟ್​ ಮಾಡಿದ್ದಾರೆ. ಬ್ರ್ಯಾಂಡ್​ಗಳಿಗೆ ಬ್ರ್ಯಾಂಡ್​ ಆಗಿರುವ ವಿರಾಟ್​ ಹೆಸರು ಮುಂಬೈ ಇಂಡಿಯನ್ಸ್​ನ ಮಾರ್ಕೆಟ್ ಮೌಲ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಸದ್ಯ ಈ ಮೂರು ಅಂಶಗಳು ವಿರಾಟ್​ರನ್ನು ಎಂಐಗೆ ಕರೆತರಲು ಪ್ರಮುಖ ಕಾರಣವಾಗಿ ಮಾರ್ಪಟ್ಟಿದೆ,(ಏಜೆನ್ಸೀಸ್).

ಒಂದು ಕಾಲದಲ್ಲಿ ವಿಶ್ವದ ನಂ.1 ಬೌಲರ್​ ಆಗಿದ್ದ ಈತ ಇಂದು ಮ್ಯಾನೇಜರ್​ ಆಗಿ ಕೆಲಸ! ಯಾರು ಗೊತ್ತಾ?

ಶೋಕಿ ಚೆನ್ನಾಗಿದೆ ಆದ್ರೆ… ಸನ್​ಗ್ಲಾಸ್​ ಧರಿಸಿ ಬ್ಯಾಟಿಂಗ್ ಮಾಡಿದ ಅಯ್ಯರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ