ರೂ. 55 ಲಕ್ಷದ ಮದ್ಯ ವಶ

ಹುಮನಾಬಾದ್: ಮುಂಬಯಿನಿಂದ ಹೈದರಾಬಾದ್ಗೆ ಕಂಟೇನರ್ನಲ್ಲಿ ಅಕ್ರಮವಾಗಿ 55 ಲಕ್ಷ ರೂ. ಮೌಲ್ಯದ ಮದ್ಯವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊಳಕೇರಾ ಬಳಿ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿದ್ದಾರೆ. ಎಂಕೆಜಿಎನ್ ಧಾಬಾ ಹತ್ತಿರ ಅನುಮತಿ ಇಲ್ಲದೆ ಸಾಗಿಸುತ್ತಿದ್ದ 27 ಮಾದರಿಯ 423 ಪೆಟ್ಟಿಗೆಗಳಲ್ಲಿ ಮದ್ಯ ಮತ್ತು ವೈನ್ ಹೊಂದಿದ ಕಂಟೇನರ್ಪರಿಶೀಲಿಸಿದಾಗ ಸಿಕ್ಕಿದೆ.

ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ, ಉಪ ಆಯುಕ್ತ ಬಿ.ಶಿವಪ್ರಸಾದ ಮಾರ್ಗದರ್ಶನದಲ್ಲಿ ವಲಯ ನಿರೀಕ್ಷಕ ಕೇದಾರನಾಥ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿ ಮುಕೇಶಕುಮಾರ ತಾನಾಜಿ ಎಂಬಾತನನ್ನು ಬಂಧಿಸಿದ್ದಾರೆ. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ