23.2 C
Bangalore
Saturday, December 14, 2019

ಇಂದಿನಿಂದ ರಣಜಿ ಬಲಿಷ್ಠರ ಮುಖಾಮುಖಿ

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ದೇಶೀಯ ಕ್ರಿಕೆಟ್​ನ ಅಗ್ರ ಟೂರ್ನಿ ರಣಜಿ ಟ್ರೋಫಿಯನ್ನು ಗರಿಷ್ಠ ಬಾರಿ ಗೆದ್ದ ಮೊದಲೆರಡು ತಂಡಗಳಾಗಿರುವ 41 ಬಾರಿಯ ಚಾಂಪಿಯನ್ ಮುಂಬೈ ಹಾಗೂ 8 ಬಾರಿಯ ಚಾಂಪಿಯನ್ ಕರ್ನಾಟಕ, ಮಂಗಳವಾರ ಆರಂಭವಾಗಲಿರುವ 2018-19ರ ಸಾಲಿನ 3ನೇ ಸುತ್ತಿನ ಮುಖಾಮುಖಿಯಲ್ಲಿ ಎದುರಾಗಲಿವೆ. ಎರಡೂ ತಂಡಗಳಲ್ಲೂ ಘಟಾನುಘಟಿ ಆಟಗಾರರ ಅನುಪಸ್ಥಿತಿ ಕಾಡಿದ್ದು, ಯುವ ಆಟಗಾರರ ಹೆಗಲ ಮೇಲೆ ಹೈವೋಲ್ಟೇಜ್ ಮುಖಾಮುಖಿಯ ಭಾರವಿದೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಡ್ರಾ ಫಲಿತಾಂಶ ಕಂಡಿದ್ದು, ಗೆಲುವಿನ ಖಾತೆ ತೆರೆಯುವ ಉದ್ದೇಶದೊಂದಿಗೆ ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ಕಣಕ್ಕಿಳಿಯಲಿವೆ.

ರಾಜ್ಯ ತಂಡದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಷ್ ಪಾಂಡೆ, ಆರ್.ಸಮರ್ಥ್ ಹಾಗೂ ಕೆ.ಗೌತಮ್ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಎ ತಂಡಗಳ ಪರ ಆಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮುಂಬೈ ತಂಡ ಕೂಡ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಪೃಥ್ವಿ ಷಾ, ಶಾರ್ದೂಲ್ ಠಾಕೂರ್ ಹಾಗೂ ಶ್ರೇಯಸ್ ಅಯ್ಯರ್ ಸೇವೆಯನ್ನು ಕಳೆದುಕೊಂಡಿದೆ. ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ಎದ್ದು ಕಾಡುತ್ತಿದೆ. ಹಿರಿಯ ಆಟಗಾರರಿದ್ದರೂ, ವಿಶೇಷವಾಗಿ ಈ ಪಂದ್ಯದಲ್ಲಿ ಯುವ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಿದೆ. ಮೇಲ್ನೋಟಕ್ಕೆ ಕರ್ನಾಟಕಕ್ಕೆ ಇದರಿಂದ ಹೆಚ್ಚಿನ ಹಿನ್ನಡೆಯಾಗುವ ಸಾಧ್ಯತೆ ಇದೆ. ಕೆವಿ ಸಿದ್ಧಾರ್ಥ್, ಕೌನೇನ್ ಅಬ್ಬಾಸ್, ಲಿಯಾನ್ ಖಾನ್​ರಂಥ ಉತ್ತಮ ಬ್ಯಾಟ್ಸ್​ಮನ್​ಗಳು ತಂಡದಲ್ಲಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್​ನ ಅನುಭವ ಕಡಿಮೆ. ಆದರೆ, ಸಿಕ್ಕ ಅವಕಾಶದಲ್ಲಿ ಗಮನಸೆಳೆಯುವ ಉತ್ಸಾಹ ಇವರಲ್ಲಿದೆ. ವಿನಯ್ ಕುಮಾರ್ ನೇತೃತ್ವದಲ್ಲಿ ಅನುಭವಿ ಬೌಲಿಂಗ್ ವಿಭಾಗ ತಂಡದಲ್ಲಿದ್ದು, ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿದೆ. ಅನುಭವಿಗಳನ್ನು ಕಳೆದುಕೊಂಡಿದ್ದರೂ, ಮುಂಬೈ ತಂಡಕ್ಕೆ ಧವಳ್ ಕುಲಕರ್ಣಿ, ಸೂರ್ಯಕುಮಾರ್ , ಸಿದ್ಧೇಶ್ ಲಾಡ್ ಅವರ ಬಲವಿದೆ.

ಬ್ಯಾಟಿಂಗ್ ಸ್ನೇಹಿ ಪಿಚ್

ಬೆಳಗಾವಿಯ ಕೆಎಸ್​ಸಿಎ ಮೈದಾನ ಬ್ಯಾಟಿಂಗ್ ಪಿಚ್. ಹಿಂದಿನ ರಣಜಿ ಪಂದ್ಯಗಳನ್ನು ಅವಲೋಕಿಸಿದರೆ, ಇಲ್ಲಿ ಪ್ರತಿ ತಂಡ ಸರಾಸರಿ 400 ರನ್ ಪ್ಲಸ್ ಮೊತ್ತ ಗಳಿಸುತ್ತಲೇ ಬಂದಿದೆ. ಆತಿಥೇಯ ತಂಡ ಬೌಲಿಂಗ್​ನಲ್ಲಿ ಬಲಿಷ್ಠವಾಗಿರುವ ಕಾರಣ ಎದುರಾಳಿ ಪಡೆಯ ರನ್​ವೇಗಕ್ಕೆ ಆರಂಭದಲ್ಲೇ ಬ್ರೇಕ್ ಹಾಕಬೇಕಿದೆ. ಆದರೆ, ಟೂರ್ನಿ ಮುನ್ನಾದಿನವಾದ ಸೋಮವಾರ ಮಳೆ ಸುರಿದಿರುವ ಕಾರಣ ಈ ಬಾರಿ ಪಿಚ್ ಆರಂಭದಲ್ಲಿ ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಸೋಮವಾರ ಮಧ್ಯಾಹ್ನದ ನಂತರ ಜಿಟಿಜಿಟಿ ಮಳೆ ಸುರಿದ ಕಾರಣ ಪಿಚ್ ಹಸಿಯಾಗದಂತೆ ತಡೆಯಲು ಕವರ್ಸ್ ಅಳವಡಿಸಲಾಗಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಚಂಡಮಾರುತದ ಪರಿಣಾಮವಾಗಿ ಬೆಳಗಾವಿ ನಗರದಲ್ಲಿ ಭಾನುವಾರವಷ್ಟೇ ಅಲ್ಲದೆ, ಸೋಮವಾರವೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಕೆಲಕಾಲ ಜಿಟಿಜಿಟಿ ಮಳೆ ಸುರಿಯಿತು. ಆದರೆ, ಸಂಜೆಯ ಹೊತ್ತಿಗೆ ವರುಣ ಬ್ರೇಕ್ ಕೊಟ್ಟಿದ್ದು, ಸಂಘಟಕರು ತುಸು ನಿರಾಳರಾಗಿದ್ದಾರೆ. ಆದರೂ ಯಾವುದೇ ಕ್ಷಣದಲ್ಲಿ ವರುಣ ಅಬ್ಬರಿಸುವ ಸಾಧ್ಯತೆ ಇದ್ದು, ಮಳೆಯಿಂದಾಗಿ ಉಂಟಾಗುವ ಅಡ್ಡಿಗಳನ್ನು ನೀಗಿಸಲು ಕೆಎಸ್​ಸಿಎ ಅಗತ್ಯ ಕ್ರಮತೆಗೆದುಕೊಂಡಿದೆ.

ರಣಜಿ ಆಡದಂತೆ ಅಶ್ವಿನ್, ಇಶಾಂತ್​ಗೆ ಸೂಚನೆ

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ವೇಗಿ ಇಶಾಂತ್ ಶರ್ಮಗೆ ರಣಜಿ ಟ್ರೋಫಿಯಲ್ಲಿ ಆಡದಂತೆ ಬಿಸಿಸಿಐ ಸೂಚನೆ ರವಾನಿಸಿದೆ. ಮಂಗಳವಾರ ಆರಂಭವಾಗಲಿರುವ 3ನೇ ಸುತ್ತಿನ ರಣಜಿ ಪಂದ್ಯಗಳಲ್ಲಿ ಅಶ್ವಿನ್ ಮತ್ತು ಇಶಾಂತ್​ರನ್ನು ಕಣಕ್ಕಿಳಿಸದಂತೆ ತಮಿಳುನಾಡು ಮತ್ತು ದೆಹಲಿ ತಂಡಗಳಿಗೆ ಬಿಸಿಸಿಐ ಸೂಚಿಸಿದೆ. ಈ ಪಂದ್ಯಗಳು ನ. 23ರಂದು ಕೊನೆಗೊಳ್ಳಲಿದ್ದರೆ, ಈ ಆಟಗಾರರು ನ. 24ರಂದು ಆಸೀಸ್​ಗೆ ಪ್ರಯಾಣಿಸಬೇಕಿದೆ. ಹೀಗಾಗಿ ಪ್ರವಾಸಕ್ಕೆ ಮುನ್ನ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕೆ ಬಿಸಿಸಿಐ ಸೂಚನೆ ನೀಡಿದೆ. ಟೆಸ್ಟ್ ತಂಡದ ಭಾಗವಾಗಿರುವ ಮತ್ತೋರ್ವ ವೇಗಿ ಮೊಹಮದ್ ಶಮಿಗೆ ಮಾತ್ರ ಬಂಗಾಳ ಪರ ಆಡಲು ಅನುಮತಿ ನೀಡಿದ್ದರೂ, ದಿನಕ್ಕೆ ಗರಿಷ್ಠ 15 ಓವರ್ ಮಾತ್ರ ಎಸೆಯಬೇಕೆಂಬ ಷರತ್ತು ಹಾಕಲಾಗಿದೆ.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...