ಕರೊನಾದಿಂದ ತಪ್ಪಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕರು ಕಷಾಯ, ಆರೋಗ್ಯಕರ ಜ್ಯೂಸ್ಗಳ ಮೊರೆ ಹೋಗಿದ್ದಾರೆ. ಆಹಾರ ವಿಧಾನದಲ್ಲೂ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡಿದ್ದಾರೆ.
ಆದರೆ ಲಂಡನ್ನ ಈ ಮಹಿಳೆ ಕರೊನಾದಿಂದ ಪಾರಾಗಲು, ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳಲು ಒಂದು ವಿಭಿನ್ನ ಮಾರ್ಗ ಕಂಡುಕೊಂಡಿದ್ದಾರೆ.
ಟ್ರೇಸಿ ಕಿಸ್ (32) ಇಬ್ಬರು ಮಕ್ಕಳ ತಾಯಿ ಹೀಗೊಂದು ಪ್ರಯೋಗ ಮಾಡುತ್ತಿದ್ದಾರೆ. ಒಂದು ವಿಚಿತ್ರ ಸ್ಮೂದಿಯನ್ನು ವಾರಕ್ಕೆ ಮೂರು ಬಾರಿ ಒಂದು ಗ್ಲಾಸ್ಗಳಷ್ಟನ್ನು ಕುಡಿಯುತ್ತಿದ್ದಾರೆ..!
ಮತ್ತೇನಲ್ಲ ಈಕೆ ಕುಡಯುತ್ತಿರುವುದು ಆಕೆಯ ಸ್ನೇಹಿತನ ವೀರ್ಯದ ಸ್ಮೂದಿ..! ಯೆಸ್..ಇದು ಸ್ವಲ್ಪ ಅಸಹ್ಯ ಅನ್ನಿಸಿದರೂ ಆಕೆಯೇ ಹೇಳಿಕೊಂಡ ಸತ್ಯ..
ಕಳೆದ ಮೂರು ವರ್ಷಗಳಿಂದ ಒಂದು ದಿನವೂ ನನಗೆ ಜ್ವರವಾಗಲಿ, ಶೀತವಾಗಲಿ ಬಂದಿಲ್ಲ. ಯಾಕೆಂದರೆ ಆಗಿನಿಂದಲೂ ನಾನು ನನ್ನ ಬಾಯ್ಫ್ರೆಂಡ್ನಿಂದ ವೀರ್ಯವನ್ನು ದಾನವಾಗಿ ಪಡೆದು, ಅದರೊಂದಿಗೆ ಬೆರ್ರಿ ಹಣ್ಣುಗಳು, ಬಾಳೆಹಣ್ಣು ಮತ್ತಿತರ ವಿಟಮಿನ್ ಯುಕ್ತ ಹಣ್ಣುಗಳನ್ನು ಸೇರಿಸಿಕೊಂಡು, ಸ್ಮೂದಿ ತಯಾರು ಮಾಡಿಕೊಂಡು ವಾರಕ್ಕೆ ಮೂರು ಬಾರಿ ಕುಡಿಯುತ್ತಿದ್ದೇನೆ ಎಂದು ಟ್ರೇಸಿ ಅವರೇ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ 3.0; ನಾನು ಸ್ನೇಹಿತರನ್ನು ಭೇಟಿಯಾಗಬಹುದೇ? ಮನೆಗೆಲಸದವರು ಬರಬಹುದೇ… ಕೆಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ನಾನು ನನ್ನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ವಿಭಿನ್ನ ಮಾರ್ಗ ಕಂಡುಕೊಂಡಿದ್ದೇನೆ. ಇದಕ್ಕೆ ಯಾವುದೇ ಖರ್ಚು ಕೂಡ ಇಲ್ಲ. ರಾಸಾಯನಿಕ ಕೂಡ ಇಲ್ಲ. ಎಲ್ಲ ಸಲವೂ ಔಷಧಿಗಳ ಮೇಲೆಯೇ ಅವಲಂಬಿತರಾಗುವುದಕ್ಕಿಂತ ಇಂತಹ ಪೌಷ್ಟಿಕಗಳನ್ನು ಪಡೆಯುವುದು ಒಳಿತು ಎನ್ನಿಸಿತು ಎಂದಿದ್ದಾರೆ.
ನಾನಿನ್ನೂ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಿ. ನನಗೆ ಜಾಸ್ತಿ ನ್ಯೂಟ್ರಿಷಿಯನ್ ಬೇಕು. ಹಾಗಾಗಿಯೇ ಈ ವೀರ್ಯದ ಸ್ಮೂದಿ ಕುಡಿಯುತ್ತಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ನಾನು 2017ರಿಂದಲೂ ಕುಡಿಯುತ್ತಿದ್ದೇನೆ. ಅಂದಿನಿಂದಲೂ ಒಂದಿನವೂ ಜ್ವರ, ಶೀತದಂತಹ ಯಾವುದೇ ಸಣ್ಣ ಕಾಯಿಲೆಯೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ವೀರ್ಯದಿಂದ ತಮ್ಮ ಫೇಸ್ಪ್ಯಾಕ್ ಮಾಡಿಕೊಳ್ಳುತ್ತಿದ್ದು, ಚರ್ಮದ ಹೊಳಪು ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸ್ಮೂದಿ ಸೇವಿಸಲು ಚೆನ್ನಾಗಿಯೇ ಇರುತ್ತದೆ. ನಾನಿದನ್ನು ಜೋಕ್ಗೆ ಹೇಳುತ್ತಿದ್ದೇನೆ ಎಂದು ಕೆಲವರು ಭಾವಿಸಬಹುದು. ಆದರೆ ಖಂಡಿತ ತಮಾಷೆ ಅಲ್ಲ. ನಾನು ಕಂಡುಕೊಂಡಿದ್ದು ನೈಸರ್ಗಿಕ ವಿಧಾನ. ನನ್ನ ಆರೋಗ್ಯದಲ್ಲಿ ಆದ ಬದಲಾವಣೆಯನ್ನು ಗುರುತಿಸಿಕೊಂಡಿದ್ದೇನೆ. ಸದ್ಯ ಕರೊನಾ ವೈರಸ್ ವಿರುದ್ಧ ಹೋರಾಟಕ್ಕೂ ಇದು ಖಂಡಿತ ಸಹಕಾರಿಯಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಲಗಿದ್ದ ಮನೆಯೊಡೆಯನ ಮುಖದ ಮೇಲೆ ಹೊಡೆದ ಬೆಕ್ಕು…; ಆತ ಎಚ್ಚರಗೊಳ್ಳದೆ ಇದ್ದರೆ ಅವನ ಇಡೀ ಕುಟುಂಬ ಸಾಯುತ್ತಿತ್ತು..!
ಅಷ್ಟೇ ಅಲ್ಲದೆ, ನಾನು ನನ್ನ ಸ್ನೇಹಿತನಿಂದ ಈ ವೀರ್ಯವನ್ನು ಪಡೆಯುತ್ತಿದ್ದೇನೆ. ಸ್ಮೂದಿ ತಯಾರು ಮಾಡಬೇಕೆಂದರೆ ನಾವು ಪಡೆಯುವ ವೀರ್ಯ ಆರೋಗ್ಯಕರವಾಗಿರಬೇಕು. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಆದರೆ ಈ ಮಹಿಳೆ ಹೇಳಿದ ಸ್ಮೂದಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಪರಿಶೀಲನೆಗೆ ಒಳಪಟ್ಟಿದ್ದಲ್ಲ. ಅದರಿಂದ ಇಮ್ಯುನಿಟಿ ಪವರ್ ಹೆಚ್ಚುತ್ತದೆಯೋ, ಇಲ್ಲವೋ ಎಂಬುದೂ ಸಾಬೀತಾಗಿಲ್ಲ. ಇದು ಈ ತಾಯಿ ಕಂಡುಕೊಂಡ ಸ್ವಂತ ಮಾರ್ಗವಷ್ಟೇ..! (ಏಜೆನ್ಸೀಸ್)