18 C
Bangalore
Friday, December 6, 2019

ಮುಕ್ತಿಹೊಳೆಗೆ ಸಂಕವೇ ಹೆದ್ದಾರಿ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ರಮೇಶ ಹಾರ್ಸಿಮನೆ ಸಿದ್ದಾಪುರ

ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಗಡಿಪ್ರದೇಶದ ಮುಕ್ತಿಹೊಳೆ ದಾಟಲು ಜನರಿಗೆ ಮರದ ಸಂಕವೇ ಹೆದ್ದಾರಿಯಾಗಿದೆ. ಇಲ್ಲಿಯ ಜನ ಮೂಲ ಸೌಲಭ್ಯದಿಂದ ವಂಚಿತರಾಗಿದ್ದು, ಸಮಸ್ಯೆಗೆ ಯಾವಾಗ ಮುಕ್ತಿ ಎನ್ನುವಂತಾಗಿದೆ.

ಎರಡೂ ತಾಲೂಕಿನ ಗಡಿ ಪ್ರದೇಶದಲ್ಲಿರುವ ಮುಕ್ತಿಹೊಳೆ ದಾಟಲು ಸಮರ್ಪಕ ಸೇತುವೆ ಇಲ್ಲ. ತಾಲೂಕಿನ ತುತ್ತ ತುದಿಯಲ್ಲಿರುವ ಬೋಳುಮನೆ ಹಾಗೂ ಹೊನ್ನಾವರ ತಾಲೂಕಿನ ಹೊಸಗದ್ದೆ, ಹಾಸಳ್ಳಿ, ಕೊಡಗಿ, ದೊಡ್ಡಗದ್ದೆ ಮತ್ತಿತರ ಗ್ರಾಮೀಣ ಪ್ರದೇಶದ ಒಳಹಳ್ಳಿಯ ಜನ ನಿತ್ಯ ಸಂಚಾರಕ್ಕೆ ಸಂಕಟಪಡುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಮುಕ್ತಿಹೊಳೆಗೆ ಮರದ ಸಂಕ ಹಾಕಿದರೆ ಮಾತ್ರ ಇವರ ಸಂಚಾರ.

ಪಡಿತರಕ್ಕಾಗಿ ಪರದಾಟ: ಪ್ರತಿ ತಿಂಗಳು ಹೊಸಗದ್ದೆ- ಹಾಸಳ್ಳಿಯವರು ಹೊನ್ನಾವರ ತಾಲೂಕಿನ ಗೇರುಸೊಪ್ಪ ಹಾಗೂ ಕೊಡಗಿ- ದೊಡ್ಡಗದ್ದೆ ಊರಿನವರು ಗುಂಡಬಾಳ ಸಮೀಪದ ಚಿಕ್ಕನಕೊಡ್ಲುವಿಗೆ ಸಿದ್ದಾಪುರ ತಾಲೂಕಿನ ಬೀರ್ಲಮಕ್ಕಿ ಮೂಲಕ ಪಡಿತರ ಪಡೆಯಲು 75 ರಿಂದ 80 ಕಿ.ಮೀ. ಹೋಗಬೇಕಾಗಿದೆ. ಇಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಮಕ್ಕಳು ಶಿಕ್ಷಣ ಪಡೆಯಬೇಕೆಂದರೆ ಬೇರೆ ಊರಿನಲ್ಲಿ ನೆಂಟರಮನೆ ಅಥವಾ ಹಾಸ್ಟೇಲ್​ನಲ್ಲಿ ಉಳಿದು ವರ್ಷಕ್ಕೆ ಒಂದೆರಡು ಬಾರಿ ಮನೆಗೆ ಬರಬೇಕಾಗಿದೆ. ಕಚೇರಿ ಕೆಲಸ ಹಾಗೂ ಪಡಿತರಕ್ಕೆ ಮಾತ್ರ ಹೊನ್ನಾವರ ತಾಲೂಕು. ತಾವು ಬೆಳೆದ ಭತ್ತ, ಅಡಕೆಯನ್ನೆಲ್ಲ ಸಿದ್ದಾಪುರ ಮಾರುಕಟ್ಟೆಗೆ ತರಬೇಕೆಂದರೂ ಸಮರ್ಪಕ ರಸ್ತೆ ಇಲ್ಲ. ಸೇತುವೆ ಹಾಗೂ ರಸ್ತೆ ನಿರ್ವಿುಸಿಕೊಡುವಂತೆ ಜನ ಆಗ್ರಹಿಸುತ್ತಿದ್ದರೂ ಇವರ ಕೂಗು ಆಡಳಿತ ನಡೆಸುವವರಿಗೆ ಈವರೆಗೂ ಕೇಳಿಲ್ಲ.

ಭರವಸೆ ಮಾತ್ರ:  ಮಾಜಿ ಶಾಸಕ ಮಂಕಾಳ ವೈದ್ಯ ಅವರು ನಮ್ಮೂರಿಗೆ ಬಂದು ನಮ್ಮ ಸಮಸ್ಯೆ ಆಲಿಸಿ ಸೇತುವೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಸೇತುವೆ ನಿರ್ವಣವಾಗಿಲ್ಲ. ಚುನಾವಣೆ ಸಮಯದಲ್ಲಿ ಸಮಸ್ಯೆ ಆಲಿಸುವ ಜನಪ್ರತಿನಿಧಿಗಳು ನಂತರ ಯಾರೂ ಗಮನ ನೀಡುತ್ತಿಲ್ಲ ಎಂಬುದು ಇಲ್ಲಿಯ ಜನರ ದೂರು. ಕೊಡಗಿಯಲ್ಲಿ ಐತಿಹಾಸಿಕ ಶ್ರೀ ಶಂಭುಲಿಂಗೇಶ್ವರ ದೇವಾಲಯವಿದೆ. ಇಲ್ಲಿಗೆ ಹೊನ್ನಾವರ ಹಾಗೂ ಸಿದ್ದಾಪುರ ತಾಲೂಕಿನ ಭಕ್ತರು ಹೋಗುತ್ತಾರೆ. ದೇವಾಲಯದ ಸಮೀಪ ಐತಿಹಾಸಿಕ ಗುಹೆಯಿದೆ. ಇದು ಸಿದ್ದಾಪುರ ತಾಲೂಕಿನ ಬಿಳಗಿ ವ್ಯಾಪ್ತಿಗೆ ಬರುತ್ತದೆ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...